ಹಾವೇರಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿಯಾಗಿ ಸಿದ್ದಣ್ಣ ಚಿಕ್ಕಬಿದರಿ ನೇಮಕ
ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೆಬೆನ್ನೂರು : ಭಾರತೀಯ ಜನತಾ ಪಕ್ಷದ ಯುವ ಮುಖಂಡ ಸಿದ್ದಣ್ಣ ಚಿಕ್ಕಬಿದರಿ ಅವರನ್ನು ಹಾವೇರಿ ಜಿಲ್ಲಾ ಭಾರತೀಯ ಜನತಾ ಪಕ್ಷದ ಜಿಲ್ಲಾ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶ ನೀಡಲಾಗಿದೆ.
ಈ ಕುರಿತು ಮಾಜಿ ಶಾಸಕ ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಹಿರಿಯ ಮುಖಂಡರಾದ ಶಿವರಾಜ ಸಜ್ಜನರ ಅವರು ನೇಮಕಾತಿ ಪತ್ರ ಜಿಲ್ಲಾ ಕೇಂದ್ರದ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ವಿತರಿಸಿ ಗೌರವಿಸಿದರು.
ಈ ಅಧಿಕಾರದ ಅವಧಿಯು ಮೂರು ವರ್ಷಗಳ ಕಾಲದ್ದಾಗಿದ್ದು, ಪಕ್ಷದ ಸಂಘಟನೆ ಮತ್ತು ಪಕ್ಷದ ತತ್ವ, ಸಿದ್ಧಾಂತಕ್ಕೆ ಬದ್ಧರಾಗಿ ಸಂಘಟನೆಯಲ್ಲಿ ಅಳವಡಿಸಿಕೊಂಡು ಪಕ್ಷದ ಹಿತದೃಷ್ಟಿಯಿಂದ ಎಲ್ಲಾ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ಸಮಗ್ರ ಸಂಘಟನೆ ಮತ್ತು ಬೆಳವಣಿಗೆಗೆ ತಾವು ಪ್ರಾಮಾಣಿಕವಾಗಿ ಪ ನೆರವೇರಿಸಲು ಮುಂದಾಗಬೇಕು ಎಂದು ವಿರುಪಾಕ್ಷಪ್ಪ ಬಳ್ಳಾರಿ ಅವರು ತಮ್ಮ ಆಶಯವನ್ನು ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಸಿದ್ದಣ್ಣ ಚಿಕ್ಕಬಿದರಿ ಅವರಿಗೆ ಪಕ್ಷದ ಹಿರಿಯರು ಮುಖಂಡರು ಕಾರ್ಯಕರ್ತರು ಯುವ ನಾಯಕರು ಹಾರ್ದಿಕವಾಗಿ
ಅಭಿನಂದಿಸಿ, ಶುಭಹಾರೈಸಿದ್ದಾರೆ.