ಸದ್ಗುರು ಶ್ರೀ ಚನ್ನವೃಷಭೇಂದ್ರ ಮಹಾಸ್ವಾಮಿಗಳ 13ನೇ ಜಾತ್ರಾ ಮಹೋತ್ಸವದ
ವೀರಮಾರ್ಗ ನ್ಯೂಸ್ : ಧಾರವಾಡ ಜಿಲ್ಲೆಯ : ಕಲಘಟಗಿ ತಾಲೂಕ : ಅಮೃತ ಹಸ್ತದಿಂದ ಜಾತ್ರಾ ಮಹೋತ್ಸವಕ್ಕೆ ಮೆರುಗು ತಂದ ಶಿವಾನಂದ ಭಾರತಿ ಮಹಾಸ್ವಾಮಿಗಳು – ಬಾಲಯೋಗಿ ಮಾಣಿಕ್ಯ ವೃಷಬೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ.
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸುಕ್ಷೇತ್ರ ಬೆಲವಂತರ ಗ್ರಾಮದಲ್ಲಿ ಸದ್ಗುರು ಶ್ರೀ ಚನ್ನವೃಷಭೇಂದ್ರ ಮಹಾಸ್ವಾಮಿಗಳ 13ನೇ ಜಾತ್ರಾ ಮಹೋತ್ಸವದ ಕೊನೆಯ ದಿನವಾದ ದಿನಾಂಕ 10-05-2026 ರಂದು ರವಿವಾರ ಮುಂಜಾನೆ ಓಂ ನಮಃ ಶಿವಾಯ ಜಪನಾಮ ಯಜ್ಞದೊಂದಿಗೆ ಶ್ರೀಗಳ ಮೂರ್ತಿಗೆ ರುದ್ರಾಭಿಷೇಕ ಜರುಗಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು,ತದನಂತರ ಮಹಾಮಂಗಳೋತ್ಸವ ಹಾಗೂ ಮಹಾಪ್ರಸಾದ ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿತು.
ಈ ಧಾರ್ಮಿಕ ಕಾರ್ಯಕ್ರಮವು
ಶ್ರೀ ಪರಮಪೂಜ್ಯ ಡಾ. ಸದ್ಗುರು ಶಿವಾನಂದ ಭಾರತಿ ಮಹಾಸ್ವಾಮಿಗಳು, ಎಂ ಎ ಸಾಧು ಸಂಸ್ಥಾನಮಠ, ಸುಕ್ಷೇತ್ರ ಇಂಚಲ ಇವರ ಅಮೃತ ಹಸ್ತದಿಂದ ಹಾಗೂ
ಪರಮಪೂಜ್ಯ ಶ್ರೀ ಬಾಲಯೋಗಿ ಮಾಣಿಕ್ಯ ವೃಷಬೇಂದ್ರ ಮಹಾಸ್ವಾಮಿಗಳು, ಬಾವಿಹಾಳ–ದೇವರಕೊಂಡ–ಬೆಲವಂತರ ಇವರ ದಿವ್ಯ ನೇತೃತ್ವದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ರೇವಣಸಿದ್ದಯ್ಯ ಮಹಾಸ್ವಾಮಿಗಳು ಬೆಲವಂತರ, ಪರಮಪೂಜ್ಯ ಶ್ರೀ ಕಾಯಕಯೋಗಿ ಬಸವ ಶಾಸ್ತ್ರಿಗಳು ತಾವರಗೇರಿ ಕರಡು ರತ್ನ ಪ್ರಶಸ್ತಿ ವಿಜೇತರು, ಪರಮಪೂಜ್ಯ ಶ್ರೀ ರವಿಶಾಸ್ತ್ರಿಗಳು ಕಿವಡೆಬೈಲ, ಡಾ. ಎಸ್. ಎಸ್. ಪಾಟೀಲ್ ವಿಶ್ವ ದರ್ಶನ ದಿನಪತ್ರಿಕೆ ಸಂಪಾದಕರು ಉಪಸ್ಥಿತರಿದ್ದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ (ರಿ) ಧಾರವಾಡ ಜಿಲ್ಲಾ ಅಧ್ಯಕ್ಷರಾದ ಸಂಗನಗೌಡ ಹೂವನ್ನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಿವಕುಮಾರ ಎಸ್. ಪಾಟೀಲ್, ಕಲಘಟಗಿ ತಾಲೂಕ ಅಧ್ಯಕ್ಷರಾದ ಸಾತಪ್ಪ ಕುಂಕುರ, ಪ್ರಧಾನ ಕಾರ್ಯದರ್ಶಿ ಪ್ರಭು ರಂಗಾಪುರ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಮಂಜುನಾಥ್ ಬಸನಕೊಪ್ಪ ನೆರವೇರಿಸಿದರು. ಕರಾಳ ಸತ್ಯ ಕನ್ನಡ ದಿನಪತ್ರಿಕೆಯ ಉತ್ತರ ಕರ್ನಾಟಕ ವರದಿಗಾರರಾದ ಆನಂದ ಬೆಳಗಲ್ಲ ಉಪಸ್ಥಿತರಿದ್ದರು.
ಬೆಲವಂತರ, ದೇವರಕೊಂಡ, ತಾವರಗೇರಿ, ಯಲವದಾಳ, ಅರಳಿಹೊಂಡಾ, ಮುಕ್ಕಲ್ಲ, ಎರಡು ಸೋಮನಕೊಪ್ಪ, ಹನಮಾಪೂರ, ತಂಬೂರ, ಶಿವನಾಪುರ, ಹುಣಸಿಕಟ್ಟಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಸದ್ಭಕ್ತರು ಭಾಗವಹಿಸಿ ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಿದರು.