CM ಕರ್ನಾಟಕಕ್ಕೆ ಚಿಪ್ಪು ಕೊಟ್ಟ..

ವೀರಮಾರ್ಗ ನ್ಯೂಸ್ : ಶಿಗ್ಗಾವ್ : ಕರ್ನಾಟಕ ಕ್ಕೆ ಸಾರ್ವಜನಿಕರಿಗೆ ಮತ್ತೊಮ್ಮೆ ತಮ್ಮ ಅಭಿವೃದ್ಧಿ ಶೂನ್ಯ, ಬಜೆಟ್ ಮಂಡಿಸಿರುವ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಶೂನ್ಯ ಸಾಧನೆಯನ್ನು ಇನ್ನಷ್ಟು ಆಳಕ್ಕೆ ಕುಸಿಯುವಂತೆ ಮಾಡಿದ್ದಾರೆ. ರಾಜ್ಯದ ಬಹು ಸಂಖ್ಯಾತರಿಗೆ ಚಳ್ಳೆಹಣ್ಣು ತಿನ್ನಿಸಿ, ಅಲ್ಪ ಸಂಖ್ಯಾತರ ಕಲ್ಯಾಣಕ್ಕೆ ಭರಪೂರ ಅನುದಾನ ಒದಗಿಸಿದ್ದಾರೆ.

ಮೊದಲಿನಿಂದಲೂ ಓಲೈಕೆ ರಾಜಕಾರಣಕ್ಕೆ ಒತ್ತುಕೊಟ್ಟಿರುವ ಕಾಂಗ್ರೆಸ್ ಸರ್ಕಾರ ಈಗ, ಸರ್ಕಾರಿ ಗುತ್ತಿಗೆಗಳಲ್ಲಿ ಅಲ್ಪ ಸಂಖ್ಯಾತರಿಗೆ ಮೀಸಲಾತಿ ಕೂಡ ಒದಗಿಸಿದೆ. ಮುಸಲ್ಮಾನರ ಕಣ್ಣಿಗೆ ಬೆಣ್ಣೆ ಹಚ್ಚಿ, ಪರಿಶಿಷ್ಟ ಸಮುದಾಯ ಸೇರಿದಂತೆ ಸಮಾಜದ ಇತರೆ ಎಲ್ಲಾ ವರ್ಗಗಳ ಜನರ ಕಣ್ಣಿಗೆ ಸುಣ್ಣ ಹಚ್ಚುವ ಮೂಲಕ ತಾನು ಪಕ್ಷಪಾತಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ರೇಣಕನಗೌಡ ಪಾಟೀಲ ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆದಾರರು ಶಿಗ್ಗಾಂವ

Leave a Reply

Your email address will not be published. Required fields are marked *