ನೂತನ ಜಿಲ್ಲಾ ಅಧ್ಯಕ್ಷರಿಗೆ ಅಭಿನಂದನೆ
ಜಯ ಕರ್ನಾಟಕ ಜನಪರ ವೇದಿಕೆಯ ವತಿಯಿಂದ ಹುಬ್ಬಳ್ಳಿ–ಧಾರವಾಡದ ನೂತನ ಜಿಲ್ಲಾ ಅಧ್ಯಕ್ಷರಾಗಿ ನೇಮಕಗೊಂಡಿರುವ ಶ್ರೀ ಸದಾನಂದ ವಿ. ಡಂಗನವರ ಅವರಿಗೆ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಶ್ರೀ ಮುತ್ತು ಬೆಳ್ಳಕ್ಕಿ ಅವರ ನೇತೃತ್ವದಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಗದೀಶ ಜಾಧವ, ಪ್ರಭು ಹಂಚಿನಾಳ, ಸೂರಜ ಗೌಳಿ, ರವಿ ಪಾಟೀಲ, ಪ್ರವೀಣ ಯಾದವಾಡ, ಗೀತಾ ಚಿಕ್ಕಮಠ, ರಾಜು ಸವದತ್ತಿ, ರಾಘವೇಂದ್ರ ಮೊರಬದ, ರವಿಕುಮಾರ ಸುತಗಟ್ಟಿ, ಮಂಜುನಾಥ ಹೊಸಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.