ಮೈತ್ರಿ ಹೋರಾಟಕ್ಕೆ ಸಂದಫಲ:
ತೀವ್ರ ಬರಪೀಡಿತ ತಾಲೂಕು ಘೋಷಣೆ
ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರು :
ಸರಕಾರ ಇತ್ತೀಚೆಗೆ ರಟ್ಟಿಹಳ್ಳಿ ಹೊರತುಪಡಿಸಿ ಹಾವೇರಿ ಜಿಲ್ಲೆಯ ಯಾವುದೇ ತಾಲೂಕಗಳು ಬರಗಾಲದಿಂದ ಹೊರಗಿದೆ ಎಂದು ಘೋಷಿಸಿ ರೈತ ಸಮುದಾಯದ ಪ್ರಬಲ ಹೋರಾಟಕ್ಕೆ ಗುರಿಯಾಗಿತ್ತು.
ಈ ಕುರಿತು ಇತ್ತೀಚಿಗೆ ನಗರದಲ್ಲಿ ಭಾರಿ ಪ್ರತಿಭಟನೆ ನಡೆಸಿ, ರಾಣೆಬೆನ್ನೂರು ತಾಲೂಕು ಬರಗಾಲ ಎಂದು ಘೋಷಿಸುವಂತೆ ಆಗ್ರಹಿಸಿ ಸರ್ಕಾರಕ್ಕೆ ತನ್ನ ಮನವಿ ಸಲ್ಲಿಸಿ ಒತ್ತಾಯಿಸಿದ್ದರು.
ಮುಂಜಾನೆ ಯಿಂದ ಸಂಜೆಯವರೆಗೂ, ಬಿಜೆಪಿ ಜೆಡಿಎಸ್ ಮೈತ್ರಿ ಪಕ್ಷದ ಎರಡು ನೂರಕ್ಕೂ ಹೆಚ್ಚು ಮುಖಂಡರು, ತಹಶೀಲ್ದಾರ್ ಕಚೇರಿ ಎದುರಿನ ಹುತಾತ್ಮ ಮೆಣಸಿನಹಾಳೆ ತಿಮ್ಮನಗೌಡರ ಪ್ರತಿಮೆ ಬಳಿ ಅನಿರ್ದಿಷ್ಟಾವಧಿ ಧರಣಿ,ಪ್ರತಿಭಟನೆ ನಡೆಸಿತ್ತು.
ಪ್ರಬಲ ಹೋರಾಟಕ್ಕೆ ಮಣಿದಿರುವ ಸರಕಾರ ರಾಣೆಬೆನ್ನೂರು ತಾಲೂಕು ಬರಗಾಲ ಪೀಡಿತ ತಾಲೂಕು ಎಂದು ಘೋಷಿಸಿ ಸಮಸ್ತ ರೈತ ಕುಲದವರಲ್ಲಿ ತಮ್ಮ ಹರ್ಷ ಮೂಡಿಸದೆ.
ಎಂದು ಈ ಕುರಿತು ಮಾಹಿತಿ ಹೊರದಿರುತ್ತಿದ್ದಂತೆ ತಾಲೂಕಿನ ರೈತರು ರೈತ ಮುಖಂಡರು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮುಖಂಡರು ಕಾರ್ಯಕರ್ತರು ತಮ್ಮ ಹರ್ಷ ವ್ಯಕ್ತಪಡಿಸಿ ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಅರುಣ್ ಕುಮಾರ್ ಪೂಜಾರ, ಮತ್ತು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಅವರು ತಮ್ಮ ಸರಕಾರ ಸದಾಕಾಲವೂ ರೈತರ ಪರವಾಗಿದೆ ಪ್ರತಿಪಕ್ಷಗಳು ರೈತರ ಮಾತನಾಡದೆ ರೈತ ವಿರೋಧಿ ಧೋರಣೆ ಅನುಸರಿಸಿ ರೈತರ ಮಗದಲ್ಲಿ ಆತಂಕ ಮೂಡಿಸಿತ್ತು. ಅಂತೂ ಪ್ರಬಲ ಹೋರಾಟಕ್ಕೆ ಇಂದು ಘೋಷಿಸಿರುವ ವರದಿಯಲ್ಲಿ ರಾಣೆಬೆನ್ನೂರು ತಾಲೂಕು ಬರಪೀಡಿತ ಪ್ರದೇಶವೆಂದು ಹೇಳಿದ್ದಾರೆ. ಸರ್ಕಾರದ ನಿಲುವು ಸ್ವಾಗತವಾಗಿದ್ದು, ಪುನಃ ಸಮಗ್ರ ಪರಿಶೀಲನೆ ಮಾಡಿ ಅಪಾರ ಹಾನಿ ಒಳಗೊಂಡ, ರೈತರು ಮತ್ತು ರೈತ ಮಾಲೀಕರಿಗೆ ಸೂಕ್ತ ಪರಿಹಾರ ಘೋಷಿಸಿ ಬೆಳೆ ಹಾನಿ ನಷ್ಟವನ್ನು ತುಂಬಿಕೊಡಲು ಮುಂದಾಗಬೇಕು. ಪುನ್ಹ ತಾರತಮ್ಯ ನೀತಿ ಅನುಸರಿಸಿದರೆ ರೈತ ಪರವಾಗಿ ಮತ್ತೆ ಬಹಿರಂಗವಾಗಿ ಬೀದಿಗೆಳಿದು ಹೋರಾಟ, ಧರಣಿ ಪ್ರತಿಭಟನೆ. ಪರಿಣಾಮ 15 ದಿವಸಗಳ ಅವಧಿಯಲ್ಲಿ ರಾಣೆಬೆನ್ನೂರು ತಾಲೂಕು ಬರಪೀಡಿತ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕನ್ನು ರಾಜ್ಯ ಸರ್ಕಾರ ತೀವ್ರ ಬರಪೀಡಿತ ಪ್ರದೇಶವೆಂದು ಘೋಷಿಸಿರುವುದಕ್ಕೆ ರೈತ ಸಂಘಟನೆಗಳು ಹಾಗೂ ರೈತಪರ ಹೋರಾಟಗಾರರು ಹರ್ಷ ವ್ಯಕ್ತಪಡಿಸಿದ್ದಾರೆ.ಕಳೆದ ವಾರ ರಾಣೇಬೆನ್ನೂರು ತಹಶೀಲ್ದಾರ್ ಕಚೇರಿ ಎದುರು ಬಿಜೆಪಿ, ಜೆಡಿಎಸ್ ಹಾಗೂ ವಿವಿಧ ರೈತಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಒತ್ತಾಯಿಸಲಾಗಿತ್ತು. ಮತ್ತು ರಾಣೇಬೆನ್ನೂರು ತಾಲೂಕಿನ ಮಾಜಿ ಶಾಸಕರು ಅರುಣಕುಮಾರ್ ಪೂಜಾರ ಅವರು ಸೆ.13ರಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರದ ಮೂಲಕ ಮನವಿ ಸಲ್ಲಿಸಿ ರಾಣೇಬೆನ್ನೂರು ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಆಗ್ರಹಿಸಿದ್ದರು..ಈ ಹೋರಾಟದ ಫಲವಾಗಿ ಇದೀಗ ರಾಣೇಬೆನ್ನೂರು ತಾಲೂಕನ್ನು ತೀವ್ರ ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಿಸಿದೆ ಎಂದು ಮಾಜಿ ಶಾಸಕರು ಅರುಣಕುಮಾರ್ ಪೂಜಾರ್ ಅವರು ತಿಳಿಸಿದ್ದಾರೆ…ರಾಣೇಬೆನ್ನೂರು ತಾಲೂಕಿನ ರೈತರ ಪರವಾಗಿ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ. ರೈತರ ಪರ ಹೋರಾಟ ನಿರಂತರವಾಗಿರಲಿದ್ದು, ರೈತರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಮುಂದೆಯೂ ಹೋರಾಟ ನಡೆಸಲಾಗುವುದು. ನಮ್ಮ ಹೋರಾಟಕ್ಕೆ ಫಲ ದೊರೆತಿದೆ” ಎಂದು ಅವರು ತಿಳಿಸಿದ್ದಾರೆ…