ರಕ್ತವನ್ನ ದಾನ ಪಡೆಯುವ ಹೊರೆತು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ : ಡಾ. ವಿರೇಶ
ವೀರಮಾರ್ಗ ನ್ಯೂಸ್ ಶಿಗ್ಗಾವಿ : ರಕ್ತವನ್ನು ದಾನದ ಮೂಲಕ ಪಡೆಯಬಹುದೇ ಹೊರೆತು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಆ ಹಿನ್ನಲೆಯಲ್ಲಿ ಸ್ವಯಂ ಪ್ರೇರಿತರಾಗಿ ರಕ್ತ ದಾನಮಾಡುವ ಮೂಲಕ ಆಪತ್ತಿನಲ್ಲಿರುವ ಮತ್ತೋಂದು ಜೀವಕ್ಕೆ ಉಸಿರಾಗುವಂತೆ ರಾಣೆಬೆನ್ನೂರ ರಕ್ತನಿಧಿ ಕೇಂದ್ರದ ಡಾ.ವಿರೇಶ ಹೇಳಿದರು.

ತಾಲೂಕಿನ ಗುಡ್ಡದಚನ್ನಾಪುರ ಗ್ರಾಮದ ಚನ್ನಕೇಶವ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆ, ರಕ್ತನಿಧಿ ಕೇಂದ್ರ ರಾಣೆಬೆನ್ನೂರ ಇವರ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರ ಕಾರ್ಯಕ್ರಮವನ್ನುದ್ದೇಸಿಸಿ ಮಾತನಾಡಿದ ಅವರು, ಯುವಕರು ಸಾತ್ವಿಕ ಆಹಾರ ಸೇವನೆಯಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ರಕ್ತದಾನ ಮಾಡುವುದರಿಂದ ನಿಮ್ಮಲ್ಲಿರುವ ಕೊಬ್ಬಿನಾಂಶ ಕಡಿಮೆಯಾಗಿ ಹೃದಯಾಘಾತ ತಡೆಯಬಹುದಲ್ಲದೇ, ದೇಹದಲ್ಲಿ ಹೊಸರಕ್ತ ಉತ್ಪತ್ತಿಯಾಗಿ ಆರೋಗ್ಯದ ಜೋತೆಗೆ ಉಲ್ಲಾಸಮಯ ಜೀವನ ನಡೆಸಬಹುದಾಗಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಹೇಮಂತಕುಮಾರ ಮಾತನಾಡಿ, ರಕ್ತದಾನ ಮಾಡುವುದಕ್ಕೆ ಭಯಪಡುವ ಅಗತ್ಯ ಇಲ್ಲ. ಶಸ್ತ್ರ ಚಿಕಿತ್ಸೆ, ಅಫಘಾತಕ್ಕೆ ಒಳಗಾದವರಿಗೆ ತುರ್ತು ರಕ್ತದ ಅವಸ್ಯಕತೆ ಇರುತ್ತದೆ. ಅಂತಹ ಸಂದರ್ಬದಲ್ಲಿ ದಾನಿಗಳಿಂದ ಸಂಗ್ರಹಿಸಲಾದ ರಕ್ತವನ್ನು ಆಪತ್ತಿನಲ್ಲಿರುವವರಿಗೆ ನೀಡಿ ಅವರ ಜೀವವನ್ನು ಉಳಿಸ ಬಹುದು. ಅದರ ಪುಣ್ಯ ದಾನಿಗಳಿಗೆ ಲಬಿಸಲಿದೆ ಎಂದು ಹೇಳಿದರು.
ಪ್ರಥಮವಾಗಿ ಪ್ರಾಂಶುಪಾಲರು, ಶಿಬ್ಬಂದಿಗಳು ರಕ್ತವನ್ನು ದಾನ ಮಾಡುವಮೂಲಕ ವಿದ್ಯಾರ್ಥಿಗಳಿಗೆ ಪ್ರೇರಣೆಯಾದರು. ನಂತರ ೫೦ ಕ್ಕೀಂತಲೂ ಹೆಚ್ಚು ವಿದ್ಯಾರ್ಥಿಗಳು ರಕ್ತದಾನಮಾಡಿದರು.

ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಶಿದ್ದಲಿಂಗಪ್ಪ ಕರಿಯಣ್ಣನವರ, ಮಮತಾ, ತುಳಜಾ, ಜಬೀನಾಭಾನು, ರೇಖಾ, ವೀಣಾ, ರಾಮಲಿಂಗೇಶ ಪ್ಯಾಟಿ, ಪ್ರವೀಣಕುಮಾರ, ಡಾ.ನಾಗರಾಜ ಹಂಚಿನಮನಿ, ಹನಮಂತ ಅಂದಾನಪ್ಪನವರ, ಸೋಮಶೇಖರ, ರಾಜೇಶ್ವರಿ, ಶಬನಮ್, ಶಿಲ್ಫಾ ಹಾಲನವರ, ಶಾತಾಜ್ ಬೇಗಂ ಸೇರಿದಂತೆ ಕಾಲೇಜಿನ ಸಿಬ್ಬಂದಿಗಳು, ವಿದ್ಯಾರ್ಥಿಗಳು, ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.