AC ಲೋಕಾಯುಕ್ತ ರೆಡ್..

ನಿಧಾನಕ್ಕೆ ಯೋಚಿಸಿ

ಕಾವ್ಯರಾಣಿಯನ್ನು,ಅಸಿಸ್ಟೆಂಟ್_ಕಮಿಷನರ್ ಮಾಡಲು ಆಕೆಯ ಅಪ್ಪ ಅಮ್ಮ ಎಷ್ಟು ಖರ್ಚು ಮಾಡಿರಬಹುದು?

  1. ಮೊದಲು ಓದಿಸಲು
  2. #KPSC ಎಕ್ಸಾಮ್ ತಯಾರಿಗೆ
  3. ಸೆಲೆಕ್ಟ್ ಮಾಡಿಸಲು 80 ಲಕ್ಷದಿಂದ ಒಂದು ಕೋಟಿ
  4. ಒಳ್ಳೇ ಸ್ಥಾನಕ್ಕೆ ಮತ್ತು ಸ್ಥಳಕ್ಕೆ ಪೋಸ್ಟಿಂಗ್ ಗೆ ಮಂತ್ರಿಗೆ 50 ರಿಂದ 60 ಲಕ್ಷ
  5. ಬಂದ ಲಂಚದಲ್ಲಿ ಸಹಕಾರಿಗಳಿಗೆ ಪಾಲು
  6. ಮೇಲಿನ ಅಧಿಕಾರಿಗಳಿಗೆ ಪಾಲು.
  7. ಹುದ್ದೆಗೆ ಬರಲು ಖರ್ಚು ಮಾಡಿರುವ ಸುಮಾರು 2 ಕೋಟಿ ಬಂಡವಾಳ ಸಂಪಾದಿಸಬೇಕಲ್ಲವೇ?
  8. ಸಾಲ ಮಾಡಿ ಕೊಟ್ಟಿದ್ದರೆ ಬಡ್ಡಿ ಸಮೇತ ಹಿಂತಿರುಗಿಸಬೇಕಲ್ಲವೇ?
  9. ಮುಂದಿನ ಪೋಸ್ಟಿಂಗ್ ಗೆ ಲಂಚ ಕೊಡಲೂ ಹಣ ಮಾಡಬೇಕು ಅಲ್ಲವೇ?
  1. ಇಷ್ಟಾದ ಮೇಲೆ ಅಂತಸ್ತು ಕಾಪಾಡಿಕೊಳ್ಳಲು ಒಂದು ಒಳ್ಳೆಯ ಬಂಗಲೆ, 2 ಅಥವಾ 3 ಕಮರ್ಶಿಯಲ್ ಕಾಂಪ್ಲೆಕ್ಸ್, ಹತ್ತಾರು ಎಕರೆ ಜಮೀನು ಒಂದು 5-6 ಕೆಜಿ ಬಂಗಾರ 10-20 ಕೆಜಿ ಬೆಳ್ಳಿ ಇಟ್ಟುಕೊಳ್ಳಬೇಕಲ್ಲವೇ?
  2. ನಾಳೆ ಮಕ್ಕಳನ್ನು ಓಡಿಸಬೇಕು ಅವರನ್ನು #KPSC ಪಾಸು ಮಾಡಿಸಿ ಅಧಿಕಾರಿ ಮಾಡಬೇಕಲ್ಲವೇ?
  3. ಈಗ #ಲೋಕಾಯುಕ್ತ ದಿಂದ #ಬಿರಿಪೋರ್ಟ್ ಪಡೆಯಲೂ ಹಣ ಖರ್ಚು ಮಾಡಬೇಕು ಅಲ್ಲವೇ?
  4. ಮತ್ತೆ ಪೋಸ್ಟಿಂಗ್ ಗೆ ಒತ್ತಡ ಹೇರಲು ಕಾವ್ಯಾರಾಣಿ ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿ, ಜಾತಿ ಮೇಲಿನ ವೈಷಮ್ಯಕ್ಕಾಗಿ ಈ ಕೇಸು ಎಂದು ಸ್ವಜಾತಿ ಭಾಂಧವರಿಂದ ಮಠ ಮಾನ್ಯ ಗಳಿಂದ ಹೇಳಿಸಲು ಹಣ ಖರ್ಚು ಮಾಡಬೇಕು ಅಲ್ಲವೇ?
  5. ಇಷ್ಟೆಲ್ಲಾ ಖರ್ಚುಗಳಿರುವಾಗ ಪಾಪ ಓದಿರುವ ಹೆಣ್ಣುಮಕ್ಕಳು ಮಗಳು 5-10 ಲಕ್ಷ ಕೇಳಿ ಪಡೆದದ್ದು ತಪ್ಪೇ?
    ನೀವೇ ಅವಳ ತಂದೆ ತಾಯಿಯ ಸ್ಥಾನದಲ್ಲಿ ನಿಂತು ಯೋಚಿಸಿ, ಸಂಪಾದನೆ ಮಾಡುವ ಮಗಳು ಜೈಲಿಗೆ ಹೋದರೆ ಗತಿಯಾರು?
    ಮೇಲಿನ ಎಲ್ಲಕ್ಕೂ #ಸಮಾಜ ಹಾಗೂ #ಭ್ರಷ್ಟವ್ಯವಸ್ಥೆ ಕಾರಣ ಅಲ್ಲವೇ
    ಹಾಗಾದ್ರೆ #ಕಾವ್ಯಾರಾಣಿ ಒಬ್ಬಳೇ ತಪ್ಪಿತಸ್ಥಲೇ?
    ಸಮಾಜದ ನಾವೂ ನೀವೂ #ತಪ್ಪಿತಸ್ಥ ರಲ್ಲವೇ?

ಇದರಲ್ಲಿ ನಮ್ಮ ಪಾಲೂ ಇದೇ ಅಲ್ಲವೇ.
ಆದ್ದರಿಂದ #ಭ್ರಷ್ಟಾಚಾರ ಸಮಾಜಕ್ಕೆ ಅಂಟಿರುವ ಪಿಡುಗು, ಬುಡಸಮೇತ ಕಿತ್ತೊಗೆಯಬೇಕಾಗಿದೆ. ಕಾವ್ಯಾರಾಣಿ ಅದರ ಕಾಣುವ ಮುಖ ಅಷ್ಟೇ.
ಪಿಡುಗಿನ ರೋಗದ ವಿರುದ್ಧ ಹೋರಾಡಬೇಕು ಹೊರತು ರೋಗಿಯ ವಿರುದ್ಧ / ರೋಗದ ಗುರುತಿನ ವಿರುದ್ಧ ಅಲ್ಲ.

ಸ್ಟೋರಿ : ಫೇಸ್ ಬುಕ್ ಪರಿಚಯ.