ಅ,10ರಂದು ಚಿತ್ರದುರ್ಗದಲ್ಲಿ KRS ಪಕ್ಷದ 7ನೇ ಸಂಸ್ಥಾಪನಾ ದಿನಾಚರಣೆ
ವೀರಮಾರ್ಗ ನ್ಯೂಸ್ : ಚಿತ್ರದುರ್ಗ : ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷದ 7ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಬೃಹತ್ ರಾಜ್ಯಮಟ್ಟದ ಸಮಾವೇಶವು ಆಗಸ್ಟ್ 10ರಂದು ಚಿತ್ರದುರ್ಗದ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು KRS ಪಕ್ಷದ ಮುಖಂಡ ನಿರುಪಾದಿ ಕೆ. ಗೋಮರ್ಸಿ ತಿಳಿಸಿದ್ದಾರೆ.
ಸ್ವಚ್ಛ,ಪ್ರಾಮಾಣಿಕ, ಭ್ರಷ್ಟಾಚಾರಮುಕ್ತ ಹಾಗೂ ಜನಪರ ರಾಜಕಾರಣದ ಆಶಯದೊಂದಿಗೆ KRS ಪಕ್ಷವು ಕಳೆದ ಏಳು ವರ್ಷಗಳಿಂದ ನಿರಂತರ ಹೋರಾಟ ನಡೆಸುತ್ತಿದೆ. ಪಕ್ಷದ ಸಂಸ್ಥಾಪಕರು ಹಾಗೂ ಗೌರವಾಧ್ಯಕ್ಷರಾದ ಶ್ರೀ ರವಿ ಕೃಷ್ಣಾರೆಡ್ಡಿಸೇರಿದಂತೆ ರಾಜ್ಯದ ಸಾವಿರಾರು ಜನ ಪಕ್ಷದ ಸೈನಿಕರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಭ್ರಷ್ಟಾಚಾರ ನಿರ್ಮೂಲನೆ, ಪಾರದರ್ಶಕ ಆಡಳಿತ, ಯುವಜನರಿಗೆ ಉದ್ಯೋಗ, ರೈತರ ಸಮಸ್ಯೆಗಳ ಪರಿಹಾರ ಹಾಗೂ ಜನಸಾಮಾನ್ಯರ ಹಕ್ಕುಗಳಿಗಾಗಿ ಪಕ್ಷ ನಿರಂತರವಾಗಿ ಧ್ವನಿ ಎತ್ತುತ್ತಿದೆ.ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಪಕ್ಷವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ಸಮಾವೇಶ ಮಹತ್ವದ್ದಾಗಿದೆ.
ರಾಜ್ಯದ ರೈತರು, ಯುವಜನರು, ಮಹಿಳೆಯರು,ಕಾರ್ಮಿಕರು ಹಾಗೂ KRS ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕು ಎಂದು ನಿರುಪಾದಿ ಕೆ. ಗೋಮರ್ಸಿ ಮನವಿ ಮಾಡಿದ್ದಾರೆ.