ಶಿಕ್ಷಕ ವೃತ್ತಿಗೆ ಬರಬೇಕಾದರೆ ಪೂರ್ವ ಜನ್ಮದ ಪುಣ್ಯದ ಫಲ.

ಶಿಕ್ಷಕ ವೃತ್ತಿಗೆ ಬರಬೇಕಾದರೆ ಪೂರ್ವ ಜನ್ಮದ ಪುಣ್ಯದ ಫಲ ಇರಬೇಕು – ಶ್ಯಾಮಸುಂದರ ಅಡಿಗ

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೆಬೆನ್ನೂರು : ಸಮಾಜದಲ್ಲಿ ಶಿಕ್ಷಕ ವೃತ್ತಿಗೆ ಯಾರೇ ಬರಲಿ ಅವರು ಪೂರ್ವಜನ್ಮದ ಪುಣ್ಯವಂತವರಾಗಿರಬೇಕು, ಅಂಥವರು ಮಾತ್ರ ಈ ಪವಿತ್ರವಾದ ಶಿಕ್ಷಣ ಕ್ಷೇತ್ರಕ್ಕೆ ಬರಲು ಸಾಧ್ಯವಿದೆ. ಗುರು ಎನ್ನುವ ಪದಸ್ಥಾನ ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕ
ಅವಕಾಶವನ್ನು ಶಿಕ್ಷಕರು ತಮ್ಮ ಮಕ್ಕಳ ಪರಿಪೂರ್ಣ ಶಿಕ್ಷಣಕ್ಕೆ ಮೀಸಲಾಗಿಟ್ಟದ್ದರೆ, ಸಮಾಜ ಎಂದಿಗೂ ಅವರನ್ನು ಎಂದೆಂದಿಗೂ ಮರೆಯುವುದಿಲ್ಲ ಎಂದು ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮ ಸುಂದರ ಅಡಿಗ ಹೇಳಿದರು.

ಅವರು ತಾಲೂಕಿನ ದೇವರಗುಡ್ಡ (ಗುಡ್ಡ ಗುಡ್ಡಾಪುರ ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಅಲ್ಲಿನ ಪ್ರಧಾನ ಗುರುಮಾತೆ ಶ್ರೀಮತಿ ನಿರ್ಮಲಾ ಕೃಷ್ಣಕುಮಾರ ಮಾನೆ ಅವರ ಸೇವಾ ನಿವೃತ್ತಿ ನಿಮಿತ್ತ ಆಯೋಜಿಸಿದ್ದ, ಅಭಿನಂದನಾ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ನಿರ್ಮಲ ಮಾನೆ ಆವರು ತಾವು ಕಂಡಂತೆ ಕೇವಲ ಶಿಕ್ಷಕಿಯಾಗದೆ, ಜೊತೆ, ಜೊತೆಗೆ ವೃತ್ತಿ ಶಿಕ್ಷಣಕ್ಕೆ ಸಂಬಂಧಿಸಿದ ಸಾಂಸ್ಕೃತಿಕ, ಸಾಹಿತ್ತಿಕ, ಕಾವ್ಯ, ಬರಹ ಸಂಸ್ಕೃತಿ, ಸಂಸ್ಕಾರ, ನೀತಿ ಬೋಧನೆ ಮತ್ತು ವಿಶೇಷ ಪಠ್ಯೇತರ ಚಟುವಟಿಕೆಯ ಮೂಲಕ ಕ್ರಿಯಾಶೀಲತೆ ಬೆಳೆಸಿಕೊಂಡವರಾಗಿ ದ್ದಾರೆ. ಮಕ್ಕಳ ಪರಿಪೂರ್ಣ ಪ್ರಗತಿಗೆ ಇಂತಹ ಗುಣ ಧರ್ಮಗಳು ಎಲ್ಲರೂ ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದರು. ಶಾಲೆಯ ಶಿಕ್ಷಕರು, ಸಿಬ್ಬಂದಿ,ಮತ್ತು ಗ್ರಾಮಸ್ಥರ ಗೌರವ ಅಭಿನಂದನಾ ಸನ್ಮಾನ ಸ್ವೀಕರಿಸಿ ಮಾತನಾಡಿದ, ಶ್ರೀಮತಿ ನಿರ್ಮಲಾ ಮಾನೆ ಅವರು, ತಮ್ಮ ಸುದೀರ್ಘ 40 ವರ್ಷಗಳ ( ಮೋಟೆಬೆನ್ನೂರು, ಹರಿಗೇರಿ, ಶಾಲಾ ನಂ: 10 -7- ನಂತರ, ಪ್ರಧಾನ ಗುರುಮಾತೆಯಾಗಿ ಯಕ್ಲಾಸಪುರ, ಮಾಗೋಡು, ದೇವರಗುಡ್ಡ ) ಗ್ರಾಮಗಳಲ್ಲಿ ಸಲ್ಲಿಸಿದ ಸೇವೆ ತಮಗೆ ಮಾನಸಿಕ ಶಾಂತಿ ಮತ್ತು ನೆಮ್ಮದಿ ನೀಡಿದೆ. ಸಮಾಜದಲ್ಲಿರುವ ಎಲ್ಲ ವರ್ಗದ ಮಕ್ಕಳ ಪಾಲಕರು ಕೊಡುವ ಗೌರವ, ಪ್ರೀತಿ, ವಿಶ್ವಾಸ, ಮತ್ತು ಅವರು ತೋರಿಸುವ ಅಭಿಮಾನ ಅತ್ಯಂತ ಸಂತೋಷ ತಂದಿದೆ.
ನಾವು ಮಾಡುವ ಶಿಕ್ಷಣ ಮತ್ತು ಇತರೆ ಪಟ್ಟೇತರ ಕ್ರಿಯಾ ಚಟುವಟಿಕೆಗಳು, ಮಕ್ಕಳ ಮನಸ್ಸಿನಲ್ಲಿ ನೆಲೆ ನಿಂತು, ಅವರ ಭವಿಷ್ಯದ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರಿಯಾದರೆ ಅದುವೇ ನಮ್ಮ ಜನ್ಮ ಸಾರ್ಥಕವಾದಂತೆ. ಎಲ್ಲರ ಪ್ರೀತಿ, ವಿಶ್ವಾಸ, ಅಭಿಮಾನಕ್ಕೆ ತಾವು ಕೃತಜ್ಞತೆ ಸಲ್ಲಿಸುವುದಾಗಿ ಮಾನೆ ಅವರು ಭಾವತುಂಬಿ ಮಾತನಾಡಿದರು.

ಎಸ್. ಡಿ ಎಂ.ಸಿ, ಅಧ್ಯಕ್ಷ ನಾಗರಾಜ್ ಎನ್.ಸಂಸಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವೇದಿಕೆಯಲ್ಲಿ ಬಿ. ಆರ್. ಪಿ, ಸಮನ್ವಯಾಧಿಕಾರಿ, ಮಂಜು ನಾಯ್ಕ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಿ.ವಿ. ಆಡಿವೇರ,ಸಿ.ಆರ್. ಪಿ, ದಿವ್ಯಾ ಬಿ, ಪ್ರಭಾರಿ ಪ್ರಧಾನ ಗುರು ಬಸವರಾಜ ಎಂ.ಎಸ್., ನಿರ್ದೇಶಕ ಬಿ.ಎಚ್. ಕಿತ್ತೂರ, ಶ್ರೀಮತಿ ಸಾವಿತ್ರಮ್ಮ ಹೆಚ್. ಬಿ. ಮಹಾದೇವಪ್ಪ ತೋಟದ, ಎಚ್ ಎಸ್. ಹೊಸಳ್ಳಿ ಸೇರಿದಂತೆ ಹಳೆ ಹೊನ್ನತ್ತಿ, ಶಿಡಗನಾಳ, ಗುಡ್ಡದ ಆನ್ವೇರಿ, ಕೇರಿ ಮಲ್ಲಾಪುರ ಮತ್ತಿತರ ಸರಕಾರಿ ಶಾಲೆಗಳ ಪ್ರಧಾನ ಗುರುಗಳು ಶಿಕ್ಷಕರು,ಶಿಕ್ಷಕ ಸಂಘಟನೆಗಳ ಮುಖಂಡರು, ಎಸ್‌ಡಿಎಂಸಿ ಸದಸ್ಯರು, ಗಣ್ಯರು ಉಪಸ್ಥಿತರಿದ್ದರು.

ಕವಿತಾ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ತಿಪ್ಪೇಸ್ವಾಮಿ ಹಳ್ಳದ ದಂಡಿ ಸ್ವಾಗತಿಸಿ, ಶಿಕ್ಷಕಿ,ಎ.ಕುಮದಾ ನಿರೂಪಿಸಿ,ವಂದಿಸದರು.