ಗೆದ್ದವರು ಕೋಟಿಗಟ್ಟಲೆ ಸಂಪಾದಿಸುತ್ತಾರೆ ಮತದಾರರು ಭಿಕ್ಷುಕರಲ್ಲ ವ್ಯಾಪಾರ ಗಟ್ಟಿ
ಕಸಾಪ ಚುನಾವಣೆ ಸನ್ನಿಹಿತ : ಒಂದು ಮತಕ್ಕೆ ಪುಡಿಗಾಸು ಸಾಕು: ಲಕ್ಷ ಬೇಕು.
ವೀರಮಾರ್ಗ ನ್ಯೂಸ್ : ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆ ಹತ್ತಿರ ಹತ್ತಿರ ಬರುತ್ತಿದೆ. ಅವರ್ಗಳು ಅಂದರೆ ಗುಂಪು ಕಟ್ಟಿಕೊಂಡಿರುವ ಸ್ವಾರ್ಥಿಗಳ ಸಭೆ ನಡೆಯುತ್ತಿವೆ. ಕಾರ್ಯಕ್ರಮ ಮಾಡುವುದು ಶಾಲು ಹಾರ ನೀನು ಅಂತ ಕವಿ ನೀನು ಇಂಥ ಕವಿ ಎಂದು ಬಿರುದು ಬಾವಲಿಗಳ ನಗದು ರಹಿತ ಚಿತ್ರಾನ್ನ ಬಡಿಸುವ ಪ್ರಶಸ್ತಿಗಳನ್ನು ವಿತರಿಸಿ ಅವರಿಗವರೇ ಭಾಷಣ ಕುಟ್ಟಿ ಅವರಿಗವರೇ ಶಹಬ್ಬಾಅಶ್ ಕೊಟ್ಟುಕೊಂಡು ಅವರಿಗವರೇ ಸನ್ಮಾನ ಮಾನ ಮಾಡಿಕೊಂಡು ಅವರ ಬೆನ್ನುಗಳನ್ನು ಅವರವರೇ ತಟ್ಟಿಕೊಂಡು ರಾಜ್ಯದಲ್ಲಿರುವ ಸಂಘ ಸಂಸ್ಥೆಗಳ ಪ್ರಶಸ್ತಿ ಯಾರು ಯಾರಿಗೆ ಕೊಡಬೇಕೆಂದು ಪಟ್ಟಿ ಮಾಡಿಕೊಂಡು, ಯಾರಿಗೆ ವೇದಿಕೆ ಕೊಡಬೇಕು. ಯಾರಿಗೆ ಮೈಕು ಕೊಡಬೇಕು. ಯಾರಿಗೆ ಗೌಡಾ ಕೊಡಿಸಬೇಕು. ಅವರವರ ಗುಂಪಿನ ಪಟ್ಟಿ ತಯಾರಿಸಲಾಗುತ್ತಿದೆ.
ಗುಂಪುಗಳು ಯಾರದೇ ಆಗಿರಲಿ ಯಾರು ಅಧಿಕಾರಕ್ಕೆ ಬರುತ್ತಾರೋ ಎದುರು ಗುಂಪಿನವರಿಗೆ ಇವರು ಹಾರ ಶಾಲು ಹಾಕಿ ತಲೆ ಬಗ್ಗಿಸಿ ಬೆನ್ನು ತಟ್ಟಬೇಕು. ಅದರ ಪುನರಾವರ್ತನೆ. ಅದೇ ಹಳಸಲು ಮುಖಗಳು, ಅದೇ ಅಕ್ಷರ ಕಸದ ವಿಲೇವಾರಿ, ಹೊಸತನವಿಲ್ಲ, ಸ್ವಾದವಿಲ್ಲದ ಓದುಗರ ಕೈಗೆ ಅರ್ಥವಾಗದ ಓದಲು ಪುಟ ತಿರುವಿದರೆ ಸ್ವರತಿಯ ಅಗರದ ಮುಂದಿನ ಪುಟಕ್ಕೆ ಹೋಗದೆ ಪುಸ್ತಕ ಮಗುಚಿ ಇವರ ಸಹವಾಸವೇ ಸಾಕು ಎಂದು ತಿರಸ್ಕರಿಸಲ್ಪಟ್ಟವರ ಅನುರಾಗಾದ ರಗಳೇ….
ಯಾರೋ ಬರೆದ ಹಾಡು, ಯಾರೋ ಬರೆದ ಲೇಖನ, ಯಾರೋ ಬರೆದ ಕಥೆ, ನನ್ನದೆಂದು ಮುದ್ರಿಸಿಕೊಂಡು ಬಂಡಾಯದ ಬಾವುಟ ಹಾರಿಸಿದವರ ದುಂಡಾವರ್ತನೆ. ಇಂತಹ ಬರಹಗಳನ್ನೇ ನಮ್ ಮಕ್ಕಳು ಓದುವ ಪುಸ್ತಕದ ಪಠ್ಯದಲ್ಲಿ ಸೇರಿಸಿ ಬಲವಂತವಾಗಿ ಅರ್ಥವಾಗದ ಕಲಬೆರಿಕಿ ಅಕ್ಷರೂಟ ತಿನ್ನಿಸಿ ಬದುಕನ್ನೇ ಬಳಿ ಕೊಟ್ಟು ಬಡವರ ಮಕ್ಕಳು ಬಿದ್ದ ಆಳದ ಬಾವಿಯ ಅಳತೆ ಮಾಡುವ ಕಿಡಿಗೇಡಿಗಳ ಸ್ವಾರ್ಥಕ್ಕೆ ತಲೆಮಾರುಗಳ ಭವ್ಯ ಶೈಕ್ಷಣಿಕ ಭವಿಷ್ಯವನ್ನೇ ಆಪೋಶನ ತೆಗೆದುಕೊಳ್ಳುವವರ ಷಡ್ಯಂತ್ರದ ಚಿತಾವಣೆ ವಿಷಪಾತಳದಲ್ಲಿ ವಿಲವಿಲ ಒದ್ದಾಡುವ ಸಮಾಜದ ಗತಿ ನೋಡಿದರೆ ಭಾಷೆ ಭಾಷಾ ನಾಗರೀಕತೆ ಗುಣಮಟ್ಟದಲ್ಲಿ ಪ್ರೋಕ್ಷಣೆ ಆಗಬಲ್ಲುದೆ?
ಸೂಟು ಬೂಟಿನ ಮಂದಿ ಆಕ್ರಮಣ ಮಾಡುತ್ತಿದ್ದಾರೆ. ಸಾಹಿತ್ಯದ ಸ್ವಲ್ಪ ಆಳದಲ್ಲಿ ಮುಳುಗೆದ್ದವರು ನಾನೇ ಗಂಧ ಎಂದು ಪರರ ಹಣೆಗೆ ತಿಲಕ ಇಡಲು ಮುಂದಾಗಿದ್ದಾರೆ. ಅಕ್ಷರ ಕಸದ ಬಂಡಾಯವನ್ನೇ ಚರಿತ್ರೆ ಎಂದು ಪತ್ರಿಕೆಗಳಲ್ಲಿ (ತಮಗೆ ತಾವೇ ಹೊಗಳಿಕೊಂಡು ಬರೆದುಕೊಟ್ಟು) ಬರೆಸಿಕೊಂಡು ಮುದ್ರಿಸಿ ಹಂಚಿದ ಪ್ರತಿಗಳನ್ನು ಮುಂದಿಟ್ಟು ಜೈಕಾರ ಹಾಕುವವರ ಕೈಗೆ ಒಂದಿಷ್ಟು ಲಾಭಗ ಗಂಜಿ ಕುಡಿಸಿ ದೊಡ್ಡವ ನಾನೆಂದು ಘೋಷಿಸಿಕೊಳ್ಳುವ ಗಂಜಿ ಗಿರಾಕಿಗಳು ಮುಖ್ಯ ಸ್ಥರದಲ್ಲಿ ಸ್ಥಾಪಿತ ಆಗಿಬಿಟ್ಟಿದ್ದಾರೆ.
ಅವರಿಗೆ ಕಸಾಪ ವೇದಿಕೆ ಕೊಡಲಿಲ್ಲ. ಅವರಿಗೆ ಅವರು ಕೇಳಿದ ದತ್ತಿ ಪ್ರಶಸ್ತಿ ಕೊಡಲಿಲ್ಲ… ಎಂದು ಗಲಾಟೆ ಎಬ್ಬಿಸಿದವರಿಗೆ ಈಗ ಅವರವರಿಗೆ ಬೇಕಾದ ಪ್ರಶಸ್ತಿಗಳು ಸಾಲು ಸಾಲು ಪ್ರಶಸ್ತಿಗಳು ಪ್ರಕಟವಾದುದು ಮಾಧ್ಯಮಗಳಲ್ಲಿ ಪ್ರಕಟ ಆಗುತ್ತಲೇ ಇವೆ. ಅಧ್ಯಕ್ಷರಾಗಲು ಖರ್ಚು ಮಾಡಿದ್ದನ್ನು ಲಾಭಾ ಸಹಿತ ತೆಗೆದುಕೊಳ್ಳಲು ಭ್ರಷ್ಟಾಚಾರ ಮಾಡಿದವರನ್ನು ಪ್ರತಿಭಟಿಸಿ ರಾಜಕೀಯ ಅಂಗಳದ ಕೆಸರೆರಚಾಟ ಮಾಡಿದವರಿಗೆ ಅಧ್ಯಕ್ಷರೇ ಇಲ್ಲದ ಅಧಿಕಾರ ಶಾಹಿಗಳಿಂದ ಪ್ರಶಸ್ತಿ ಘೋಷಿಸಿಕೊಂಡಿರುವವರ ನೈತಿಕತೆಯ ಬಂಡವಾಳ ಈಗ ಬಹಿರಂಗವಾಗಿದೆ. ಅಧ್ಯಕ್ಷರಾದವರು ಬಂಡವಾಳ ಹಾಕಿ ಬಂಡವಾಳ ದುಡಿಸಿಕೊಳ್ಳುತ್ತಾರೆ. ಅಕ್ಷರದ ಬಂಡವಾಳವೂ ಇಲ್ಲದವರು ಹಲವಾರು ಲಕ್ಷಗಳ ಪ್ರಶಸ್ತಿಗಳಿಗಾಗಿ ಗುಂಪು ಬಂಡವಾಳ ವಾತಾವರಣ ಸೃಷ್ಟಿಸಿಕೊಂಡಿದ್ದಾರೆ. ಅಂದರೆ ಕನ್ನಡ ಸಾಹಿತ್ಯ ಪರಿಷತ್ತಿನಾ ಆರ್ಥಿಕ ಲಾಭ ಪಡೆಯಲು ಬಡಿದಾಡಿಕೊಂಡವರ ಸ್ವಾರ್ಥ ಗೆದ್ದಿದೆ. ಪರಿಷತ್ತಿನ ಇತಿಹಾಸಕ್ಕೆ ಗಲೀಜು ಮೆತ್ತಿ ಕಾಸು ಮಾಡಿಕೊಳ್ಳುವ ದಂಧೆಗೆ ಕನ್ನಡ ನಾಡಿನ ಪ್ರತಿಷ್ಠೆ ಘನತೆಯ ಪ್ರಾತಿನಿಧಿಕ ಸಂಸ್ಥೆಯ ಗೌರವವನ್ನು ವಿಶ್ವ ಮಟ್ಟದಲ್ಲಿ ಕಳೆದವರಿಗೆ ಪ್ರಶಸ್ತಿ ಪ್ರಕಟ ಮಾಡಿದ್ದನ್ನು ನೋಡಿ ಎಲ್ಲಿಂದ ನಗಬೇಕು ಅರ್ಥವಾಗುತ್ತಿಲ್ಲ.
ಕೋಟಿಗಟ್ಟಲೆ ಭ್ರಷ್ಟಾಚಾರ ಎಂದರು. ಸಭೆ ಮಾಡಿದರು. ಓರಾಟ ಮಾಡಿದರು. ರಾಜ್ಯಾಧ್ಯಕ್ಷ ಹುದ್ದೆ ಕಳೆದುಕೊಂಡರು. ವೇದಿಕೆ ಸಿಗಲಿಲ್ಲಾ, ಸಮ್ಮೇಳನಾಧ್ಯಕ್ಷ ಆಗಲಿಲ್ಲ ಕೇಳಿದ್ದು ಕೊಡಲಿಲ್ಲ ಎಂದು ಖುದ್ದು ಹೋದರು. ಪ್ರಾಮಾಣಿಕರು ಹೋರಾಟಕ್ಕೆ ಸಹಕರಿಸಿದರು. ಭ್ರಷ್ಟಾಚಾರ ವಿರೋಧ ಗೆದ್ದಿತು. ಓರಾಟದ ಹಿಂದೆ ಕೆಲಸ ಮಾಡಿದವರಿಗೆ ಈಗ ಅಧಿಕಾರಶಾಹಿ ದೊಡ್ಡಮಟ್ಟದ ಪ್ರಶಸ್ತಿ ಕೊಟ್ಟು ವೇದಿಕೆ ಸಹಿತ ಮೈಕು ಹಾರ ಶಾಲು ಪ್ರಚಾರ ಕೀರ್ತಿ ಕೃಪೆಗೆ ಭಾಜನರಾಗುವಂತೆ 7,77,777 ರೂಪಾಯಿಯ ಕೈತುಂಬಾ ಕಾಸಿನ ಜಝಣತ್ಕಾರದ ಘೋಷಣೆ ಮಾಡಿರುವುದು ತಿಳಿದು ಬಂದಿದೆ. ಒಂದೇ ಹೊಡೆತ ಎರಡೆರಡು ಲಾಭದ ಬಂಡಾಯ ಫಲಿತಾಂಶ. ಮತದಾರರಿಗೆ ಈ ಸೌಭಾಗ್ಯ ಸಿಗುವುದಿಲ್ಲ. ಮತದಾರರನ್ನು ಖರೀಧಿಸುವವರು ಸರ್ಕಾರದ ಖಜಾನೆಯಿಂದ ಹಣದ ಲಾಭದ ಹರಿವು ಅವರುಗಳ ಮನೆ ಹೊಸ್ತಿಲಿಗೆ ನುಗ್ಗಿಸಿಕೊಳ್ಳುತ್ತಾರೆ. ಈಗ ಹೇಳಿ ಮತ ಮಾರಿಕೊಳ್ಳುವವರು ಶಾಲು ಹಾರ ಮಿರ್ಚಿಗೆ ನಿಮ್ಮ ಸ್ವಾಭಿಮಾನ ಮಾರಿಕೊಳ್ಳುತ್ತೀರಾ?
ಜಾತಿ ಮತ ಕುಲ ಪಂಥ ಮುಂತಾದ ಗುಂಪುಗಾರಿಕೆಗೆ ಒಬ್ಬ ಸ್ಪರ್ಧಿಯನ್ನು ಮುಂದೆ ಮಾಡಿ ಮತ ಕೇಳುವ ಕರಪತ್ರಗಳ ಹಂಚಿಕೆ ಹೂಸು ಬಿಡಲಾಗುತ್ತಿದೆ. ಮತ್ತೆ ಹಣ, ಹೆಂಡ, ಬಾಟಲಿ, ಸೂಟ್ ಕೇಸ್, ಪಲಾವ್ ಮೊಸರು ಬಜ್ಜಿ, ಮಂಡಕ್ಕಿ, ಮಿರ್ಚಿ ಬಾಜಿ ಭಜಿ ಸೀರೆ, ತಾಳಿ… ಅಬ್ಬಬ್ಬಾ ಅಕ್ಷರ ಕಲಿತವರಿಗೆ ಹಂಚುವ ಕೆಲಸ ತಿನ್ನಿಸುವ ಚಾಣಾಕ್ಷರ ಚಟುವಟಿಕೆಗಳು ಈಗಾಗಲೇ ಜಾರಿ ಆಗಿವೆ. ಅದೇ ಹಳೆ ಚಾಳಿ ಮುಂದುವರೆದಿದೆ. ಮತ್ತಾವೆ ಮುಖಗಳ ಹಾಲಿ ಮಾಜಿಗಳು ಚುನಾವಣೆ ಗೆಲ್ಲಲು ತಮ್ಮ ಕೈಚಳಕ ತೋರಿಸಲು ಆರಂಭಿಸಿದ್ದಾರೆ.
ಜೆ ಎಮ್ ರಾಜಶೇಖರ.
ಸಾಹಿತಿ ಮಾಹಿತಿ ಹಕ್ಕು ತಜ್ಞ
8660407551