ಪಟ್ಟಣ ಪಂಚಾಯಿತಿಗೇ ಮನವಿ.
ಮಾನ್ಯ ಮುಖ್ಯಾಧಿಕಾರಿಗಳು,ಪಟ್ಟಣ ಪಂಚಾಯಿತಿ, ದೋರನಹಳ್ಳಿ. ವೀರಮಾರ್ಗ ನ್ಯೂಸ್ : ದೋರನಹಳ್ಳಿ ಗ್ರಾಮದ ಎಲ್ಲಾ ವಾರ್ಡ್ಗಳ ಕುಡಿಯುವ ನೀರಿನ ಬೋರ್ವೆಲ್ಗಳನ್ನು ಪರಿಶೀಲಿಸಿ, ತುಕ್ಕು ಹಿಡಿದಿರುವ ಕಬ್ಬಿಣದ ಬಿಡಿಭಾಗಗಳನ್ನು ಬದಲಾಯಿಸುವ ಕುರಿತು ಮನವಿ.ಈ ಮೂಲಕ ತಮ್ಮಲ್ಲಿ ವಿನಮ್ರವಾಗಿ ಮನವಿ ಮಾಡಿಕೊಳ್ಳುವುದೇನೆಂದರೆ, ದೋರನಹಳ್ಳಿ ಗ್ರಾಮದ ಪ್ರತಿ ವಾರ್ಡ್ನಲ್ಲಿರುವ ಕುಡಿಯುವ ನೀರಿನ ಬೋರ್ವೆಲ್ಗಳನ್ನು ಸಮಗ್ರವಾಗಿ ಸರ್ವೆ ಮಾಡಿ ಪರಿಶೀಲಿಸುವುದು ಅತ್ಯವಶ್ಯಕವಾಗಿದೆ.ಗ್ರಾಮದ ವಿವಿಧ ವಾರ್ಡ್ಗಳಲ್ಲಿರುವ ಬೋರ್ವೆಲ್ಗಳಿಗೆ ಹಲವು ವರ್ಷಗಳ ಹಿಂದೆ ಅಳವಡಿಸಲಾಗಿರುವ ಕಬ್ಬಿಣದ ಪೈಪ್ಗಳು, ಚೈನ್ಗಳು, ರಾಡ್ಗಳು, ಹ್ಯಾಂಡಲ್ಗೆ ಜೋಡಿಸಲಾದ ಬಿಡಿಭಾಗಗಳು ಹಾಗೂ ಇತರ…
ಸಸ್ಯಗಳಲ್ಲಿ ಪೋಷಕಾಂಶಗಳ ಚಲನಶೀಲತೆ &ಎಲೆಗಳ ರೋಗನಿರ್ಣಯ.
ಸಸ್ಯಗಳಲ್ಲಿ ಪೋಷಕಾಂಶಗಳ ಚಲನಶೀಲತೆ ಮತ್ತು ಎಲೆಗಳ ರೋಗನಿರ್ಣಯ. ವೀರಮಾರ್ಗ ನ್ಯೂಸ್ : ತೋಟದಲ್ಲಿ ಪೋಷಕಾಂಶಗಳ ಕೊರತೆಯನ್ನು ಗುರುತಿಸಲು ಪೋಷಕಾಂಶಗಳ ಚಲನಶೀಲತೆಯನ್ನು ಅರ್ಥಮಾಡಿಕೊಳ್ಳುವುದು ಅತ್ಯಂತ ಉಪಯುಕ್ತ ಸಾಧನಗಳಲ್ಲಿ ಒಂದಾಗಿದೆ. ಸಸ್ಯದ ಮೇಲಿನ ರೋಗಲಕ್ಷಣಗಳ ಸ್ಥಳ – ಹಳೆಯ ಎಲೆಗಳು ಅಥವಾ ಎಳೆಯ ಎಲೆಗಳು – ಯಾವ ಪೋಷಕಾಂಶದ ಕೊರತೆಯಿರಬಹುದು ಎಂಬುದರ ಬಗ್ಗೆ ಪ್ರಮುಖ ಸುಳಿವನ್ನು ನೀಡುತ್ತದೆ. ಮೊಬೈಲ್ ಪೋಷಕಾಂಶಗಳು – ಲಕ್ಷಣಗಳು ಮೊದಲು ಹಳೆಯ ಎಲೆಗಳಲ್ಲಿ ಸರಬರಾಜು ಸೀಮಿತವಾದಾಗ ಮೊಬೈಲ್ ಪೋಷಕಾಂಶಗಳನ್ನು ಸಸ್ಯದೊಳಗೆ ಮರುಹಂಚಿಕೆ ಮಾಡಬಹುದು. ಸಸ್ಯವು ಈ…
ಕಬ್ಬುಸುಟ್ಟಹೊಲಕ್ಕೆ ಹೆಸ್ಕಾಂ 1 ಲಕ್ಷಪರಿಹಾರ ತಕ್ಷಣವೇ ಕೊಡಲಿ.
ಹಾವೇರಿ ತಾಲೂಕು ಸಂಗೂರ ಗ್ರಾಮದಲ್ಲಿ ಇಂದು ಮಧ್ಯಾಹ್ನ ಒಂದು ಗಂಟೆಗೆ ಇಪ್ಪತ್ತು ಎಕರೆ ಕಬ್ಬು ಸುಟ್ಟು ಹೋಗಿದೆ. ಕಬ್ಬು ಸುಟ್ಟ ಹೊಲಕ್ಕೆ ಹೆಸ್ಕಾಂ 1 ಲಕ್ಷ ಪರಿಹಾರ ತಕ್ಷಣವೇ ಕೊಡಲಿ. ಸಿಹಿ ಕೊಡುವ ರೈತರಿಗೆ ವಿಷ ಕೊಡುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರ ವೀರಮಾರ್ಗ ನ್ಯೂಸ್ : ಹಾವೇರಿ : ಹಾವೇರಿ ಜಿಲ್ಲೆಯಲ್ಲಿ ಈ ಒಂದು ವಾರದಲ್ಲಿ 80ಕ್ಕೂ ಹೆಚ್ಚು ಎಕರೆ ಕಬ್ಬಿನ ಬೆಳೆ ವಿದ್ಯುತ್ ಸ್ಪರ್ಶದಿಂದ ಸುಟ್ಟು ಹೋಗಿವೆ ರೈತರ ಬದುಕು ಬೆಂಕಿಯಲ್ಲಿ ಸುಟ್ಟು ಬೆಂದು…
ದೆಹಲಿಯ ಕಬ್ಬುಬೆಳೆಗಾರರ ಸಭೆಗೆ ಹಾವೇರಿ ಜಿಲ್ಲೆಯ ಪ್ರತಿನಿಧಿ.
ದೆಹಲಿಯ ಕಬ್ಬು ಬೆಳೆಗಾರರ ಸಭೆಗೆ ಹಾವೇರಿ ಜಿಲ್ಲೆಯ ಪ್ರತಿನಿಧಿ ಭುವನೇಶ್ವರ ಶಿಡ್ಲಾಪುರ. ವೀರಮಾರ್ಗ ನ್ಯೂಸ್ : ಹಾವೇರಿ : ಹಾವೇರಿ ಜಿಲ್ಲೆಯಿಂದ ದೆಹಲಿಯಲ್ಲಿ ನಡೆಯುವ ಸಭೆಗೆ 12/ 10/ 2026 ಸೋಮವಾರ ಮಧ್ಯಾಹ್ನ 3 ಗಂಟೆಗೆ ಕೇಂದ್ರ ಸಚಿವರಾದ ಸನ್ಮಾನ್ಯ ಶ್ರೀ ಪ್ರಹ್ಲಾದ್ ಜೋಶಿ ಆಹಾರ ಮತ್ತು ಶಿಕ್ಷಣ ಸಚಿವರು ದೆಹಲಿಯಲ್ಲಿ ಕಬ್ಬು ಬೆಳೆಗಾರರ ಸಭೆಯನ್ನು ಕರೆದಿದ್ದಾರೆ ಅದರಲ್ಲಿ ಹಾವೇರಿ ಜಿಲ್ಲೆಯ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷರಾದ ಭುವನೇಶ್ವರ ಶಿಡ್ಲಾಪುರ ಹಾಗೂ ಪದಾಧಿಕಾರಿಗಳು ದೆಹಲಿ ಸಭೆಯಲ್ಲಿ…
ಕನಕಗಿರಿಯಲ್ಲಿ ಕೆಆರ್ಎಸ್ ಪಕ್ಷದಿಂದ ಲಂಚಮುಕ್ತ ಅಭಿಯಾನ.
ಕನಕಗಿರಿಯಲ್ಲಿ ಕೆಆರ್ಎಸ್ ಪಕ್ಷದಿಂದ ಲಂಚಮುಕ್ತ ಅಭಿಯಾನ: ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಸಾರ್ವಜನಿಕ ಸಮಸ್ಯೆಗಳ ಪರಿಶೀಲನೆ. ವೀರಮಾರ್ಗ ನ್ಯೂಸ್ : ಕನಕಗಿರಿ : ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್ಎಸ್) ಪಕ್ಷದ ವತಿಯಿಂದ ಅಕ್ಟೋಬರ್ 12,2026ರಂದು ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ವಿವಿಧ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಲಂಚಮುಕ್ತ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಈ ಅಭಿಯಾನದ ಭಾಗವಾಗಿ ಮಾತನಾಡಿದ ಪಕ್ಷದ ಮುಖಂಡ ನಿರುಪಾದಿ ಕೆ ಗೋಮರ್ಸಿ ಕನಕಗಿರಿ ತಾಲೂಕಿನ ತಹಶೀಲ್ದಾರ್ ಕಚೇರಿ, ಪೊಲೀಸ್ ಠಾಣೆ, ತಾಲೂಕು ಪಂಚಾಯತ್ ಕಾರ್ಯಾಲಯ…
ಯುವಕನಅಪಹರಣ ಮಾಡಿ ಗುಪ್ತಾಂಗಶಸ್ತ್ರಚಿಕಿತ್ಸೆ ಮಾಡಿಸಿದ ಮಂಗಳಮುಖಿ.
ಚಿತ್ರದುರ್ಗದಲ್ಲಿ ಯುವಕನ ಅಪಹರಣ ಮಾಡಿ ಗುಪ್ತಾಂಗದ ಶಸ್ತ್ರಚಿಕಿತ್ಸೆ ಮಾಡಿಸಿದ ಆರೋಪ! ಇಬ್ಬರು ಮಂಗಳಮುಖಿಯರ ಬಂಧನ ವೀರಮಾರ್ಗ ನ್ಯೂಸ್ : ಚಿತ್ರದುರ್ಗ : 25 ವರ್ಷದ ಯುವಕನನ್ನು ಅಪಹರಿಸಿ, ಆತನ ಇಚ್ಛೆಗೆ ವಿರುದ್ಧವಾಗಿ ಗುಪ್ತಾಂಗದ ಶಸ್ತ್ರಚಿಕಿತ್ಸೆ ಮಾಡಿಸಿದ ಆರೋಪದ ಮೇಲೆ ಇಬ್ಬರು ಮಂಗಳಮುಖಿಯರನ್ನು ಚಿತ್ರದುರ್ಗ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅನುಷ್ಕಾ ಹಾಗೂ ನಳಿನಾ ಬಂಧಿತ ಆರೋಪಿಗಳು. ಚಳ್ಳಕೆರೆ ಗೇಟ್ ಬಳಿ ಸುತ್ತಾಡುತ್ತಿದ್ದ ವೇಳೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಚಿತ್ರದುರ್ಗದಲ್ಲಿ ಹೂವು ಮಾರಾಟ ಮಾಡುತ್ತಿದ್ದ ಯುವಕನಿಗೆ…
ಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ, 5 ಜನ ಬಂಧನ.
ಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ; 5 ಮಂದಿ ಬಂಧನ ವೀರಮಾರ್ಗ ನ್ಯೂಸ್ : ಹಾವೇರಿ : ನಗರದ ತರಳಬಾಳು ನಗರದ ಸಮೀಪ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದರೆಂಬ ಆರೋಪದ ಮೇರೆಗೆ ಐವರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದು, ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.ಪೊಲೀಸ್ ಪ್ರಕಟಣೆಯ ಪ್ರಕಾರ, ಅ.3ರಂದು ಮಧ್ಯಾಹ್ನ ಸುಮಾರು 1.30ರ ವೇಳೆಗೆ ತರಳಬಾಳು ನಗರದ ಸಮೀಪ ಡಿಸಿ ಕಚೇರಿಗೆ ತೆರಳುವ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದರೆಂಬ…
ನಕಲಿ ಸುಪ್ರೀಂ ಕೋರ್ಟ್ ಆದೇಶ ಪ್ರಕರಣ ಡಿಐಜಿ ಸೋಮಶೇಖರ್ ಬಂಧನ…
ಪರಪ್ಪನ ಅಗ್ರಹಾರದಲ್ಲಿ ನಕಲಿ ಸುಪ್ರೀಂ ಕೋರ್ಟ್ ಆದೇಶ ಪ್ರಕರಣ.ಜೈಲು ಇಲಾಖೆ ಡಿಐಜಿ ಸೋಮಶೇಖರ್ ಬಂಧನ… ವೀರಮಾರ್ಗ ನ್ಯೂಸ್ : ಆನೇಕಲ್ : ನಕಲಿ ಸುಪ್ರೀಂ ಕೋರ್ಟ್ ಆದೇಶ ಸೃಷ್ಟಿಸಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿಯನ್ನು ಜೈಲಿನಿಂದ ಬಿಡುಗಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಡಿಐಜಿ ಸೋಮಶೇಖರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಶಂಕರ್ ಬಿನ್ ಶಂಕರ್, ಎ. ಸಿಟಿಪಿ-12503 ಎಂಬ ಜೀವಾವಧಿ ಶಿಕ್ಷೆಗೊಳಗಾದ ಕೈದಿಯನ್ನು 2018ರ ನವೆಂಬರ್ 13ರಂದು ನಕಲಿ ಸುಪ್ರೀಂ ಕೋರ್ಟ್…
ಲೋಕಾಯುಕ್ತ ಬಲೆಗೆ ಬಿದ್ದ ಪ್ರಭಾರ ಕಂದಾಯ ನಿರೀಕ್ಷಕ.
ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಪ್ರಭಾರ ಕಂದಾಯ ನಿರೀಕ್ಷಕ ಒಂದು ಲಕ್ಷಕ್ಕೆ ಬೇಡಿಕೆ; 30 ಸಾವಿರ ರೂ. ಸ್ವೀಕರಿಸುವ ವೇಳೆ ಅಧಿಕಾರಿ ಲಾಕ್ ವೀರಮಾರ್ಗ ನ್ಯೂಸ್ : ತುಮಕೂರು : ಜಮೀನಿನ ಪೌತಿಖಾತೆ ಮಾಡಿಕೊಡಲು ಲಂಚದ ಬೇಡಿಕೆ ಇಟ್ಟು, 30 ಸಾವಿರ ರೂ. ಹಣ ಸ್ವೀಕರಿಸುವ ವೇಳೆ ಪ್ರಭಾರ ಕಂದಾಯ ನಿರೀಕ್ಷಕರೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಮಧುಗಿರಿಯಲ್ಲಿ ನಡೆದಿದೆ. ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಯನ್ನು ನಾಗೇಶ್ ಎಂದು ಗುರುತಿಸಲಾಗಿದೆ. ಮಧುಗಿರಿ ಕಸಬಾ ಪ್ರಭಾರ ಕಂದಾಯ…
ನಿವೃತ್ತ BCM ಹಾಸ್ಟೆಲ್ನ ನಿವೃತ್ತ ಸೂಪರಿಂಟೆಂಡೆಂಟ್ ಮೇಲೆ ಲೋಕಾಯುಕ್ತ ದಾಳಿ..!
ಮಂಡ್ಯದಲ್ಲಿ ನಿವೃತ್ತ ಬಿಸಿಎಂ ಹಾಸ್ಟೆಲ್ನ ನಿವೃತ್ತ ಸೂಪರಿಂಟೆಂಡೆಂಟ್ ಮೇಲೆ ಲೋಕಾಯುಕ್ತ ದಾಳಿ.. ದುಬಾರಿ ಮದ್ಯದ ಬಾಟಲಿಗಳು, ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳು ಪತ್ತೆ..! ಮಾಹಿತಿ ಕೇಳಿದರೆ ಸಾಕು ಐದು ಸಾವಿರ ಮೂರು ಸಾವಿರ ಕೊಡಲ ಮುಂದಾಗುತ್ತಾರೆ ಬಿಸಿಎಂ ಇಲಾಖೆಯ ವಸ್ತುವಾರಿಗಳು. ಲೋಕಾಯುಕ್ತ ದಾಳಿಯಲ್ಲಿ ಉಬ್ಬೆರಿಸುವ ಹಾಗೆ ಸಂಪಾದನೆ ಮಾಡಿರುವ… ಬಿಸಿಎಂ ಇಲಾಖೆಯ ಮಾನ ಮರ್ಯಾದೆ ತಗದು ಕನ್ನ ಹಾಕಿದ ಹಾಸ್ಟೆಲ್ ಸೂಪರ್ಡೆಂಟ್. ಬಡಮಕ್ಕಳ ಬಾಯಿಗೆ ಹೊಡೆದು ತನ್ನ ಹೆಂಡತಿ ಮಕ್ಕಳ ಬಾಯಿ ತುಂಬಿಸಿದ ಸೂಪರ್ಡೆಂಟ್. ಮುಸರೆ ಇಲಾಖೆ…
