ಸ್ವಾತಿ ಕೊಲೆ ಹಿಂದೆ ಲವ್ ಜಿಹಾದ್ ಆರೋಪ ಸುಳ್ಳು : ಶಾಸಕ ಬಣಕಾರ
ವೀರಮಾರ್ಗ ನ್ಯೂಸ್ : ಹಾವೇರಿ : ಮಾಸೂರಿನ ಸ್ವಾತಿ ಬ್ಯಾಡಗಿ ಕೊಲೆ ಹಿಂದೆ ಲವ್ ಜಿಹಾದ್ ಎಂಬ ಆರೋಪ ಸುಳ್ಳು, ಇದಕ್ಕೆ ಸಾಕ್ಷಿ ಇಲ್ಲ. ಆರೋಪ ಮಾಡುವವರು ಸಾಕ್ಷಿ ಕೊಡುತ್ತಿಲ್ಲ ಆದರೆ, ಈ ಕೃತ್ಯ ಖಂಡನೀಯ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಹಿರೇಕೆರೂರ ಕ್ಷೇತ್ರದ ಶಾಸಕ ಯು.ಬಿ ಬಣಕಾರ ಹೇಳಿದರು.ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರು ಸರಿಯಾಗಿ ತನಿಖೆ ಮಾಡಿದ್ದಾರೆ.ಅಪರಿಚಿತ ಶವ ಸಿಕ್ಕ ನಂತರ ಕಾನೂನು ಪ್ರಕಾರ ಅಂತ್ಯಕ್ರಿಯೆ ಮಾಡಿದ್ದಾರೆ. ಆಕೆಯ ಕುಟುಂಬದವರು ನಾಪತ್ತೆ…