ದೀಪಾವಳಿ ಪೂಜಾ ಮುಹೂರ್ತಗಳು.

ದೀಪಾವಳಿಯ ಶುಭಾಶಯಗಳು

ದೀಪಾವಳಿ ಪೂಜಾ ಮುಹೂರ್ತಗಳು

ಶ್ರೀ ಶಕೆ 1948 ಪರಾಭವನಾಮ ಸಂವತ್ಸರ ಅಶ್ವಿನ ಬ. 12 ಶುಕ್ರವಾರ ತಾ. 6-11-2026ನೆಯ ದಿವಸ ಗುರುದ್ವಾದಶಿ.

ಅಶ್ವಿನ ಬ. 13 ಶನಿವಾರ ತಾ. 7-11-2026ನೆಯ ದಿವಸ ಧನತ್ರಯೋದಶಿ ನೀರು ತುಂಬುವ ಹಬ್ಬ, ಮುಹೂರ್ತರಾಜವೆಂಬ ಶಿವಲಿಖಿತ ಚಕ್ರದ ಪ್ರಕಾರ ಬೆಳಿಗ್ಗೆ 3-36 ರಿಂದ 6-00ಗಂಟೆವರೆಗೆ ಅಮೃತ, ಮುಂಜಾನೆ 7-30 ರಿಂದ 9-00 ಗಂಟೆವರೆಗೆ ಅಮೃತ, (ಮುಂಜಾನೆ 9-00 ರಿಂದ 10-30 ಗಂಟೆವರೆಗೆ ರಾಹುಕಾಲ ಅಶುಭ) ಮಧ್ಯಾಹ್ನ 12-00 ರಿಂದ 1-30 ಗಂಟೆವರೆಗೆ ಶುಭಂ, ಮಧ್ಯಾಹ್ನ 1-30 ರಿಂದ 3-00 ಗಂಟೆವರೆಗೆ ಲಾಭಂ, ಮಧ್ಯಾಹ್ನ 3-00 ರಿಂದ 4-30ಗಂಟೆವರೆಗೆ ಧನಂ, ಸಾಯಂಕಾಲ 4-30 ರಿಂದ 6-00 ಗಂಟೆವರೆಗೆ ಲಾಭಂ.

ಅಶ್ವಿನ ಬ. 14 ರವಿವಾರ ತಾ. 8-11-2026ನೆಯ ದಿವಸ ನರಕ ಚತುರ್ದಶಿ, ರೂಪಚತುರ್ದಶಿ, ಮುಹೂರ್ತರಾಜವೆಂಬ ಶಿವಲಿಖಿತ ಚಕ್ರದ ಪ್ರಕಾರ ಮುಂಜಾನೆ 6-00 ರಿಂದ 8-24 ಗಂಟೆವರೆಗೆ ಅಮೃತ, ಮುಂಜಾನೆ 11-36 ರಿಂದ ಮಧ್ಯಾಹ್ನ 1-12 ಗಂಟೆವರೆಗೆ ಅಮೃತ, ಮಧ್ಯಾಹ್ನ 1-12 ರಿಂದ 2-00 ಗಂಟೆವರೆಗೆ ಮಹೇಂದ್ರ ವೇಳೆ ಶುಭ. ಮಧ್ಯಾಹ್ನ 3-00 ರಿಂದ 4-30 ಗಂಟೆವರೆಗೆ ಅಮೃತ, (ಸಾಯಂಕಾಲ 4-30 ರಿಂದ 6-00 ಗಂಟೆವರೆಗೆ ರಾಹುಕಾಲ ಅಶುಭ) ಸಾಯಂಕಾಲ 6-00 ರಿಂದ 7-30 ಗಂಟೆವರೆಗೆ ಶುಭಂ. ಈ ಪ್ರಕಾರ ಶುಭ ಸಮಯಗಳಿರುತ್ತವೆ.

ದೀಪಾವಳಿ ಅಮವಾಸೆ ಪೂಜಾ :- ಅಶ್ವಿನ ಬ.14 ರವಿವಾರ ತಾ. 8-11-2026 ನೆಯ ದಿವಸ ಮುಂಜಾನೆ 11-28 ಗಂಟೆಗೆ ಅಮವಾಸೆಯು ಆರಂಭವಾಗಿ ತಾ. 9-11-2026ನೆಯ ದಿವಸ ಸೋಮವಾರ ಮಧ್ಯಾಹ್ನ 12-31 ಗಂಟೆಗೆ ಮುಕ್ತಾಯವಾಗುವದು.

ತಾ. 9-11-2026 ಸೋಮವಾರ ಮುಹೂರ್ತರಾಜವೆಂಬ ಶಿವಲಿಖಿತ ಚಕ್ರದ ಪ್ರಕಾರ ಮುಂಜಾನೆ 6-00 ರಿಂದ 7-29 ಗಂಟೆವರೆಗೆ ಅಮೃತ (ಮುಂಜಾನೆ 7-30 ರಿಂದ 9-00 ಗಂಟೆವರೆಗೆ ರಾಹುಕಾಲ ಅಶುಭ), ಮುಂಜಾನೆ 9-12 ರಿಂದ 11-36 ಗಂಟೆವರೆಗೆ ಅಮೃತ, ಪ್ರಾಚೀನ ಶಿವಲಿಖಿತ ಚಕ್ರದ ಪ್ರಕಾರ ಮಧ್ಯಾಹ್ನ 12-00 ರಿಂದ 1-30 ಗಂಟೆವರೆಗೆ ಲಾಭಂ, ಮಧ್ಯಾಹ್ನ 1-30 ರಿಂದ 3-00 ಗಂಟೆವರೆಗೆ ಅಮೃತ, ಮಧ್ಯಾಹ್ನ 3-00 ರಿಂದ 4-30 ಗಂಟೆವರೆಗೆ ಲಾಭಂ, ಸಾಯಂಕಾಲ 4-30 ರಿಂದ 6-00 ಗಂಟೆವರೆಗೆ ಧನಂ, ರಾತ್ರಿ 7-30 ರಿಂದ 9-00 ಗಂಟೆವರೆಗೆ ಲಾಭಂ, ಮುಹೂರ್ತರಾಜವೆಂಬ ಶಿವಲಿಖಿತ ಚಕ್ರದ ಪ್ರಕಾರ ರಾತ್ರಿ 9-00 ರಿಂದ 10-00 ಗಂಟೆವರೆಗೆ ಅಮೃತ ಈ ಪ್ರಕಾರ ಶುಭ ಸಮಯಗಳಿರುತ್ತವೆ.

ಪಾಡ್ಯಪೂಜಾ :- ಕಾರ್ತಿಕ ಶು.1 ಮಂಗಳವಾರ ತಾ. 10-11-2026ನೆಯ ದಿವಸ ಬಲಿಪ್ರತಿಪದ ಬಲೀಂದ್ರ ಪೂಜೆ, ಪಾಡ್ಯಪೂಜೆ ಹಾಗೂ ಹೊಸವಹಿ ಪುಸ್ತಕ ಪೂಜೆಗೆ ಮುಹೂರ್ತ ಬೆಳಿಗ್ಗೆ 12-30 ರಿಂದ 2-42 ಗಂಟೆವರೆಗೆ ಸಿಂಹಲಗ್ನ ಶುಭ. ಬೆಳಿಗ್ಗೆ 2-43 ರಿಂದ 4-48 ವರೆಗೆ ಕನ್ಯಾಲಗ್ನ ಶುಭ. ಮುಹೂರ್ತರಾಜವೆಂಬ ಶಿವಲಿಖಿತ ಚಕ್ರದ ಪ್ರಕಾರ ಮುಂಜಾನೆ 6-00 ರಿಂದ 6-50 ಗಂಟೆವರೆಗೆ ಅಮೃತ. ಮುಂಜಾನೆ 10-48 ರಿಂದ ಮಧ್ಯಾಹ್ನ | 1-12 ಗಂಟೆವರೆಗೆ ಅಮೃತ. (ಮಧ್ಯಾಹ್ನ 3-00 ರಿಂದ 4-30 ಗಂಟೆವರೆಗೆ ರಾಹುಕಾಲ ಅಶುಭ). ಸಾಯಂಕಾಲ 4-40 ರಿಂದ 6-00 ಗಂಟೆವರೆಗೆ ಮಹೇಂದ್ರ ವೇಳೆ ಶುಭ. ರಾತ್ರಿ 8-24 ರಿಂದ 9-12 ಗಂಟೆವರೆಗೆ ಅಮೃತ. ಈ ಪ್ರಕಾರ ಶುಭ ಸಮಯಗಳಿರುತ್ತವೆ.