ಬಡವರಿಗೆ ಸರ್ಕಾರಿ ಆಸ್ಪತ್ರೆಗಳೆ ಪುನರ್ ಜನ್ಮ ನೀಡುವ ಆರೋಗ್ಯ ಕೇಂದ್ರಗಳಾಗಿವೆ
ಶಿಗ್ಗಾವಿ : ಆರೋಗ್ಯವು ಪ್ರತಿಯೊಬ್ಬ ವ್ಯಕ್ತಿಯ ಬಹುದೊಡ್ಡ ಸಂಪತ್ತಾಗಿದ್ದು, ಸರ್ಕಾರಿ ಆಸ್ಪತ್ರೆ ಬಡವರಿಗೆ ಉಚಿತ ಆರೋಗ್ಯ ಸೇವೆ ನೀಡುವಮೂಲಕ ವರದಾನವಾಗಿ ಪರಿಣಮಿಸಿದೆ ಎಂದು ತಾಲೂಕಿನ ಬಂಕಾಪುರ ಪಟ್ಟಣದ ಟೋಲ್ ಪ್ಲಾಜಾದ ಪ್ರೋಜೆಕ್ಟ್ ಮ್ಯಾನೇಜರ ಸುರೇಶ ನಾರಾಯಣ ಹೇಳಿದರು.
ತಾಲೂಕಿನ ಬಂಕಾಪುರ ಪಟ್ಟಣದ ಸರ್ಕಾರಿ ಆಲದಕಟ್ಟಿಯವರ ಸಮೂದಾಯ ಆರೋಗ್ಯ ಕೇಂದ್ರಕ್ಕೆ ಪಟ್ಟಣದ ಟೋಲ್ ಪ್ಲಾಜಾವತಿಯಿಂದ ರೋಗಿಗಳಿಗೆ ಹಾಗು ಸಿಬ್ಬಂದಿಗಳಿಗೆ ಕೂಡ್ರಲು ಉಚಿತ ಚೇರಗಳನ್ನು ಕೊಡುಗೆಯಾಗಿ ನೀಡಿ ಮಾತನಾಡಿದ ಅವರು, ಉಳ್ಳವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ, ಬಡ ಬಗ್ಗರಿಗೆ ಸರ್ಕಾರಿ ಆಸ್ಪತ್ರೆಗಳೆ ಪುನರಜನ್ಮ ನೀಡುವ ಆರೋಗ್ಯ ಕೇಂದ್ರಗಳಾಗಿವೆ. ಸರ್ಕಾರಿ ಆಸ್ಪತ್ರೆಗೆ ಆರೋಗ್ಯ ಸೇವೆ ಪಡೆಯಲು ಬರುವ ರೋಗಿಗಳಿಗೆ ಅನಕೂಲವಾಗುವ ಸದುದ್ದೇಶದಿಂದ ನಮ್ಮ ಟೋಲ್ ಪ್ಲಾಜಾ ಆಶ್ರಯದಲ್ಲಿ ೪೦ ಚೇರಗಳು ಹಾಗು ಸಿಬ್ಬಂದಿಗಳಿಗೆ ೧೦ ಕುಷನ್ ಚೇರಗಳನ್ನು ನೀಡಲಾಗಿದೆ ಎಂದು ಹೇಳಿದರು.
ಸರ್ಕಾರಿ ಸಮೂದಾಯ ಆರೋಗ್ಯಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಮನೋಜ್‌ಕುಮಾರ ಮಾತನಾಡಿ, ಟೋಲ್ ಪ್ಲಾಜಾದವರು ನಮ್ಮ ಆಸ್ಪತ್ರೆಗೆ ೪೦ ಚೇರಗಳನ್ನು ನೀಡಿರುವುದು, ಬಡ ರೋಗಿಗಳು ಸರತಿಸಾಲಿನಲ್ಲಿ ಕುಳಿತುಕೊಂಡೇ ಆರೋಗ್ಯೆ ಸೇವೆ ಪಡೆಯಲು ಸಹಕಾರಿಯಾಗಿದೆ. ಅವರ ಈ ಸಹಾಯ ಸಹಕಾರಕ್ಕೆ ನಮ್ಮೇಲ್ಲ ವೈದ್ಯಾಧಿಕಾರಿ, ಸಿಬ್ಬಂದಿಗಳ ಪರವಾಗಿ ತುಂಬುಹೃದಯದ ಅಭಿನಂದನೆಗಳನ್ನು ತಿಳಿಸಿದರು.
ಪ್ಲಾಜಾ ಮ್ಯಾನೇಜರ ವೆಂಕಣ್ಣ ಬಾಬು, ಟೋಲ್ ಮ್ಯಾನೇಜರ ಸಂತೋಷಕುಮಾರ, ರಾಜು ಬಲಾ, ಮಂಘಲಸಿಂಘ, ಸುರೇಶ, ದ್ಯಾಮಪ್ಪಾ, ಡಾ.ವಸ್ತ್ರದಮಠ, ಡಾ.ಸಲಿಂ ಇಳಕಲ್, ಡಾ.ಚಂದ್ರಶೇಖರ ಚಿಂದಡಿ, ಡಾ.ಶರಣ, ಗೀತಾ ಪಾಟೀಲ ಆಶ್ಮಾಭಾನು, ನೇತ್ರಾ, ಭುವನೇಶ್ವರಿ ಸೇರಿದಂತೆ ಇತರರು ಇದ್ದರು.
ಬಡವರಿಗೆ ಸರ್ಕಾರಿ ಆಸ್ಪತ್ರೆಗಳೆ ಪುನರ್ ಜನ್ಮ ನೀಡುವ ಆರೋಗ್ಯ ಕೇಂದ್ರಗಳಾಗಿವೆ
