ಕೆ.ಆರ್.ಪೇಟೆ ಪಟ್ಟಣದ ಮೈಸೂರು ಚನ್ನರಾಯಪಟ್ಟಣ ರಸ್ತೆಯ ಹೇಮಾವತಿ ಬಡಾವಣೆಯಲ್ಲಿರುವ ಶ್ರೀ ಮಾರುತಿ ಸುಜುಕಿ ಮೋಟಾರ್ ಬೈಕ್ ಷೋ ರೂಮ್ ನಲ್ಲಿ ನಡೆದ ಸಮಾರಂಭದಲ್ಲಿ ಆನಂದೇಗೌಡ ಅವರು ಲ್ಯಾಪ್ ಟಾಪ್, ಮೊಬೈಲ್ ಚಾರ್ಜಿಂಗ್ ಸೇರಿದಂತೆ ಅತ್ಯಾಧುನಿಕ ಫಿಚರ್ಸ್ ಸೌಲಭ್ಯಗಳನ್ನು ಹೊಂದಿರುವ ಸುಜುಕಿ ಎಕ್ಸಸ್ ಮೋಟಾರ್ ಬೈಕ್ ಅನ್ನು ಬಿಡುಗಡೆ ಮಾಡಿ ಯುವ ಜನರು ಹಾಗೂ ವಿದ್ಯಾರ್ಥಿಗಳು ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಮೋಟಾರ್ ಬೈಕ್ ಚಾಲನೆ ಮಾಡಬೇಕು. ಬೈಕ್ ಚಾಲನೆ ಮಾಡುವ ಸಮಯದಲ್ಲಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿರಬೇಕು ಎಂದು ಕಿವಿ ಮಾತು ಹೇಳಿದರು.

ಮಾರುತಿ ಸುಜುಕಿ ಮೋಟಾರ್ ಬೈಕ್ ಷೋ ರೂಮ್ ಮಾಲೀಕರಾದ ಸಾದುಗೋನಹಳ್ಳಿ ಮಂಜುನಾಥ್ ಮಾತನಾಡಿ ಅತ್ಯಾಧುನಿಕ ಫಿಚರ್ ಗಳನ್ನು ಹೊಂದಿರುವ ದೇಶದ ಮಾರುಕಟ್ಟೆಗೆ ನಮ್ಮ ಸುಜುಕಿ ಎಕ್ಸಸ್ ಮೋಟಾರ್ ಬೈಕ್ ಇಂದು ದೇಶಾಧ್ಯoತ ಬಿಡುಗಡೆಯಾಗುತ್ತಿದ್ದು ನಮ್ಮ ಕೆ.ಆರ್.ಪೇಟೆ ಮಾರುತಿ ಸುಜುಕಿ ಷೋ ರೂಮ್ ನಲ್ಲಿಯೂ ಸಾಂಕೇತಿಕವಾಗಿ ಬೈಕನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ ಗ್ರಾಹಕರು ಉತ್ತಮ ಮೈಲೇಜ್ ಇರುವ ಸುಜುಕಿ ಎಕ್ಸಸ್ ಬೈಕನ್ನು ಕೊಂಡುಕೊಳ್ಳುವ ಜಾಣ್ಮೆ ಮೆರೆಯುವ ಜೊತೆಗೆ ಸಂತೋಷದಿಂದ ಸುಜುಕಿ ಎಕ್ಸಸ್ ಬೈಕ್ ಅನ್ನು ನಿಮ್ಮ ಮನೆಗೆ ಕೊಂಡೊಯ್ಯಬೇಕು ಎಂದು ಮನವಿ ಮಾಡಿದರು.ಮುಖಂಡರಾದ ಸಣ್ಣ ಲಿಂಗೇಗೌಡ, ಮೊದೂರು ಮಂಜು, ಪ್ರಥಮ ದರ್ಜೆ ಗುತ್ತಿಗೆದಾರ ಸಂತೋಷ್, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಕೆ.ಆರ್. ನೀಲಕಂಠ, ಪುರಸಭೆ ಸದಸ್ಯ ಡಿ.ಪ್ರೇಮಕುಮಾರ್, ಕೆ. ದಯಾನಂದ ಸೇರಿದಂತೆ ನೂರಾರು ಯುವ ಜನರು ಸುಜುಕಿ ಎಕ್ಸಸ್ ಬೈಕ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು. *ವರದಿ.ಎಂ.ಕೆ.ಹರಿಚರಣ ತಿಲಕ್ , ಕೃಷ್ಣರಾಜಪೇಟೆ, ಮಂಡ್ಯ*.