ಹೆಸರು ಗುರು ಪೌರ್ಣಿಮ ಕಾರ್ಯಕ್ರಮ ನಡೆದಿದ್ದು ಅನೇಕ.

ಗುರು ಪೌರ್ಣಿಮೆ ಎಂದರೆ ಹುಣ್ಣಿಮೆಯ ದಿನ ಗುರುಗಳನ್ನ ಪೂಜಿಸುವುದು ಆರಾಧಿಸುವುದು ಕಾರ್ಯಕ್ರಮ ಎಂದೇ ನಾವು ಅಂದುಕೊಳ್ಳುತ್ತೇವೆ, ಆದರೆ ಶ್ರೀ ಕಡೆನಂದಿಹಳ್ಳಿ ಮಠದಲ್ಲಿ ನಡೆದ ಕಾರ್ಯಕ್ರಮಗಳು ಇಡೀ ದಿನ ಹೀಗಿವೆ.

ಗುರು ವಂದನ ಕಾರ್ಯಕ್ರಮದ ಜೊತೆಗೆ ಅನೇಕ ಕಾರ್ಯಕ್ರಮಗಳು ಜರುಗಿದವು,,,

ಕಡೇನಂದಿಹಳ್ಳಿ 30-7-2026. ಶ್ರೀ ಜಗದ್ಗುರು ರಂಭಾಪುರಿ ಪೀಠದ ಶಾಖಾ ಮಠವಾಗಿರುವ ಕಡೇನಂದಿಹಳ್ಳಿ ಶ್ರೀ ಗುರು ರೇವಣಸಿದ್ದೇಶ್ವರ ಪುಣ್ಯಾಶ್ರಮ ಜನ ವಸತಿಯಿಂದ ದೂರವಾಗಿದ್ದರೂ ಇಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿದರೆ ಯಾರಿಗಾದರೂ ಅಚ್ಚರಿ ಮತ್ತು ಸಂತಸ ಉಂಟು ಮಾಡುತ್ತದೆ ಎಂದು ಬಿ.ಜೆ.ಪಿ.ರಾಜ್ಯಾಧ್ಯಕ್ಷ-ಶಾಸಕ ಬಿ.ವೈ.ವಿಜಯೇಂದ್ರ ನುಡಿದರು.

ಶಿಕಾರಿಪುರ ತಾಲೂಕ ಕಡೇನಂದಿಹಳ್ಳಿ ಶ್ರೀ ಗುರು ರೇವಣಸಿದ್ದೇಶ್ವರ ಪುಣ್ಯಾಶ್ರಮದಲ್ಲಿ ಬುಧವಾರ ಗುರು ಪೌರ್ಣಿಮೆ ಅಂಗವಾಗಿ ಹಮ್ಮಿಕೊಂಡಿದ್ದ ಧರ್ಮ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳ ಪರಿಶ್ರಮದ ಫಲವಾಗಿ ಈ ಕ್ಷೇತ್ರ ಬೆಳವಣಿಗೆ ಹೊಂದುತ್ತಿದೆ. ಮುಂದೊಂದು ದಿನ ಇದು ಒಂದು ಅದ್ಭುತ ಕ್ಷೇತ್ರವಾಗಿ ಬೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಶ್ರೀಗಳ ಶ್ರಮಕ್ಕೆ ಭಕ್ತರು ನೀಡುತ್ತಿರುವ ಸಹಕಾರವೂ ಸಹ ಅಮೂಲ್ಯವಾದದ್ದಾಗಿದೆ. ಕ್ಷೇತ್ರದ ಬೆಳವಣಿಗೆಗೆ ತಂದೆ ಯಡಿಯೂರಪ್ಪನವರು ಸಹೋದರ ಬಿ.ವೈ.ರಾಘವೇಂದ್ರ ಅವರು ನೀಡುತ್ತಿರುವ ಸಹಕಾರದಲ್ಲಿ ತಾವೂ ಸಹ ಭಾಗಿಯಾ ಗುವುದಾಗಿ ತಿಳಿಸಿದರು. ರೇವಣಸಿ ದ್ದೇಶ್ವರ ಶಿವಾ ಚಾರ್ಯ ಸ್ವಾಮಿಗಳು ಮಾತನಾಡಿ ಶ್ರೀ ಜಗದ್ಗುರು ರೇಣುಕಾಚಾ ರ್ಯರು ಬೋಧಿ ಸಿದ ದಶ ಧರ್ಮ ಸೂತ್ರಗಳು ಎಲ್ಲರ ಶ್ರೇ ಯೋಭಿವೃದ್ಧಿಗೆ ಕಾರಣವಾಗಿವೆ. ಜನರಲ್ಲಿ ಎಷ್ಟು ಪ್ರಮಾಣದಲ್ಲಿ ಧಾರ್ಮಿಕ ಭಾವನೆ ಮತ್ತು ಆಚರಣೆ ಬೆಳೆದು ಬರುತ್ತವೆಯೋ ಅಷ್ಟು ಸಾಮರಸ್ಯ ಸದ್ಭಾವನೆ ಸಮಾಜದಲ್ಲಿ ಬೆಳೆದು ಬರುತ್ತವೆ. ಶ್ರೀಮದ್ ರಂಭಾಪುರಿ ಜಗದ್ಗುರು ಗಳವರ ಕೃಪಾಶೀರ್ವಾದದಿಂದಾಗಿ ನಾವು ಊಹಿಸದ ಅಭಿವೃದ್ಧಿ ಈ ಕ್ಷೇತ್ರದಲ್ಲಿ ನಡೆ ಯುತ್ತಿದ್ದು ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಕುಟುಂಬದವರ ಯಡಿಯೂರಪ್ಪನವರ ನೆರವು ಹಾಗೂ ಭಕ್ತಾದಿಗಳ ಸಹಕಾರ ದೊಡ್ಡದು ಎಂದರು. ಇದೇ ಸಂದರ್ಭದಲ್ಲಿ ಬಿ.ವೈ.ವಿಜಯೇಂದ್ರ ಅವರು ಶ್ರೀ ಜಗದ್ಗುರು ರೇಣುಕಾಚಾರ್ಯ ಹರಕೆ ರಥದ ಮನೆ ಉದ್ಘಾಟನೆ ಮಾಡಿ ಕಡೇನಂದಿಹಳ್ಳಿ ಶ್ರೀಗಳು ಧರ್ಮ ಜಾಗೃತಿ ಮತ್ತು ಲೋಕ ಕಲ್ಯಾಣಕ್ಕಾಗಿ ಸಂಕಲ್ಪಿಸಿರುವ ಶ್ರಾವಣ ಶಿವಪೂಜಾ ತಪೋನುಷ್ಠಾನ ಕಾರ್ಯಕ್ರಮದ ಮಾಹಿತಿ ಪತ್ರಿಕೆ ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಶ್ರೀ ಜಗದ್ಗುರು ರೇಣುಕಾಚಾ ರ್ಯ ಶಿಲಾಮಂಟಪ ಮತ್ತು ಶ್ರೀ ಮಠದ ಸುತ್ತ ಕೋಟೆ ನಿರ್ಮಾಣ ಕಾರ್ಯ ಕ್ಕೆ ಚಾಲನೆ ನೀಡಲಾಯಿತು. ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯರು ಅರಕೆರೆ ಚನ್ನ ವೀರಸ್ವಾಮಿಗಳು ಉಪಸ್ಥಿತರಿದ್ದರು.

ಗುರುರೇವಣಸಿದ್ದೇಶ್ವರ ಜನಕಲ್ಯಾಣ ಟ್ರಸ್ಟ್(ರಿ) ಮತ್ತು ಸಲಹಾ ಮತ್ತು ಸೇವಾ ಸಮಿತಿ ಕಾರ್ಯದರ್ಶಿ ವೇ.ಚನ್ನೇಶ ಶಾಸ್ತ್ರಿಗಳು ಸರ್ವರನ್ನು ಸ್ವಾಗತಿಸಿದರು. ಶಿಕಾರಿಪುರ, ಹಿರೇಕೆರೂರು, ಸೊರಬ, ಶಿರಸಿ, ಸಿದ್ದಾಪುರ, ಹಾನಗಲ್, ಹಾವೇರಿ ಭದ್ರಾವತಿ ತಾಲೂಕು ಗಳ ಸುಮಾರು 30 ಗ್ರಾಮಗಳಿಂದ ಆಗಮಿ ಸಿರುವ ಭಕ್ತರು ಆಗಮಿಸಿದ್ದರು. ಬ್ರಾಹೀ ಮುಹೂರ್ತದಲ್ಲಿ ಶ್ರೀ ಮಠದ ಎಲ್ಲಾ ಪು-ರೋ ಹಿತ ಬಳಗದವರಿಂದ ಕ್ಷೇತ್ರದ ದೈವಗಳಿ ಗೆ ರುದ್ರಾಭಿಷೇಕ ನೆರವೇರಿಸಿ ವಿಶೇಷ ಫಲಾ ಲಂಕಾರ ಪೂಜೆ ಮಹಾಮಂಗಳಾರತಿ ನೆರವೇ ರಿಸಲಾಯಿತು ರಾಣೆಬೆನ್ನೂರಿನ ಶ್ರೀ ಕನಕಪರಮೇಶ್ವರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಲಲಿತಾ ಪಾಟೀಲ ಅವರ ಸದಾಶಯದಂತೆ ಶ್ರೀ ಮಠಕ್ಕೆ ಆಗಮಿಸಿದ ಭಕ್ತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ, ನ್ಯಾಚುರಲ್ ಹೀಲಿಂಗ ಹಾಗೂ ಬಸವ ಅಕ್ಕೂ ಅಕಾಡೆಮಿ ಬೆಂಗಳೂರು-ದಾವಣಗೆರೆ ವ್ಯಾಪ್ತಿಯ ವೈದ್ಯರಿಂದ ಉಚಿತ ಸೀಡ್ ಮತ್ತು ಕಲರ್ ಥೆರಪಿ ಹಾಗೂ ಅಕ್ಯೂಪ್ರೆಶರ್ ಚಿಕಿತ್ಸೆ ಭೂಮಿಕಾ ಕಿರಣ್ ದಾವಣಗೆರೆ ಶೋಭಾ ಕರಿಬಸಪ್ಪ ಕೆ, ಇನ್ನೂ ಅವರ ಸಹಪಾಟಿಗಳಿಂದ ನೆಡೆಯಿತು. ಅದರ ಜೊತೆಯಲ್ಲೇ ರಾಣೇಬೆನ್ನೂರ ತಾಲೂಕಿನ ಸರಕಾರಿ ಕನ್ನಡ ಶಾಲೆಯಲ್ಲಿ ಓದಿ ಹೆಚ್ಚಿನ ಅಂಕಗಳನ್ನು ಪಡೆದ SSLC ಮಕ್ಕಳಿಗೆ ಪ್ರತಿಭಾಪುರಸ್ಕಾರ ಮಾಡುವದರ ಜೊತೆಗೆ ಶಾಲಾ ಮಕ್ಕಳಿಗೆ ಶ್ರೀ ಗಳಿಂದ ಆಶೀರ್ವಾದ ಮಾಡಲಾಗಿತು,

ಅತಿಥಿಗಳಾಗಿ ಹನುಮಂತಪ್ಪ ಸಂಕ್ಲಾಪುರ, ವೀರಣ್ಣ ಶಿಕಾರಿಪುರ, ಸತೀಶ್ ತಾಳಗುಂದ, ಚಂದ್ರಣ್ಣ ಮಳವಳ್ಳಿ, ಉಮೇಶ ಕಂಟ್ರಾಕ್ಟರ್, ಮಂಜು ಶಿರಾಳಕೊಪ್ಪ ಆಗಮಿಸಿದ್ದರು. ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಎಲ್ಲಾ ಸಮಾಜದ ಹಿರಿಯರು ಯುವಕರು ತಾಯಂದಿರರು ಉಪಸ್ಥಿತರಿದ್ದರು. ಶ್ರೀ ಗುರು ರೇವಣಸಿದ್ದೇಶ್ವರ ಜನಕಲ್ಯಾಣ ಟ್ರಸ್ಟ್‌ನ ಯೋಗಿಶಪ್ಪ ಹುಲಗಿನಕೊಪ್ಪ, ಬಸವರಾಧ್ಯ ಸಾಹುಕಾರ ಈಸೂರು, ಶಿಕಾರಿಪುರದ ಪಟದ ಯ್ಯನವರು, ದೇವೇಂದ್ರಪ್ಪ ಪಿ.ಎಸ್.ಪ್ರಥಮ ದರ್ಜೆ ಗುತ್ತಿಗೆದಾರರು, ರಾಜು ಸ್ವಾಮಿ, ಮಹೇಶ ಶಿಕಾರಿಪುರ ಇದ್ದರು. ಶ್ರೀ ಪ್ರಾತ:ಕಾಲದಲ್ಲಿ ಶ್ರೀಗಳವರು ಇಷ್ಟಲಿಂಗ ಪೂಜೆ ನಡೆಸಿದರು. ಸಂಜೆ ಶ್ರೀ ಜಗದ್ಗುರು ರೇಣುಕಾಚಾರ್ಯರ ಹರಕೆ ರಥೋತ್ಸವ ನಂತರ ಶ್ರೀಗಳವರ ಸಾಮೂಹಿಕ ಪಾದಪೂಜೆ ನಡೆಯಿತು. ಆಗಮಿಸಿದ ಭಕ್ತಾದಿಗಳಿಗೆ ಅನ್ನ ಪ್ರಸಾದ ನಡೆಯಿತು. ಶ್ರೀ ಗುರು ರೇವಣಸಿದ್ದೇಶ್ವರ ಯುವಕ ಮಂಡಳಿ ಸದಸ್ಯರು ಭಕ್ತಿ ಸೇವೆ ಸಲ್ಲಿಸಿದರು.