ಲಿಂಗಾಯಿತಸಮಾಜಕ್ಕೆ ಬೂದಿ ಎರಚುತ್ತಿರುವ ಟ್ರಸ್ಟಿಗಳು..

ವೀರಮಾರ್ಗ ನ್ಯೂಸ್ : ಬೆಂಗಳೂರು : ಈಗಾಗಲೇ ಪಂಚಮ ಸಾಲಲಿಂಗಾಯಿತ ಸಮಾಜದ ಒಳ ನಡೆಯುತ್ತಿರುವ ಗೊಂದಲದ ಬಗ್ಗೆ ತಾವೆಲ್ಲರೂ ಕೇಳುತ್ತಿದ್ದೀರಿ ನೋಡುತ್ತಿದ್ದೀರಿ ಓದುತ್ತಿದ್ದೀರಿ, ಆದರೆ ಒಳಒಳಗಡೆ ಮೀಟಿಂಗ್ ಸಮಾಜದ ಮುಖಂಡರ ಮನೆಯಲ್ಲಿ ಸಾಕಷ್ಟು ಬಾರಿ ಮಾತುಕತೆ ಲೆಕ್ಕ ಕೊಡಿ ಲೆಕ್ಕ ತಗೊಳ್ಳಿ ನಡೆದಿತ್ತು.

ಆದರೆ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮ ಶಾಲೆ ಸಂಘ ರಿಜಿಸ್ಟರ್ ಕಾಪಿ ಹಾಗೂ ನೋಂದಾವಣೆ ಆದಂತ ಕೆಲವು ದಾಖಲಾತಿಗಳು ಯಾರ ಹತ್ತಿರ ಇದೆ ನಿಜವಾದ ಟ್ರಸ್ಟಿಗಳು ಯಾವ & ಯಾರು ಹಣಕ್ಕೋಸ್ಕರ ಎಷ್ಟೆಲ್ಲ ದ್ವೇಷ ನಡೆಯುತ್ತಿದೆ, ಲೆಕ್ಕ ಕೇಳಿದ ತಕ್ಷಣ ಏನೆಲ್ಲಾ ನಾಟಕಗಳನ್ನ ಮಾಡಬಲ್ಲರು, ಎನ್ನುವುದನ್ನು ಸಮಾಜದ ಮುಂದ ಮಾಧ್ಯಮದ ಮುಂದೆ ರಾಜ ರೋಷವಾಗಿ ಅವರು ಮಾಡಿರುವ ಮಾಡಿರುವಂತಹ ಕೃತ್ಯಗಳನ್ನು ದಾಖಲೆ ಸಮೇತ ಮುಂದೆ ಇಟ್ಟ ರಾಜ್ಯ ಅಧ್ಯಕ್ಷರಾದ ಸೋಮನಗೌಡ ಪಾಟೀಲ್ ಮಾತನಾಡಿದರು.

ಇಷ್ಟೆಲ್ಲ ಬೆಳವಣಿಗೆ ಕಂಡರೂ ಕೂಡ ಶಾಂತ ರೀತಿಯಿಂದ ಲೆಕ್ಕಪತ್ರಗಳನ್ನು ಕೊಡಲು ಮತ್ತು ಸಮಾಜದ ಎದುರು ಇಡಲು ಹಿಂದೇಟು ಹಾಕುತ್ತಿರುವ ಟ್ರಸ್ಟಿ ಗಳ ನಡೆ ಸಾರ್ವಜನಿಕರಿಗೆ ಅನುಮಾನ ಉಂಟು ಮಾಡಿದೆ.

ಇವರ ಆದಿರಂಪ ಬೀದಿರಂಪ ಸಾರ್ವಜನಿಕರ ನೋಡಿ ಕ್ಯಾಕರಿಸಿ ಉಗಿಯುವ ಪರಿಸ್ಥಿತಿಗೆ ಬಂದಿದೆ. ಕೋಟಿ ಕೋಟಿ ಲೂಟಿ ಮಾಡಿರುವ ಟ್ರಸ್ಟಿಗಳು, ಕಾನೂನ ಚೌಕಟ್ಟಿನಡಿಯಲ್ಲಿ ಅನೇಕ ತೊಂದರೆಗಳನ್ನು ಕೊಡುತ್ತಿರುವುದನ್ನ ಮಾಜಿ ಶಾಸಕರಾದ ಎಚ್ ಎಸ್ ಶಿವಶಂಕರ್ ಅವರು ಸಮಾಜದ ಮುಂದೆ ಮಾಧ್ಯಮದ ಮುಂದೆ ಬಿಚ್ಚಿಟ್ಟರು. ಹಾಗೂ ಇದು ಒಂದು ಪ್ರಕಟಣೆಯನ್ನು ಕೂಡ ಮಾಧ್ಯಮದ ಮುಂದೆ ಇಟ್ಟಿದ್ದಾರೆ.

ಆತ್ಮೀಯ ಪಂಚಮಸಾಲಿ ಸಮಾಜ ಭಾoದವರೇ
ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ (ರಿ) ಬೆಂಗಳೂರ ಇದರ ಅಧಿಕೃತ ಸರ್ವ ಸದಸ್ಯರ ಸಭೆ ಹರಿಹರದಲ್ಲಿ 17-09-26 ರಂದು ಸಂಘದ ಅಧ್ಯಕ್ಷರಾದ ಸೋಮನಗೌಡ ಪಾಟೀಲ್ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆದಿದೆ.

ಆದರೆ ನಾಳೆ 19-09-26 ರಂದು ಹಾವೇರಿಯಲ್ಲಿ ಸಂಘದ ಪದಾಧಿಕಾರಿ ಆಗದೆ ಇರುವವರು ಹಾಗೂ ಸಮಾಜದ ಕೆಲವು ಪಟ್ಟಭದ್ರ ಹಿತಾಸಕ್ತಿಯ ವ್ಯಕ್ತಿಗಳು ಹಾವೇರಿಯಲ್ಲಿ ನಾಳೆ ಸಭೆ ಹಮ್ಮಿಕೊಂಡಿರುವುದಾಗಿ ತಿಳಿದು ಬಂದಿದೆ. ಇದರ ವಿರುದ್ಧವಾಗಿ ಸಂಘದ ಕೆಲವು ಸದಸ್ಯರು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ
WP No. 29738/2026 ಕೇಸನ್ನು ದಾಖಲಿಸಿದ್ದರು. ಸದರಿ ಕೇಸಿನಲ್ಲಿ ಉತ್ತಮವಾಗಿರುವ ಆದೇಶವಾಗಿದೆ. ಅದು ಏನಂದರೆ ನಾಳೆ 19-09-26 ರಂದು ನಡೆಯುವ ಸಭೆ ಮತ್ತು ಸದರಿ ಸಭೆಯಲ್ಲಿನ ನಿರ್ಣಯಗಳು ಸರ್ಕಾರ/ ಇಲಾಖೆ ಒಪ್ಪುವಂತಿಲ್ಲ ಹಾಗು ಊರ್ಜಿತವಾಗುವುದಿಲ್ಲ ಮತ್ತು ಸಂಘದಲ್ಲಿ ನಡೆಯುತ್ತಿರುವ ಆಗುಹೋಗುಗಳ ಬಗ್ಗೆ ಪೀಠವು ಗಮನ ವ್ಯಕ್ತಪಡಿಸಿ ಸಂಘದ ಬಗ್ಗೆ ಸರ್ಕಾರ ಯಾವ ಕ್ರಮ ಕೈಗೊಳ್ಳುವುದಾಗಿ ನ್ಯಾಯಾಲಯಕ್ಕೆ ಮುಂದಿನ ದಿನಾಂಕದಂದು ತಿಳಿಸುವಂತೆ ಆದೇಶಿಸಿ ಮಹತ್ವದ ತೀರ್ಪನ್ನು ನೀಡಿದೆ. ಆದ ಕಾರಣ ಪಂಚಮಸಾಲಿ ಸಂಘದ ಹೆಸರಿನ ಅಡಿಯಲ್ಲಿ ಪೀಠದ ಲೆಕ್ಕ ಕೊಡದಂತವರು ಹಾವೇರಿಯಲ್ಲಿ ಹಮ್ಮಿಕೊಂಡಿರುವ ಸಭೆ ಕೇವಲ ಪ್ರತಿಭಾ ಪುರಸ್ಕಾರದ ಸಭೆಯೇ ಹೊರತು ಕಾನೂನು ಪ್ರಕಾರ ಸರ್ವ ಸದಸ್ಯರ ಸಭೆ ಆಗುವುದಿಲ್ಲ. ಸಂಘದ ಬೈಲಾದಲ್ಲಿ ಅದ್ಯಕ್ಷರ ಹೊರತಾಗಿ ಬೇರೆಯವರಿಗಾಗಲಿ ಅಥವಾ ಇವರಿಗೆ ಸರ್ವ ಸದಸ್ಯರ ಸಬೆ ಕರೆಯಲು ಅಧಿಕಾರ ಇರುವುದಿಲ್ಲ ಎಂದು ಸಮಾಜ ಭಾಂದವರ ಗಮನಕ್ಕೆ ತರಬಯಸುತೇವೆ. ಅದರಿಂದ ಹಾವೇರಿಯ ಸಬೆಯಲ್ಲಿ ಪಾಲ್ಗೊಳ್ಳುವಂತಹ ಸಮಾಜ ಭಾಂದವರು ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡಿಕೊಳ್ಳದಿರಲು ಮನವಿ.


ಪಂಚಮಸಾಲಿ ಪೀಠದ ಲೆಕ್ಕ ಕೊಡಿ ಚಳುವಳಿ ಹೋರಾಟ ಸಮಿತಿ ಸದಸ್ಯರು ಮತ್ತು ಪೀಠದ ನಿಷ್ಠಾವಂತ ಭಕ್ತರು ಹರಿಹರ ಪಂಚಮಸಾಲಿ ಪೀಠ.