ಅಕ್ರಮ ಮರಳು ಗಣಿಗಾರಿಕೆಯಲ್ಲಿ ಸರ್ಕಾರಿಅಧಿಕಾರಿಗಳ ಪಾಲ್ ಎಷ್ಟು,,,? ಚುನಾಯಿತ ಪ್ರತಿನಿಧಿಗಳ ಪಾಲೆಷ್ಟು,,,?
ಜೆ ಎಮ್ ರಾಜಶೇಖರ ನಿರಂತರ ಹೋರಾಟ ಮಾಡುತ್ತಿರುವ ಮಾಹಿತಿ ಹಕ್ಕು ತಜ್ಞರಿಗೆ ಕಂಡು ಬಂದ ಜಿಪಿಎಸ್ ಸಮೇತ ವಿಡಿಯೋ ದೃಶ್ಯಗಳನ್ನು ಮತ್ತು ಮಾಹಿತಿಯನ್ನು ರಾಜ್ಯಪಾಲರಿಗೆ ದೂರು ನೀಡಿರುವ ಪ್ರತಿ ನಿಮ್ಮ ಮುಂದೆ ಇಡಲು ಇಚ್ಚಿಸುತ್ತೇವೆ.
ಟಾಸ್ಕ್ ಫೋರ್ಸ್ ಸಮಿತಿ ಅಕ್ರಮ ಮರಳು ಸಾಗಾಟದ ಮಾಹಿತಿ ಬಂದರು,ಕ್ಯಾರೇಅನ್ನವ ಸ್ಥಿತಿಯಲ್ಲಿ ಅವರ ಮನಸ್ಥಿತಿ ನಿರ್ಮಾಣವಾಗಿದೆ…
DC ಯವರು ಮೌನ ಏಕೆ,,,,? SP ಹಾವೇರಿ ಮೌನ ಏಕೆ,,,?
ಈ ಬಂಡಧೈರ್ಯ ಯಾಕೇ,? ಎಂದು ಪ್ರಶ್ನಿಸುತ್ತಿರುವ ಸಾರ್ವಜನಿಕರು,,,,
ಪ್ರತಿದಿನ 108 ಗ್ರಾಮಗಳಲ್ಲಿ ತುಂಗಭದ್ರೆ ನದಿ ಹರಿದಿದ್ದು ನದಿಯ ಒಡಲನ್ನು ಬಗೆಯಲು ನಿರಂತರ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5:00 ವರೆಗೆ ತಮ್ಮ ಕಾರ್ಯಚರಣೆ ಮಾಡುತ್ತಿರುವ ಆಕ್ರಮ ಮರಳು ದಂಧೆ ಕೋರರು,
ದಂದೆಕೋರರಿಗೆ ಸರ್ಕಾರಿ ಅಧಿಕಾರಿಗಳು ಚುನಾಯಿತ ಪ್ರತಿನಿಧಿಗಳು ಕೃಪಾಕಟಾಕ್ಷ ಆಶೀರ್ವದ ನಡೆಯುತ್ತಲೇ ಇದೆ.
ಜಿಲ್ಲಾಡಳಿತದ & ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಕ್ರಮ ಮರಳು ದಂಧೆ ನಿಲ್ಲಿಸುವಲ್ಲಿ ವಿಫಲರಾಗಿದ್ದು.
ರಾತ್ರಿ ಇನ್ನು ಎಲ್ಲೋ ಓಡಾಡಿರುವ ತಮ್ಮ ದೃಶ್ಯಗಳನ್ನು ಜಿಪಿಎಸ್ ಫೋಟೋ ಮೂಲಕ ಸಾರ್ವಜನಿಕರಿಗೆ ತೋರಿಸುವಲ್ಲಿ ಪರಿಪೂರ್ಣ ನಾವು ಕಾರ್ಯನಿರತರಾಗಿದ್ದೇವೆ ಅನ್ನುವ ಮಾಹಿತಿಯನ್ನು ಕೊಡುತ್ತಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆ ತಮ್ಮ ಜಾಣತನದ ಪ್ರದರ್ಶನವನ್ನು ನಿಲ್ಲಿಸಿ ಕಾರ್ಯ ಕೈಗೊಳ್ಳುವಲ್ಲಿ ಯಶಸ್ವಿಯಾದರೆ ಸಾರ್ವಜನಿಕರಿಂದ ನಿಮಗೆ ಮುನ್ನಡೆ ಸಿಗುವುದು ಇಲ್ಲವಾದರೆ ನಿಮಗೆ ಸನ್ಮಾನಗಳ ಸನ್ಮಾನಗಳ ಮಳೆ ಸುರಿಯುತ್ತದೆ.
ಅದೇ ರೀತಿಯಾಗಿ ಈಗಾಗಲೇ ರಾಜ್ಯಪಾಲರಿಗೆ ವರದಿ ಹೋಗಿದೆ.
ಮಾನ್ಯ ಆಡಳಿತ ವರ್ಗದ ಎಲ್ಲಾ ಅಧಿಕಾರಸ್ತ ಮಹೋದಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮನವಿ
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಕೋಟಿಹಾಳ ಗ್ರಾಮದ ತುಂಗಭದ್ರಾ ನದಿ ಪ್ರದೇಶದಲ್ಲಿ ರಾತ್ರಿ ಹೊತ್ತಿನಲ್ಲಿ ಕಳ್ಳತನದಿಂದ ಅಕ್ರಮವಾಗಿ ಕಾನೂನುಬಾಹಿರವಾಗಿ ಮರಳು ಎತ್ತುತ್ತಿರುವ ಜಿಪಿಎಸ್ ಸಹಿತ ವಿಡಿಯೋಗ್ರಫಿಯನ್ನು ತಮ್ಮ ಗಮನಕ್ಕೆ ತರುತ್ತಿದ್ದೇನೆ.
ರಾತ್ರಿ ಹೊತ್ತಿನಲ್ಲಿ ಮರಳನ್ನು ಸಾಗಾಟ ಮಾಡಲಾಗುತ್ತದೆ. ಬೆಳಿಗ್ಗೆ ಹೋಗಿ ನೋಡಿದರೆ ಏನು ಸಿಗುವುದಿಲ್ಲ. ಅಲ್ಲದೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರ ನಿರ್ಲಕ್ಷ್ಯ ಎಂದು ಕಾಣುತ್ತದೆ ಕಟ್ಟುನಿಟ್ಟಿನ ಕ್ರಮ ಜರುಗಿಸುವಲ್ಲಿ ಇವರು ವಿಫಲರಾಗಿದ್ದಾರೆ. ಒಂದು ಮರಳು ಟ್ರಿಪ್ಪಿಗೆ ಸರ್ಕಾರದ ಮೊತ್ತ ಕೇವಲ 750 ರೂಪಾಯಿಗಳು ಆದರೆ ನಾಗರೀಕರಿಗೆ 50,000ಗಳಿಗೆ ಒಂದು ಟ್ರಿಪ್ಪರ್ ಟ್ರಿಪ್ ಮರಳಿಗೆ ಅಕ್ರಮವಾಗಿ ಕಾನೂನುಬಾಹಿರವಾಗಿ ಮಾರಾಟ ಮಾಡಲಾಗುತ್ತಿದೆ ಇದರಿಂದ ಸರ್ಕಾರದ ಖಜಾನೆಗೆ ಎಷ್ಟು ಹಾನಿಯಾಗುತ್ತದೆ.
ಇಂತಹ ಕಾನೂನು ಬಹಿರವಾದ ಕೆಲಸವನ್ನು ಸಂಪೂರ್ಣವಾಗಿ ನಿಷೇಧಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿರುವುದು ಏಕೆ. ರಾತ್ರಿ ಹೊತ್ತಿನಲ್ಲಿ ಅಕ್ರಮವಾಗಿ ಮರಳು ಕಳ್ಳತನ ಮಾಡುವವರಿಗೆ ರಾಜ್ಯದ ಸಂಪತ್ತನ್ನು ಮೀಸಲಿಡಲಾಗಿದೆಯೇ? ರಾಜ್ಯದ ನಾಗರೀಕರು 50,000 ಗೆ ಕಳ್ಳತನದ ಮರಳನ್ನು ಖರೀದಿ ಮಾಡಲು ಏಕೆ ಕೊಡಬೇಕು? ನಾಗರೀಕರು ಯಾವ ಬ್ಯಾಂಕನ್ನು ಲೂಟಿ ಮಾಡಿ ಈ ಕಳ್ಳರಿಗೆ ಐವತ್ತು ಸಾವಿರ ರೂಪಾಯಿಗಳನ್ನು ಕೊಡಬೇಕು.
ನಮಗೂ ಮರಳು ಬೇಕೆಂದರೆ 50,000 ಹೇಗೆ ಕೊಡಬೇಕು ಹಾಗಾದರೆ ನಮಗೂ ತರಬೇತಿ ಕೊಡಿ ಅಕ್ರಮವಾಗಿ ಹೇಗೆ ಮರಳನ್ನು ಕಳ್ಳತನ ಮಾಡಬೇಕು. ಹೇಗೆ ಮನೆ ಕಟ್ಟಿಸಲು ಬಳಸಬೇಕು ಎಂದು ತರಬೇತಿ ಕೊಟ್ಟರೆ ನಾಗರಿಕರಿಗೆ ಅನುಕೂಲವಾಗುತ್ತದೆ.
ನಾಗರೀಕರ ಯಾವ ಅಪರಾಧಕ್ಕೆ ಈ ಶಿಕ್ಷೆ ಕೊಡುತ್ತಿದ್ದೀರಿ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳ್ಳತನದಿಂದ ಮಾರಾಟವಾಗುವ ಮರಳು ನಾಗರೀಕರಿಗೆ ಸಿಗುತ್ತದೆ ಸರಕಾರದ ಅಡಿಯಲ್ಲಿ ಕಡಿಮೆ ದರಕ್ಕೆ ಮರಳು ಸಿಗುವುದಿಲ್ಲ. ಇಂತಹ ಪರಿಸ್ಥಿತಿ ಇದೆ ಎಂದರೆ ಕಳ್ಳತನವಾದ ಮರಳನ್ನು ಮಾರಾಟ ಮಾಡಲು ಗ್ರೀನ್ ಸಿಗ್ನಲ್ ಅದಿ ಸೂಚನೆ ಹೊರಡಿಸಿದರೆ ಎಲ್ಲರಿಗೂ ಅನುಕೂಲವಾಗುತ್ತದೆ ಯಾರ್ಯಾರಿಗೆ ಎಷ್ಟೆಷ್ಟು ಸಾಮರ್ಥ್ಯ ಇದೆಯೋ ಅಷ್ಟು ಮರಳನ್ನು ಕದ್ದು ಒಯ್ಯುವುದು. ಯಾರೋ ಕೆಲವರು ಅಕ್ರಮವಾಗಿ ಮರಳು ಮಾಡುವ ಈ ದಂಧೆಯಿಂದ ಕೋಟ್ಯಾಧೀಶರಾಗುತ್ತಾರೆ ಚುನಾವಣೆಗೆ ನಿಲ್ಲುತ್ತಾರೆ ನಾಗರೀಕರನ್ನು ಹಳ್ಳ ಹಿಡಿಸುತ್ತಾರೆ. ಮೋಸ ಮಾಡುತ್ತಾರೆ, ವಂಚನೆ ಮಾಡುತ್ತಾರೆ ಅಪರಾಧದ ಸಮಾಜವನ್ನು ನಿರ್ಮಾಣ ಮಾಡುವವರಲ್ಲಿ ತಮ್ಮದೇ ಸಾಮರ್ಥ್ಯವನ್ನು ಮೆರೆಯುತ್ತಾರೆ. ಇದಕ್ಕೇನಾದರೂ ಪ್ರಜಾಪ್ರಭುತ್ವ ವ್ಯವಸ್ಥೆ ಎನ್ನಲಾಗುತ್ತದೆಯೇ?
ದಯವಿಟ್ಟು, ತುಂಗಭದ್ರಾ ನದಿಯ ಇಕ್ಕೆಲಗಳ ಎಲ್ಲಾ ಜಿಲ್ಲೆಗಳಲ್ಲಿಯೂ ಕೂಡ ಅಕ್ರಮ ಮರಳು ದಂದೆ ರಾತ್ರಿ ಹೊತ್ತಿನಲ್ಲಿ ನಿರ್ಭಿಡೆಯಿಂದ ನಿರ್ಭಯದಿಂದ ನಡೆಯುತ್ತಿದೆ ಎಂದರೆ ಸಂಪೂರ್ಣವಾಗಿ ಕಾನೂನು ವ್ಯವಸ್ಥೆ ಸ್ಥಬ್ಧಗೊಂಡಿದೆ ಎಂದು ಅರ್ಥವಾಗುತ್ತದೆ. ಸಾರ್ವಜನಿಕ ಹಿತಾಸಕ್ತಿ ಹಿನ್ನೆಲೆಯಲ್ಲಿ ದೂರು ನೀಡಿದ್ದೇನೆ.
ಭಾರತೀಯ ನಾಗರೀಕ ಕನ್ನಡಿಗ
07/05/2026
ಜೆ ಎಮ್ ರಾಜಶೇಖರ
ಸಾಹಿತಿ ಮಾಹಿತಿ ಹಕ್ಕು ತಜ್ಞ
ರಾಣೆಬೆನ್ನೂರು