ಮಂಡ್ಯದಲ್ಲಿ ನಿವೃತ್ತ ಬಿಸಿಎಂ ಹಾಸ್ಟೆಲ್‌ನ ನಿವೃತ್ತ ಸೂಪರಿಂಟೆಂಡೆಂಟ್ ಮೇಲೆ ಲೋಕಾಯುಕ್ತ ದಾಳಿ.. ದುಬಾರಿ ಮದ್ಯದ ಬಾಟಲಿಗಳು, ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳು ಪತ್ತೆ..!
ಮಾಹಿತಿ ಕೇಳಿದರೆ ಸಾಕು ಐದು ಸಾವಿರ ಮೂರು ಸಾವಿರ ಕೊಡಲ ಮುಂದಾಗುತ್ತಾರೆ ಬಿಸಿಎಂ ಇಲಾಖೆಯ ವಸ್ತುವಾರಿಗಳು.
ಲೋಕಾಯುಕ್ತ ದಾಳಿಯಲ್ಲಿ ಉಬ್ಬೆರಿಸುವ ಹಾಗೆ ಸಂಪಾದನೆ ಮಾಡಿರುವ…
ಬಿಸಿಎಂ ಇಲಾಖೆಯ ಮಾನ ಮರ್ಯಾದೆ ತಗದು ಕನ್ನ ಹಾಕಿದ ಹಾಸ್ಟೆಲ್ ಸೂಪರ್ಡೆಂಟ್.
ಬಡಮಕ್ಕಳ ಬಾಯಿಗೆ ಹೊಡೆದು ತನ್ನ ಹೆಂಡತಿ ಮಕ್ಕಳ ಬಾಯಿ ತುಂಬಿಸಿದ ಸೂಪರ್ಡೆಂಟ್.
ಮುಸರೆ ಇಲಾಖೆ ಎಂದು ಪ್ರತಿ ತಿಂಗಳ ಲಕ್ಷ ಲಕ್ಷ ಲೂಟಿ ಮಾಡುತ್ತಿರುವ ಬಿಸಿಎಂ ಇಲಾಖೆಯ ಕಳ್ಳ ಲೆಕ್ಕ ಬರೆಯುವ ಕಳ್ಳರು.
ವೀರಮಾರ್ಗ ನ್ಯೂಸ್ : ಮಂಡ್ಯ : ಬೆಳ್ಳಂಬೆಳಗ್ಗೆ ಮಂಡ್ಯದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಿವೃತ್ತ ಅಧಿಕಾರಿ ಶಿವರಾಜು ಮನೆ, ಫಾರಂ ಹೌಸ್‌ನಲ್ಲಿ ಶೋಧ.. ಮದ್ದೂರಿನ ವಿನಾಯಕ ಬಡಾವಣೆಯಲ್ಲಿರುವ ಮನೆ ಹಾಗೂ ಅವಸರಹಳ್ಳಿ ಫಾರಂ ಹೌಸ್ ಮೇಲೆ ದಾಳಿ ನಡೆದಿದೆ. ಬಿಸಿಎಂ ಹಾಸ್ಟೆಲ್‌ನ ನಿವೃತ್ತ ಸೂಪರಿಂಟೆಂಡೆಂಟ್ ಶಿವರಾಜು ಅವರ ಮನೆ ಹಾಗೂ ಫಾರಂ ಹೌಸ್‌ನಲ್ಲಿ ಅಧಿಕಾರಿಗಳು ಪರಿಶೀಲನೆ.
ಕಳೆದ ತಿಂಗಳು ಮದ್ದೂರಿನಲ್ಲಿ ಶಿವರಾಜು ನಿವೃತ್ತರಾಗಿದ್ದರು. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನೀಡಬೇಕಿದ್ದ ಸಾಮಗ್ರಿಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ ಎನ್ನಲಾಗಿದೆ. ದಾಳಿ ವೇಳೆ ಮನೆಯಲ್ಲಿ ದುಬಾರಿ ಮದ್ಯದ ಬಾಟಲಿಗಳು, ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಇನ್ಸ್‌ಪೆಕ್ಟರ್ ಬ್ಯಾಟರಾಯಗೌಡ ನೇತೃತ್ವದಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ದಾಖಲೆಗಳು ಹಾಗೂ ಪತ್ತೆಯಾಗಿರುವ ವಸ್ತುಗಳ ಪರಿಶೀಲನೆ ಮುಂದುವರಿದಿದೆ.!
ವರದಿ: ಚನ್ನೇಶ್ ಕೆ ಎಂ
ಬೆಂಗಳೂರು