ಪ್ರವೀಣ ಗುರವ ಅವರಿಗೆ ಪಿಎಚ್.ಡಿ ಡಾಕ್ಟರೇಟ್ ಪದವಿ ಪ್ರದಾನ

ಪ್ರವೀಣ ಗುರವ ಅವರಿಗೆ ಪಿಎಚ್.ಡಿ ಡಾಕ್ಟರೇಟ್ ಪದವಿ ಪ್ರದಾನ
ವೀರಮಾರ್ಗ ನ್ಯೂಸ್ ಗದಗ :
ಕನ್ನಡ ವಿಶ್ವವಿದ್ಯಾಲಯ ಹಂಪಿಯ ಹಸ್ತಪ್ರತಿಶಾಸ್ತ್ರ ವಿಭಾಗದ ಮಾರ್ಗದರ್ಶಕ ಡಾ. ಸಣ್ಣವೀರಣ್ಣ ದೊಡ್ಡಮನಿ ಅವರ ಮಾರ್ಗದರ್ಶನದಲ್ಲಿ ಕನ್ನಡ ಸಾಹಿತ್ಯಕ್ಕೆ ರಾಷ್ಟ್ರೋತ್ಥಾನ ಪರಿಷತ್ತಿನ ಕೊಡುಗೆ ಎಂಬ ವಿಷಯದ ಕುರಿತು ಅಧ್ಯಯನ ಕೈಗೊಂಡು ಪಿಎಚ್.ಡಿ ಪದವಿ ಪಡೆದುಕೊಂಡಿರುವುದು ಬಬಲೇಶ್ವರ ತಾಲೂಕಿಗೆ ಹೆಮ್ಮೆಯ ಸಂಗತಿಯಾಗಿದೆ.
ಪ್ರವೀಣ ಗುರವ ಅವರು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಹೊಳೆ ಹಂಗರಗಿ ಗ್ರಾಮದ ಬಡ ರೈತ ಕುಟುಂಬದ ಸಿದ್ದಪ್ಪ ಗುರವ ಹಾಗೂ ಸುನಂದಾ ಗುರವ ದಂಪತಿಗಳ ಮಗನಾಗಿದ್ದು ಮಹಾರಾಷ್ಟ್ರದ ಸಾಂಗಲಿ ಜಿಲ್ಲೆ ಜತ್ತ ತಾಲೂಕಿನ ಬಾಲಗಾಂವ ಗ್ರಾಮದಲ್ಲಿ ಗಡಿಪ್ರದೇಶದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಹಾಗೂ ಪದವಿ ಪೂರ್ವ ಶಿಕ್ಷಣ ಪಡೆದುಕೊಂಡು ಜೊತೆಗೆ ಜತ್ತನಲ್ಲಿ ಡಿಎಡ್ ಶಿಕ್ಷಕ ತರಬೇತಿ ಶಿಕ್ಷಣವನ್ನು ಪಡೆದುಕೊಂಡು ಮುಂದೆ ವಿಜಯಪುರದ ಎಸ್.ಬಿ. ಆರ್ಟ್ಸ್ ಮತ್ತು ಕೆ.ಸಿ.ಪಿ ಸಾಯನ್ಸ್ ಕಾಲೇಜಿನಲ್ಲಿ ಪದವಿಯನ್ನು ಪ್ರಥಮ ದರ್ಜೆಯಲ್ಲಿ ಪಡೆದುಕೊಂಡು ಹಾಗೂ ಬಸವೇಶ್ವರ ಕಲಾ ಮಹಾವಿದ್ಯಾಲಯ ಬಾಗಲಕೋಟೆಯಲ್ಲಿ ಕನ್ನಡ ಎಂ.ಎ ಸ್ನಾತಕೋತ್ತರ ಪದವಿಯನ್ನು ಪ್ರಥಮ ದರ್ಜೆಯಲ್ಲಿ ಪಡೆದುಕೊಂಡು, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿಯಿಂದ ಃಇಜ ಮುಗಿಸಿಕೊಂಡು ಏಂಖ ಖಿಇಖಿ ಪರೀಕ್ಷೆ ಉತ್ತೀರ್ಣನಾಗಿದ್ದಾರೆ.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಯೋಗ ಅಧ್ಯಯನ ವಿಭಾಗದಿಂದ ಯೋಗ ಡಿಪ್ಲೋಮಾ ಪ್ರಥಮ ದರ್ಜೆಯಲ್ಲಿ ಪಡೆದುಕೊಂಡು, Uಉಅ ಓಇಖಿ ಕಿuಚಿಟiಜಿieಜ ಜಿoಡಿ ಂಜmissioಟಿ ಣo Phಆ ಪರೀಕ್ಷೆ ಎರಡು ಸಲ ಉತ್ತೀರ್ಣ, ಕನ್ನಡ ವಿಶ್ವವಿದ್ಯಾಲಯ ಹಂಪಿಯ ಹಸ್ತಪ್ರತಿಶಾಸ್ತ್ರ ವಿಭಾಗದ ಮಾರ್ಗದರ್ಶಕರು ಡಾ. ಸಣ್ಣವೀರಣ್ಣ ದೊಡ್ಡಮನಿ ಅವರ ಮಾರ್ಗದರ್ಶನದಲ್ಲಿ ಕನ್ನಡ ಸಾಹಿತ್ಯಕ್ಕೆ ರಾಷ್ಟ್ರೋತ್ಥಾನ ಪರಿಷತಿನ ಕೊಡುಗೆ ಎಂಬ ವಿಷಯದ ಕುರಿತು ಅಧ್ಯಯನ ಮಾಡಿ ಪಿಎಚ್.ಡಿ ಪದವಿಯನ್ನು ಪಡೆದುಕೊಂಡಿರುತ್ತಾರೆ. ಪ್ರವೀಣ ಗುರವ ಅವರಿಗೆ ಕನ್ನಡ ವಿಶ್ವವಿದ್ಯಾಲಯವು ಏ ೪ .೨೦೨೫ ರಂದು ಕರ್ನಾಟಕದ ಘನವೆತ್ತ ರಾಜ್ಯಪಾಲ ಥಾವರ್ ಚೆoದ್ ಗೆಹ್ಲೋಟ್ ಅವರಿಂದ ಪಿಎಚ್.ಡಿ ಪದವಿ ಪ್ರದಾನ ಮಾಡಲಾಯಿತು. ಪಿಎಚ್.ಡಿ ಅಧ್ಯಯನಕ್ಕೆ ರಾಷ್ಟ್ರೋತ್ಥಾನ ಸಾಹಿತ್ಯ ವಿಷಯ ಸೂಚಿಸಿ ಮಾರ್ಗದರ್ಶನ ನೀಡಿದ ಮೊದಲ ಮಾರ್ಗದರ್ಶಕ ಡಾ. ಎಚ್.ಎಂ. ಚೆನ್ನಪ್ಪಗೋಳ ಅವರು ಲಿಂಗರಾಜ ಮಹಾವಿದ್ಯಾಲಯ ಬೆಳಗಾವಿಯ ಕನ್ನಡ ವಿಭಾಗದ ಮುಖ್ಯಸ್ಥರು. ಕನ್ನಡ ವಿಶ್ವವಿದ್ಯಾಲಯ ಹಂಪಿ ಹಸ್ತಪ್ರತಿಶಾಸ್ತ್ರ ವಿಭಾಗದ ಮಾರ್ಗದರ್ಶಕರು ಹಾಗೂ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಕಾರ್ಯಕಾರಿ ಸಮಿತಿಯ ಸದಸ್ಯರು, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳಗಾವಿ ವಿಭಾಗದ ಮುಖ್ಯಸ್ಥ ಪ್ರವೀಣ ಗುರವ ಅವರಿಗೆ


ಚಕ್ರವರ್ತಿ ಸೂಲಿಬೆಲೆ ಅವರು, ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ದಿನೇಶ್ ಹೆಗ್ಡೆ ನಾರಾಯಣ ಸರ್, ರಾಷ್ಟ್ರೋತ್ಥಾನ ಸಾಹಿತ್ಯ ಸಂಪಾದಕ ವಿಘ್ನೇಶ್ವರ ಭಟ್, ರಾಷ್ಟ್ರೋತ್ಥಾನ ಪರಿಷತ್ ಆಡಳಿತ ಮಂಡಳಿ ಸದಸ್ಯರು ಹಾಗೂ ರಾಷ್ಟ್ರೋತ್ಥಾನ ಪರಿವಾರದವರೆಲ್ಲರೂ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *