ಪ್ರಜಾಸೇವಾ ಕಾರ್ಯಕ್ರಮ: ಶಾಸಕರ ನಿರ್ಲಕ್ಷ್ಯ, ಅರ್ಜಿಗಳ ಸುರಿಮಳೆ : ಸಿಜಿರಿಯನ್ ಹೆರಿಗೆಯ ಹಗರಣ ಸದ್ದು.
ವೀರಮಾರ್ಗ ನ್ಯೂಸ್ : ಸಾವಳಗಿ: ಸಾರ್ವಜನಿಕರ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಿ, ಸರ್ಕಾರದ ವಿವಿಧ ಸೇವೆಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಜಾರಿಗೊಳಿಸಿರುವ ‘ಪ್ರಜಾಸೇವಾ ಆಂದೋಲನ–ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮ ಜನಪರ ಹಾಗೂ ಮಹತ್ವದ ವೇದಿಕೆಯಾಗಿದೆ. ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ, ತ್ವರಿತವಾಗಿ ಪರಿಹಾರ ಕಲ್ಪಿಸುವ ಮೂಲಕ ಕಾರ್ಯಕ್ರಮದ ಉದ್ದೇಶ ಯಶಸ್ವಿಗೊಳಿಸಬೇಕು ಎಂದು ಜಮಖಂಡಿ ಶಾಸಕ ಜಗದೀಶ್ ಗುಡಗುಂಟಿ ಹೇಳಿದ ಅವರು ಕೇವಲ 10 ನಿಮಿಷದಲ್ಲಿ ವೇದಿಕೆಯಿಂದ ನಿರ್ಗಮಿಸಿದರು.
ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದ ಶ್ರೀ ಚನ್ನಪ್ಪಣ್ಣ ನಿಂಗಪ್ಪ ನಿರಾಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮದವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕರ ಸಮಸ್ಯೆಗಳನ್ನು ನೇರವಾಗಿ ಆಲಿಸಿ, ಸ್ಥಳದಲ್ಲಿಯೇ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಈ ಆಂದೋಲನ ಮಹತ್ವದ ಪಾತ್ರ ವಹಿಸಿದೆ ಮತ್ತು ಸರ್ಕಾರದ ಈ ಕಾರ್ಯಕ್ರಮ ಶ್ಲಾಘನೀಯವಾಗಿದೆ ಎಂದು ಮಾತನಾಡಿ ವೇದಿಕೆಯಿಂದ ನಿರ್ಮಿಸಿದರು. ಇದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಯಿತು ಜನಪ್ರತಿನಿಧಿಗಳಾದ ಅವರು ಸಾರ್ವಜನಿಕ ಕುಂದುಕೊರತೆಗಳನ್ನು ವಿಚಾರಿಸಿ ಅಧಿಕಾರಿಗಳಿಗೆ ಸಾರ್ವಜನಿಕ ಸಮಸ್ಯೆಗಳನ್ನು ಬಗೆಹರಿಸಲು ಸೂಚಿಸಬೇಕಾಗಿತ್ತು ಆದರೇ ಶಾಸಕರ ತ್ವರಿತವಾಗಿ ಹೋಗಿದ್ದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಯಿತು.
ಮೊದಲ ಕಾರ್ಯಕ್ರಮವಾಗಿದ್ದರಿಂದ ಕಾರ್ಯಕ್ರಮದಲ್ಲಿ ಸ್ವಲ್ಪ ಅಸ್ತವ್ಯಸ್ತವಿತ್ತು. ಅರ್ಜಿ ಸ್ವೀಕರಿಸಲು ಅಯಾ ಇಲಾಖೆಯ ಸಿಬ್ಬಂದಿಗಳು ಇರಲಿಲ್ಲಾ. ಇನ್ನೂ ಕೆಲವು ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಸಿಬ್ಬಂದಿಗಳನ್ನು ಕಳುಹಿಸಿ ಸುಮ್ಮನೆ ಮನೆಯಲ್ಲಿ ಕುಳಿತ ಹಾಗೇ ಆಗಿತ್ತು. ಇದರಿಂದ ಸಾರ್ವಜನಿಕ ಅರ್ಜಿಗಳು ಕೇವಲ ಓದೋದಕ್ಕೆ ಮಾತ್ರ ಮೀಸಲಾಗಿದ್ದವೂ.
ಬಂದಂತಹ ಅರ್ಜಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಕಂದಾಯ ಇಲಾಖೆಗೆ ಸಂಬಂಧ ಪಟ್ಟ ಪೋಡೀ, ಪಟ್ಟಾ ತಿದ್ದುಪಡಿ , ವಾರಸಾ ಬದಲಾವಣೆ, ಹಕ್ಕು ಬದಲಾವಣೆ ಅಂತಾ ಹೆಚ್ಚಿನವದಾಗಿತ್ತು. ಇವುಗಳೆಲ್ಲವೂ ಸ್ಥಳದಲ್ಲಿಯೇ ಪರಿಹಾರ ನೀಡಬದುದಾಗಿತ್ತು. ಆದರೇ ತರಾತೂರಿನಲ್ಲಿ ಮಾನ್ಯ ತಹಶಿಲ್ದಾರರು ತಮ್ಮ ಇಲಾಖೆಗೆ ಬಂದ್ ಅರ್ಜಿಗಳಿಗೆ ಆದಷ್ಟು ಬೇಗ ಕ್ರಮ ಕೈಗೊಂಡು ಉತ್ತರ ನೀಡುತ್ತೆವೆ ಎಂದು 11:30ಕ್ಕೆ ಪ್ರಾರಂಭವಾದ ಕಾರ್ಯಕ್ರಮವನ್ನು ಮಧ್ಯಾಹ್ನ 3 ಕ್ಕೆ ಮುಕ್ತಾಯಗೊಳಿಸಿದರು ಇದರಿಂದ ಸಾರ್ವಜನಿಕರು ನೀಡಿದ ಎಷ್ಟೋ ಅರ್ಜಿಗಳು ವೇದಿಕೆ ಮೇಲೆಯೃ ಬರಲಿಲ್ಲಾ, ಇದು ಕೇವಲ ನಾಮಕಾ ವ್ಯವಸ್ಥೆಗೆ ಕಾರ್ಯಕ್ರಮ ಮಾಡಿದಂತಾಗಿದೆ. ಇನ್ನೂ ಕೆಲವು ಇಲಾಖೆಯ ಅಧಿಕಾರಿಗಳು ಬೇಕಾಬಿಟ್ಟಿಯಾಗಿ ಉತ್ತರ ನೀಡಿದರೇ ಹೊರೆತು ಯಾವುದೇ ಸ್ಥಳದಲ್ಲಿಯೇ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡಲಿಲ್ಲ. ಇದು ಸಾರ್ವಜನಿಕರಿಗೆ ಬಾರಿ ನಿರಾಶೆಯಾಯಿತು.
15 ದಿನಗಳಲ್ಲಿ ಅರ್ಜಿ ವಿಲೇವಾರಿಗೆ ಸೂಚನೆ
ನಂತರ ಮಾತನಾಡಿದ ಜಮಖಂಡಿ ತಹಶೀಲ್ದಾರ್ ಅನೀಲ ಬಡಿಗೇರ, ಸಾರ್ವಜನಿಕರಿಂದ ಸ್ವೀಕರಿಸುವ ಪ್ರತಿಯೊಂದು ಅರ್ಜಿಯನ್ನು ಸಂಬಂಧಿಸಿದ ಅಧಿಕಾರಿಗಳು ಗಂಭೀರವಾಗಿ ಪರಿಶೀಲಿಸಿ, ಅರ್ಜಿ ಸ್ವೀಕರಿಸಿದ 15 ದಿನಗಳೊಳಗಾಗಿ ಅರ್ಜಿದಾರರಿಗೆ ತೃಪ್ತಿಯಾಗುವ ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
150ಕ್ಕೂ ಅಧಿಕ ಅರ್ಜಿಗಳು ಸ್ವೀಕರಿಸಲ್ಪಟ್ಟಿವೇ, ಸಾಧ್ಯವಾದಷ್ಟು ಅರ್ಜಿಗಳಿಗೆ ಸ್ಥಳದಲ್ಲಿಯೇ ಅಥವಾ ನಿಗದಿತ ಅವಧಿಯೊಳಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕುಎಂದರು. ಸಾರ್ವಜನಿಕರು ತಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ ಎಂಬ ವಿಶ್ವಾಸದಿಂದ ಅರ್ಜಿ ಸಲ್ಲಿಸುತ್ತಾರೆ. ಹೀಗಾಗಿ ಪ್ರತಿಯೊಂದು ಅರ್ಜಿಯ ಹಿಂದಿರುವ ಸಮಸ್ಯೆಯನ್ನು ಅರಿತು, ಅರ್ಜಿದಾರರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದರು.
ಮುಂದಿನ ಹಂತದಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಇದೇ ರೀತಿಯ ಕಾರ್ಯಕ್ರಮವನ್ನು ಮುಂದುವರಿಸಲಾಗುವುದು. ಸಾರ್ವಜನಿಕರಿಂದ ಸ್ವೀಕರಿಸುವ ಅರ್ಜಿಗಳಿಗೆ ಎಲ್ಲ ಇಲಾಖೆಗಳ ಅಧಿಕಾರಿಗಳು ಪ್ರಾಮುಖ್ಯತೆ ನೀಡಿ, ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಪರಿಗಣಿಸಿ, ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡಬೇಕು ಎಂದು ತಿಳಿಸಿದರು.
ಪ್ರಜಾಸೇವಾ ಆಂದೋಲನದ ಮುಖ್ಯ ಉದ್ದೇಶ ಸಾರ್ವಜನಿಕರ ಸಮಸ್ಯೆಗಳನ್ನು ನೇರವಾಗಿ ಆಲಿಸಿ, ಅವುಗಳಿಗೆ ಸೂಕ್ತ ಪರಿಹಾರ ಕಲ್ಪಿಸುವುದಾಗಿದೆ. ಅಧಿಕಾರಿಗಳು ಹಾಗೂ ಸಿಬ್ಬಂದಿ ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಸರ್ಕಾರದ ಸೇವೆಗಳು ಪರಿಣಾಮಕಾರಿಯಾಗಿ ಜನರಿಗೆ ತಲುಪುವಂತೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಜಮಖಂಡಿ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಹಾಗೂ ಮುಖಂಡರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಆಂದೋಲನದಲ್ಲಿ ಸದ್ದು ಮಾಡಿದ ಸಿಜಿರಿಯನ್ ಹೆರಗೆ ಹಗರಣ:
ಸಾಮಾಜಿಕ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆ ಜಮಖಂಡಿ ತಾಲ್ಲೂಕ ಅಧ್ಯಕ್ಷರಾದ ಸಿದ್ದು ಬಂಡಿವಡ್ಡರ ಮಾತನಾಡಿ, ಜಮಖಂಡಿ ತಾಲ್ಲೂಕಾದ್ಯಂತ ಮೆಡಿಕಲ್ ಹಾಗೂ ಕ್ಲೀನಿಕಗಳು ನಾಯಿ ಕೊಡೆಗಳಂತೆ ಹಬ್ಬಿದ್ದು ಯಾರೋದ ಹೆಸರು ಲೈಸನ್ಸ್ ಪಡೆದು ಯಾರೋ ನಡೆಸುತ್ತಿದ್ದಾರೆ ಎಷ್ಟೋ ಮೆಡಿಕಲಗಳಲ್ಲಿ ಅಧಿಕೃತ ಬಿಲ್ ನೀಡುವದಿಲ್ಲ ಎಂದು ಆರೋಪ ಮಾಡಿದರು.
ಸರ್ಕಾರಿ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಕೆಲವು ವೈದ್ಯರು ಸರ್ಕಾರಿ ಆಸ್ಪತ್ರೆಗೆ ಬಂದಂತಹ ಗರ್ಭಿಣಿ ಮಹಿಳೆಯರಿಗೆ ಮಗು ತಾಯಿಗೆ ಜೀವಕ್ಕೆ ಅಪಾಯವಿದೆ ಎಂದು ಭಯದ ವಾತಾವರಣ ಸೃಷ್ಟಿಸಿ ಸಿಜಿರಿಯನ್ ಮಾಡಿದರೆ ಉಳಿಯುತ್ತೆ ಅದಕ್ಕಾಗಿ ಇಲ್ಲಿ ಸರಿಯಾದ ವ್ಯವಸ್ಥೆ ಇಲ್ಲಾ ನಮ್ಮ ಖಾಸಗಿ ಆಸ್ಪತ್ರೆಗೆ ತೆಗೆದುಕೊಂಡು ಬನ್ನಿ ಎಂದು ಸಿಜಿರಿಯನ್ ಮಾಡಿಸುತ್ತಾರೆ.
ಇದಕ್ಕೆ ಪುಷ್ಟಿ ಎಂಬತೆ ಕೆಲವು ಆಶಾ ಕಾರ್ಯಕರ್ತೆಯರ ಖಾಸಗಿ ಹೆರಗೆ ಆಸ್ಪತ್ರೆಗೆ ಕರೆದುಕೊಂಡು ಹೋದರೇ 1000 ರಿಂದ 2000 ಕಮೀಷನ್ ತೆಗೆದುಕೊಳ್ಳುತ್ತಾರೆ ಇದು ಸಂಪೂರ್ಣವಾಗಿ ತನಿಖೆ ಮಾಡಬೇಕೆಂದರು. ಇದಲ್ಲದೆ ಕೆಲವು ಆಯುರ್ವೇದಿಕ ಪ್ರಾಕ್ಟಿಸ್ ಮಾಡಿದ ವೈದ್ಯರು ಅಲೋಪತಿ ಚಿಕಿತ್ಸೆ ನೀಡುತ್ತಿದ್ದಾರೆ. ರೋಗಿಗಳನ್ನು ತಮ್ಮ ಕ್ಲೀನಿಕಗಳಲ್ಲಿ ಅಡ್ಮೀಟ್ ಮಾಡಿಕೊಂಡು ಸಾವಿರಾರು ಬಿಲ್ ಮಾಡಿ ಹಣ ತುಂಬಿಸಿಕೊಳ್ಳುತ್ತಾರೆ ಆದರೇ ಅಧಿಕೃತ ಬಿಲ್ ನೀಡುವದಿಲ್ಲ ಇಂತಹ ಕ್ಲಿನಿಕ್ ಹಾಗೂ ಆಸ್ಪತ್ರೆಗೆ ಮೇಲೇ ಅಗತ್ಯ ಕ್ರಮಕೊಳ್ಳಬೇಕು ಎಂದರು.