ಎನ್ಎಂಎಂಎಸ್ ಹಾಜರಾತಿ ಕಡ್ಡಾಯ
ತಾಪಂ ಸಹಾಯಕ ನಿರ್ದೇಶಕರಾದ ಕುಮಾರ ಪೂಜಾರ ಮಾಹಿತಿ / ಕುರ್ತಕೋಟಿ ಗ್ರಾಮದ ಬದು ನಿರ್ಮಾಣ ಸ್ಥಳ ಪರಿಶೀಲನೆ
ವೀರಮಾರ್ಗ ನ್ಯೂಸ್ ಗದಗ: ಉದ್ಯೋಗ ಖಾತ್ರಿ ಯೋಜನೆಯ ಸಮುದಾಯ ಕಾಮಗಾರಿಗಳಲ್ಲಿ ಎನ್ಎಂಎಂಎಸ್ ಹಾಜರಾತಿ ಕಡ್ಡಾಯವಾಗಿದ್ದು ಕೂಲಿಕಾರರು ಈ ಬಗ್ಗೆ ಜಾಗೃತ ವಹಿಸುವಂತೆ ತಾಪಂ ಸಹಾಯಕ ನಿರ್ದೇಶಕರಾದ (ಉಖಾ) ಕುಮಾರ ಪೂಜಾರ ಅವರು ಹೇಳಿದರು.
ಸೋಮವಾರ ತಾಲೂಕಿನ ಕುರ್ತಕೋಟಿ ಗ್ರಾಮದಲ್ಲಿ ಪ್ರಾರಂಭವಾಗಿರುವ ಸಮುದಾಯ ಬದು ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಉದ್ಯೋಗ ಖಾತ್ರಿ ಗ್ರಾಮೀಣ ಭಾಗದ ಅಕುಶಲ ಕಾರ್ಮಿಕರ ಅಗತ್ಯತೆಗಳನ್ನು ಪೂರೈಸುವಲ್ಲಿ ಯಶಸ್ವಿಯಾಗಿದೆ. ಬೇಸಿಗೆಯಲ್ಲಿ ಕೂಲಿಕಾರ್ಮಿಕರಿಗೆ ಕೆಲಸದ ಅಭಾವವಿರುತ್ತದೆ. ಇದರ ಪರಿಹಾರಕ್ಕಾಗಿ ಉದ್ಯೋಗ ಖಾತ್ರಿ ಸಂಜೀವಿನಿಯಂತೆ ಕಾರ್ಯನಿರ್ವಹಿಸುತ್ತಿದೆ. ಇದರ ಸದ್ಬಳಕೆ ಎಲ್ಲ ಗ್ರಾಮೀಣರ ಕೈಯಲ್ಲಿ ಇದೆ.

2025ರ ಎಪ್ರಿಲ್ ನಿಂದ ಕೂಲಿ ಮೊತ್ತ ಪರಿಷ್ಕರಿಸಲಾಗಿದ್ದು, ದಿನಕ್ಕೆ ₹ 370 ಮಾಡಲಾಗಿದೆ.
ಹಾಜರಾತಿಯಲ್ಲಿ ಎಸ್ಎಂಎಸ್ಎಸ್ ಆ್ಯಪ್ ಜಾರಿಗೆ ತಂದಿದ್ದು, ಎರಡು ಸಾರಿ ಹಾಜರಾತಿ ಕಡ್ಡಾಯವಾಗಿದೆ. ಅಳತೆ ಅನುಗುಣವಾಗಿ ಕೂಲಿ ಮೊತ್ತ ಪಾವತಿ ಮಾಡಲಾಗುತ್ತದೆ. ಬಿಎಫ್‌ಟಿ, ಜಿಕೆಎಂ ಮತ್ತು ಕಾಯಕ ಬಂದುಗಳು ಮಹಿಖಾ ಪಾಲ್ಗೊಳ್ಳುವಿಕೆ ಬಗ್ಗೆ ಹೆಚ್ಚು ಗಮನ ಕೇಂದ್ರಕರಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ತಾಪಂ ಐಇಸಿ ಸಂಯೋಜಕ ವೀರೇಶ ಬಸನಗೌಡ್ರ, ಎಸ್‌ಡಿಎ ಸಣ್ಣೀರಪ್ಪ ಪೂಜಾರ, ಟಿಎಇ ಪ್ರದೀಪ ನರೇಗಲ್ಲ, ಡಿಇಒ ಮೌಲಾಸಾಬ್ ಚಲ್ಲಮರದ, ಬಿಎಫ್‌ಟಿ ಸೋಮಶೇಖರ ತುರಬಿನ್, ಶಿವಾನಂದ ಹುಬ್ಬಳ್ಳಿ, ಇಮಾಮಸಾಬ್ ಖಾನಾಪುರ, ಬಸವರಾಜ ಮ್ಯಾಗೇರಿ, ಹುಸೇನಸಾಬ್ ಚಿಕ್ಕೊಪ್ಪ, ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರು ಹಾಗೂ ಇತರರು ಇದ್ದರು.