ಪ್ರಭಾವತಿ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ದೇಹ ಪತ್ತೆ…

ಜನ ವಾರ್ತೆ ನಾಗರಾಜ್ ಪತ್ನಿ ಪ್ರಭಾವತಿ ಸಾವು
ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ದೇಹ ಪತ್ತೆ…

ನಾವು ಹೇಗೆ ಬದುಕ್ಕಿದ್ದೇವೆ ಎನ್ನುವುದಕ್ಕಿಂತ,,

ಶರಣರ ನಡೆ ಮರಣದಲ್ಲಿ ನೋಡು ಅನ್ನುವ ಗಾದೆ ಮಾತು ಮಾಯವಾಗುತಿದ್ದೆ.

ವೀರಮಾರ್ಗ ನ್ಯೂಸ್ :ಶಿವಮೊಗ್ಗ ಜಿಲ್ಲಾ : ಜನ ವಾರ್ತೆ ಪತ್ರಿಕೆ ಮಾಲೀಕ ದಿವಂಗತ ತೀರ್ಥಹಳ್ಳಿ ನಾಗರಾಜ್ ಅವರ ಧರ್ಮಪತ್ನಿ ಶ್ರೀಮತಿ ಪ್ರಭಾವತಿ(70ವರ್ಷ) ಅವರ ಮೃತಶರೀರವು ಶಿವಮೊಗ್ಗದ ರವೀಂದ್ರ ನಗರದಲ್ಲಿರುವ ಅವರ ಮನೆಯಲ್ಲಿ ಪತ್ತೆಯಾಗಿದೆ.


ಪ್ರಭಾವತಿಯವರು ಹಲವು ದಿನಗಳ ಹಿಂದೆ ಸಾವನ್ನಪ್ಪಿರುವ ಶಂಕೆ ಇದೆ ಮೃತ ದೇಹ ಸಂಪೂರ್ಣ ಕೊಳೆತು ದುರ್ವಾಸನೆ ಹರಡಿತ್ತು ಅಕ್ಕಪಕ್ಕದ ನಿವಾಸಿಗಳು ನೀಡಿದ ದೂರಿನ ಮೇಲೆ ಪೊಲೀಸರು ಸ್ಥಳ ಪರಿಶೀಲಿಸಿದಾಗ ಪ್ರಭಾವತಿ ಅವರ ಮೃತ ಶರೀರ ಪತ್ತೆಯಾಗಿದೆ. ಅನಾರೋಗ್ಯ ಪೀಡಿತರಾಗಿದ್ದ ಪ್ರಭಾವತಿ ಬೃಹತ್ ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು 3 ಹೆಣ್ಣು ಮಕ್ಕಳು ವಿವಾಹವಾಗಿ ಬೇರೆ ಕಡೆಗಳಲ್ಲಿ ನೆಲೆಸಿದ್ದಾರೆ.
ಪ್ರಭಾವತಿ ಅವರ ಶರೀರದ ಆಸುಪಾಸಿನಲ್ಲೇ ಅವರ ಸಾಕು ನಾಯಿಯು ಮೃತ ಸ್ಥಿತಿಯಲ್ಲಿ ಪತ್ತೆಯಾಗಿದೆ.
3 ದಶಕದ ಹಿಂದೆ ಶಿವಮೊಗ್ಗ ಜಿಲ್ಲೆಯ ಯಶಸ್ವಿ ಉದ್ಯಮಿ ಎಂದೆ ಗುರುತಿಸಲ್ಪಡುತ್ತಿದ್ದ ತೀರ್ಥಹಳ್ಳಿ ನಾಗರಾಜ್ ಜನ ವಾರ್ತೆ ಪತ್ರಿಕೆ ರಿಯಲ್ ಎಸ್ಟೇಟ್ ವ್ಯವಹಾರ ಗುತ್ತಿಗೆ ವ್ಯವಹಾರ ಟ್ರಾನ್ಸ್ಪೋರ್ಟ್ ವ್ಯವಹಾರಗಳಲ್ಲಿ ಯಶಸ್ವಿ ಆಗಿದ್ದರು. ಆಗಿನ ಮುಖ್ಯಮಂತ್ರಿ, ಬಂಗಾರಪ್ಪ ಅವರ ನಿಕಟ ವರ್ತಿಗಳಲ್ಲಿ ನಾಗರಾಜ್ ಒಬ್ಬರಾಗಿದ್ದರು.
ಆನಂತರದಲ್ಲಿ ವ್ಯವಹಾರಗಳಲ್ಲಿ ನಷ್ಟ ಸಂಭವಿಸಿ ನಾಗರಾಜ್ ಆರ್ಥಿಕ ಸಂಕಷ್ಟಕ್ಕೀಡಾಗಿದ್ದರು. ವರ್ಷದ ಹಿಂದೆ ನಾಗರಾಜ್ ವಾಹನ ಅಪಘಾತಕ್ಕೀಡಾಗಿ ಚೇತರಿಸಿ ಕೊಂಡಿದ್ದರು ಸ್ವಲ್ಪ ದಿನಗಳ ಅಂತರದಲ್ಲಿ ಅನಾರೋಗ್ಯದಿಂದ ನಿಧನ ಹೊಂದಿದ್ದರು.
ಪತಿಯ ನಿಧನದ ನಂತರ ಪ್ರಭಾವತಿ ಒಂಟಿಯಾಗಿ ವಾಸಿಸುತ್ತಿದ್ದರು..


ನಾಗರಾಜ್ ಅವರ ಕುಟುಂಬ ಶ್ರೀಮಂತಿಕೆ ವೈಭವದಿಂದ ಬಾಳಿ ಬದುಕಿದ ಕುಟುಂಬ ಅಂತಿಮ ಕಾಲದಲ್ಲಿ ಈ ರೀತಿಯಾಗಿದ್ದು ನಿಜಕ್ಕೂ ದುರಂತ.. ವಿಷಾದನೀಯ…