ರಾಮನವಮಿ ಜನಪ್ರೀಯ ಧಾರ್ಮಿಕ ಹಬ್ಬ : ಬಸವರಾಜ

ರಾಮನವಮಿ ಜನಪ್ರೀಯ ಧಾರ್ಮಿಕ ಹಬ್ಬ : ಬಸವರಾಜ
ವೀರಮಾರ್ಗ ನ್ಯೂಸ್ ಲಕ್ಷ್ಮೇಶ್ವರ :
ರಾಮನವಮಿ ಹಬ್ಬ ಸಕಲ ಹಿಂದೂ ಧರ್ಮದರಿಗೆ ಒಂದು ಜನಪ್ರಿಯ ಧಾರ್ಮಿಕ ಹಬ್ಬವಾಗಿದೆ. ಎಂದು ವಿಶ್ವ ಹಿಂದೂ ಪರಿಷತ್ ಲಕ್ಷ್ಮೇಶ್ವರ ಪ್ರಖಂಡದ ತಾಲೂಕ ಅಧ್ಯಕ್ಷ ಬಸವರಾಜ ಅರಳಿ ಹೇಳಿದರು.

ಅವರು ಪಟ್ಟಣದ ಐತಿಹಾಸಿಕ ಪ್ರಸಿದ್ಧ ಶ್ರೀ ಸೋಮೇಶ್ವರ ದೇವಸ್ಥಾನ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್ ಲಕ್ಷ್ಮೇಶ್ವರ ಪ್ರಖಂಡದ ವತಿಯಿಂದ ಶ್ರೀ ರಾಮ್ ನವಮಿ ಪ್ರಯುಕ್ತ ರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡುತ್ತ ಪ್ರಭು ಶ್ರೀ ರಾಮನ ಆದರ್ಶ ಗುಣಗಳನ್ನು ಪ್ರತಿಯೊಬ್ಬ ಹಿಂದೂಗಳು ಅಳವಡಿಸಿಕೊಳ್ಳಬೇಕು,ಅಂದಾಗ ಮಾತ್ರ ಶ್ರೀ ರಾಮನ ಕೃಪೆಗೆ ಪಾತ್ರರಾಗುತ್ತೇವೆ ಎಂದು ಹೇಳಿದರು.
ಇದೆ ವೇಳೆ ಭಕ್ತರಿಗೆ ಕೋಸಂಬರಿ ಪ್ರಸಾದವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ವಿಹಿಂಪ ತಾಲೂಕ ಉಪಾಧ್ಯಕ್ಷ ದೇವೇಂದ್ರಪ್ಪ ಗಡದ, ಪ್ರಕಾರ್ಯದರ್ಶಿ ರವಿ ಲಿಂಗಶೆಟ್ಟಿ,ವಿನಯ ಪಾಟೀಲ್, ಜ್ಞಾನಬೋ ಬೋಮಲೆ,ಶಿವಣ್ಣ ಗಿಡಿಬಿಡಿ,ಶಶಿಕಾಂತ ಕುಂಬಾರ,ಮಲ್ಲನಗೌಡ ಪಾಟೀಲ್, ರಾಜು ಗುಡಗೇರಿ,ದೇವಸ್ಥಾನ ಅರ್ಚಕ ರಾಘವೇಂದ್ರ ಪೂಜಾರ ಸಮೀರ ಪೂಜಾರ,ಸೇರಿದಂತೆ ಕಾರ್ಯಕರ್ತರು, ಮಹಿಳೆಯರು ಇದ್ದರು.

Leave a Reply

Your email address will not be published. Required fields are marked *