ಪೂಜೆ ಹೆಸರಿನಲ್ಲಿ ಮಹಿಳೆಗೆ 2.5 ಕೋಟಿ ವಂಚಿಸಿದ ಆರೋಪಿಗಳು..

ಪೂಜೆ ಹೆಸರಿನಲ್ಲಿ ಮಹಿಳೆಗೆ 2.5 ಕೋಟಿ ವಂಚಿಸಿದ ಆರೋಪಿಗಳು…ಮನೆ ಮಾರಿ ವಂಚಕರಿಗೆ ಹಣ ನೀಡಿದ್ದ ದೂರುದಾರ ಮಹಿಳೆ..

ವೀರಮಾರ್ಗ ನ್ಯೂಸ್ : ದುಷ್ಟ ಶಕ್ತಿ ನಿವಾರಿಸುವ ನೆಪದಲ್ಲಿ ಹಣ ಪಡೆದು ವಂಚಕರು ಎಸ್ಕೇಪ್..2.5 ಕೋಟಿ ಕೊಟ್ರೆ 10 ಕೋಟಿ ಕೊಡೋದಾಗಿ ವಂಚನೆ..ರಿಸರ್ವ್ ಬ್ಯಾಂಕ್ ನಿಂದ 500 ಕೋಟಿ ಬಿಡಿಸಲು ಹಣಕ್ಕಾಗಿ ಮನವಿ..ಚಾಮರಾಜಪೇಟೆ ನಿವಾಸಿ ಮಹಿಳೆ ಕುಮದಾ ಎಂಬುವವರಿಗೆ ವಂಚನೆ..ಮೂಲತಃ ಆಂಧ್ರಪ್ರದೇಶ ಮೂಲದ ವಂಚಿತ ಮಹಿಳೆ ಕುಮುದಾ..ಮನೆಯ ಮೇಲೆ ಸಾಲ ಪಡೆಯಲು ಪರಿಚಿತರಾಗಿದ್ದ ಮಧ್ಯವರ್ತಿಗಳು..


ನಕಲಿ ಬಾಬಾ ಅಪ್ಸರ್ ಪಾಷಾ,ಮಧ್ಯವರ್ತಿಗಳಾದ ಶಂಕರ್,ಭರತ್ ವಿರುದ್ಧ FIR..ಮೂವರ ವಿರುದ್ಧ ಸಿಸಿಬಿಯಲ್ಲಿ ಪ್ರಕರಣ ದಾಖಲು,ತನಿಖೆ..ಕುಮುದಾ ಪುತ್ರ ಬೈಕ್ ಅಪಘಾತ ಒಂದರಲ್ಲಿ ಮೃತಪಟ್ಡಿದ್ದ..ಮಗನ ಸಾವಿಗೆ ಮನೆಗೆ ಹೊಕ್ಕ ದುಷ್ಡ ಶಕ್ತಿಗಳೇ ಕಾರಣ ಎಂದು ನಂಬಿಸಿದ್ರು..
ಬಾಬಾನ ಪರಿಚಯಿಸಿ 8 ಲಕ್ಷ ಪಡೆದು ಮನೆಯಲ್ಲಿ ಪೂಜೆ ಮಾಡಿದ್ರು..ರಿಸರ್ವ್ ಬ್ಯಾಂಕ್ ನಿಂದ ನಮಗೆ 500 ಕೋಟಿ ಹಣ ಬರುತ್ತೆ..ಸದ್ಯ 2.5 ಕೋಟಿ ಸಾಲವಾಗಿ ಕೊಟ್ಟರೆ ಬಳಿಕ 10 ಕೋಟಿ ಕೊಡೋದಾಗಿ ವಂಚನೆ..ಚಾಮರಾಜಪೇಟೆ ಮನೆಯನ್ನ 8.5 ಕೋಟಿಗೆ ಮಾರಾಟ ಮಾಡಿದ್ದ ಕುಮುದಾ..
ಮನೆ ಮಾರಾಟದ ಹಣದಲ್ಲಿ 2.5 ಕೋಟಿ ಕೊಟ್ಟು ವಂಚನೆಗೊಳಗಾದ ಕುಮುದಾ..ಹಣ ಕೇಳಿದಾಗ ಮಹಿಳೆಗೆ ಕೊಲೆ ಮಾಡೋದಾಗಿ ಬೆದರಿಕೆ..ಸುಮಾರು ಎಂಟು ಲಕ್ಷ ಹಣ ಖರ್ಚು ಮಾಡಿಸಿ ಪೂಜೆ ಮಾಡಿದ್ದ.ರಾತ್ರಿ 12 ಗಂಟೆಯಿಂದ ಕೆಳಗಿನ ಜಾವದ ವರೆಗೂ ಪೂಜೆ ಮಾಡಿಸಿದ್ದ.ಹೋಮಕ್ಕೆ ಬಳಸಿದ್ದ ಪೂಜಾ ಸಾಮಗ್ರಿಗಳನ್ನು ಕೆರೆಯಲ್ಲಿ ಬಳಸಬೇಕೆಂದು ಹೇಳಿದ್ದ.ತಾನೇ ಕರೆದುಕೊಂಡು ಹೋಗಿ ಕೆರೆಯಲ್ಲಿ ಬಿಡಿಸಿದ್ದ.
ಯಾವಾಗ ತಾವು ಮೋಸ ಹೋಗಿರೋದು ಗೊತ್ತಾಗಿ ಕೇಳಿದಾಗ.ಹಲವು ಬಾರಿ ಕೆಆರ್ ನಗರ, ಮೈಸೂರಿಗೆ ಕರೆಸಿಕೊಂಡು ಇಡೀ ದಿನ ಸತಾಯಿಸಿದ್ದ.ಬೇರೆ ಬೇರೆ ಹರಳುಗಳನ್ನು ನೀಡಿ ಮನೆಯಲ್ಲಿ ಇಡಿ ಎಂದು ನಂಬಿಸಿದ್ದ.
ಭರತ್ ಎನ್ನುವ ಹೆಸರಿಟ್ಟುಕೊಂಡಿದ್ದ ಕೆಆರ್ ಪುರದ ದೇವರಾಜ್. ಅಲ್ಲಿ ಕೂಡ ಹಲವರಿಗೆ ಮೋಸ ಮಾಡಿದ್ದಾನೆ.
ಹಣ ಕಳೆದುಕೊಂಡ ಮಹಿಳೆ ನ್ಯಾಯಕ್ಕಾಗಿ ಕಣ್ಣೀರು ಹಾಕ್ತಿದ್ದಾರೆ..

ವರದಿ: ಚನ್ನೇಶ್ ಕೆ ಎಂ
ಬೆಂಗಳೂರು.