ಲಕ್ಷ್ಮೇಶ್ವರ : ದೂದಪೀರಾಂ ರವರ 136 ನೇ ಉರುಸು ಕಾರ್ಯಕ್ರಮಕ್ಕೆ ಸಕಲ ಸಿದ್ದತೆ.

ಲಕ್ಷ್ಮೇಶ್ವರ : ದೂದಪೀರಾಂ ರವರ 136 ನೇ ಉರುಸು ಕಾರ್ಯಕ್ರಮಕ್ಕೆ ಸಕಲ ಸಿದ್ದತೆ.
ವೀರಮಾರ್ಗ ನ್ಯೂಸ್ ಲಕ್ಷ್ಮೇಶ್ವರ :
ಈ ಭಾಗದ ಭಾವೈಕ್ಯತೆಯ ಕೇಂದ್ರವಾಗಿರುವ ನೂರಾರು ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿರುವ ದೂದಪೀರಾಂ ರವರ 136 ನೇ ಉರುಸು ಕಾರ್ಯಕ್ರಮವು ಇದೇ ಏಪ್ರೀಲ್ ದಿ.10 ರಿಂದ 14 ರವರೆಗೆ ವೈಭವದಿಂದ ನೆರವೇರಲಿದ್ದು, ಈ ಹಿನ್ನಲೆಯಲ್ಲಿ ದೂದಪೀರಾಂ ದರ್ಗಾ ಕಮೀಟಿ ವತಿಯಿಂದ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, ಸುಮಾರು ಹತ್ತಾರು ವಿವಿಧ ರಾಜ್ಯಗಳಿಂದ ಆಗಮಿಸುವ ಭಕ್ತರಿಗೆ ಯಾವುದೇ ತೊಂದರೆಯಾಗದoತೆ ಕ್ರಮ ವಹಿಸಲಾಗುತ್ತಿದೆ ಎಂದು ದೂದಪೀರಾಂ ದಗಾ ಕಮೀಟಿ ಅಧ್ಯಕ್ಷ ಸುಲೇಮಾನ ಕಣಕೆ ಮತ್ತು ಕಾರ್ಯದರ್ಶಿ ಸಾಹೇಬಜಾನ್ ಹವಾಲ್ದಾರ ಹೇಳಿದರು.
ಅವರು ಪಟ್ಟಣದ ದೂದನಾನಾ ಶಾದಿಮಹಲ್‌ನಲ್ಲಿ ಉರುಸು ಹಿನ್ನಲೆಯಲ್ಲಿ ಕರೆಯಲಾಗಿದ್ದ ಸಮಾಜ ಬಾಂಧವರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಪ್ರತಿವರ್ಷದಂತೆ ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು, ಕಳೆದ ಎರಡು ವರ್ಷಗಳಿಂದ ಚುನಾವಣೆಯ ಹಾಗೂ ಅದರ ಹಿಂದೆ ಕರೋನ ಕಾರಣಗಳಿಂದ ಸಾಂಕೇತಿಕವಾಗಿ ಮತ್ತು ಸಂಕ್ಷಿಪ್ತವಾಗಿ ಕಾರ್ಯಕ್ರಮಗಳನ್ನು ಸಂಪ್ರದಾಯದಂತೆ ನೆರವೇರಿಸಲಾಗಿತ್ತು,

ಆದರೆ ಈ ವರ್ಷ ವಿವಿಧ ಭಾಗಗಳಿಂದ ನಾಲ್ಕು ದಿನಗಳಲ್ಲಿ ಲಕ್ಷಾಂತರ ಭಕ್ತರು ಆಗಮಿಸುವದರಿಂದ ಅವರಿಗೆ ತೊಂದರೆಯಾಗದoತೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವದಕ್ಕೆ ಆಧ್ಯತೆ ನೀಡಲಾಗುತ್ತಿದೆ, ಕುಡಿಯುವ ನೀರು, ಸ್ವಚ್ಚತೆ, ಶೌಚಾಲಯ, ಪಾರ್ಕಿಂಗ್ ವ್ಯವಸ್ಥೆ ಎಲ್ಲವನ್ನು ಅಚ್ಚುಕಟ್ಟಾಗಿ ನಿಭಾಯಿಸುವ ನಿಟ್ಟಿನಲ್ಲಿ ಅನೇಕ ಉಪಕಮೀಟಿಗಳನ್ನು ಮಾಡಲಾಗಿದ್ದು, ಮುಸ್ಲಿಂ ಸಮಾಜದವರು ಸೇರಿದಂತೆ ವಿವಿಧ ಸಮಾಜದವರು ಈ ಕಾರ್ಯಕ್ಕೆ ಸಹಕಾರ ನೀಡುತ್ತಿದ್ದಾರೆ, ನೂರಾರು ವರ್ಷಗಳಿಂದ ಹಿಂದೂ-ಮುಸ್ಲಿ ಮತ್ತು ಸರ್ವ ಧರ್ಮದ ಸಮಾಜ ಬಾಂಧವರು ಇಲ್ಲಿನ ದೂದನಾನಾರವರಿಗೆ ಶೃದ್ದಾ ಭಕ್ತಿಯಿಂದ ನಡೆದುಕೊಳ್ಳುತ್ತಿದ್ದಾರೆ ಅದಕ್ಕಾಗಿ ಈ ವರ್ಷದ ಕಾರ್ಯಕ್ರಮದಲ್ಲಿ ಸಕಲ ಸಿದ್ದತೆಯೊಂದಿಗೆ ಬರುವ ಜನರ ಭದ್ರತೆ ವಿಷಯದಲ್ಲಿಯೂ ಕ್ರಮ ಕೈಗೊಳ್ಳಲಾಗಿದ್ದು, ಎಲ್ಲರೂ ಸೇರಿ ವ್ಯವಸ್ಥಿತವಾಗಿ ಕಾರ್ಯಕ್ರಮ ನೆರವೇರಿಸೋಣ ಎಂದರು.
ಹಿರಿಯ ಮುಖಂಡ ದಾದಾಪೀರ ಮುಚ್ಚಾಲೆ ಮಾತನಾಡಿ ದೂದಪೀರಾಂ ರವರು ಭಾವೈಕ್ಯತೆಯನ್ನು ಸಾರಿದ ಮಹಾಪುರುಷರಾಗಿದ್ದು, ದೂದನಾನಾ ದರ್ಗಾ ಇಂದು ಭಕ್ತಿ ಮತ್ತು ಜಾಗೃತ ಕೇಂದ್ರವಾಗಿ ಬೆಳೆದು ನಿಂತಿದೆ. ಇಂದು ದೇಶಾದ್ಯಂತ ಸಾವಿರಾರು ಭಕ್ತರು ಈ ಕ್ಷೇತ್ರಕ್ಕೆ ಆಗಮಿಸಿ ತಮ್ಮ ಕಷ್ಟ ಕಾರ್ಪಣ್ಯಗಳಿಂದ ಮುಕ್ತಿ ಹೊಂದುತ್ತಿದ್ದಾರೆ. ನಾಡಿನ ಅನೇಕ ಭಕ್ತರ ಸಹಕಾರದಿಂದ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯ ಅಗತ್ಯ ಸೌಲಭ್ಯಗಳನ್ನು ಮಾಡಲಾಗಿದೆ ಎಂದು ಹೇಳಿದರು.

ಈ ವೇಳೆ ಅಂಜುಮನ್ ಇಸ್ಲಾಂ ಕಮೀಟಿ ಅಧ್ಯಕ್ಷ ಎಂ.ಎಂ.ಗದಗ, ಇರ್ಫಾನ್‌ಬೇಗ್ ಮಿರ್ಜಾ, ದಾದಾಪೀರ ಕಾರಡಗಿ, ಅಕ್ಬರ್, ಖಾಜಾ ಜಮಖಂಡಿ, ಖಲಂದರ ಸೂರಣಗಿ, ಸಾಧಿಕ್ ಶಮಲೆವಾಲೆ, ಗೌಸಸಾಬ ಜಮಖಂಡಿ, ನೂರಅಹ್ಮದ ಸಿದ್ದಿ, ಜಮೀಲಅಹ್ಮದ್ ಸೂರಣಗಿ, ಎನ್.ಎಂ.ಗದಗ, ಬಾಷಾಸಾಬ ಮುಲ್ಲಾ, ಝಾಕೀರಹುಸೇನ್ ಹವಾಲ್ದಾರ ಸೇರಿದಂತೆ ಕಮೀಟಿ ಸದಸ್ಯರು ಮತ್ತಿತರರು ಇದ್ದರು.
-ದಿ.10 ರಂದು ಗುರುವಾರ ಗಂಧ, ದಿ.11 ಶುಕ್ರವಾರ ಉರುಸು, ಗಲೀಫ, ದಿ.13 ರವಿವಾರ ಉತ್ತರಪ್ರದೇಶದ ಕಿಚೋಚಾ ಶರೀಪದ ಹಜರತ್ ಮೌಲಾನಾ ಸೈಯದ್ ಸಮದಾನಿ ಮಿಯಾ ಅಶ್ರಪಿ ಇವರಿಂದ ವಾಜಬಯಾನ್, ದಿ.14 ರಂದು ಸೋಮವಾರ ರಾತ್ರಿ 9 ಗಂಟೆಗೆ ಮುಂಬಯಿ ಇಪ್ತೆಕಾರಿ ಸಹೋದರರು ಮತ್ತು ದೆಹಲಿಯ ಅಕ್ರಮ್ ಅಸ್ಲಮ್ ವಾರ್ಸಿ ಇವರಿಂದ ಖವ್ಬಾಲಿ ನಡೆಯಲಿದೆ.

Leave a Reply

Your email address will not be published. Required fields are marked *