ಚರಂಡಿ&ಮೂಲಭೂತ ಸೌಕರ್ಯ ಒದಗಿಸಲು ಮನವಿ

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರ ತಾಲೂಕು : ಗ್ರಾಮ ಘಟಕದ ಅಧ್ಯಕ್ಷರು ಶಿವರಾಜ ಹ ಬೇವಿನಹಳ್ಳಿ ಮಾತನಾಡಿ ನಮ್ಮ ಗ್ರಾಮಕ್ಕೆ ಸಂಬಂಧ ಪಟ್ಟ ಪ್ಲಾಟ್ ಸರ್ವೇ ನಂಬರನಲ್ಲಿ ಇದ್ದು ಸರ್ವೇ ನಂಬರ್ 107/1 107/2 ಸರ್ವೇ ನಂಬರಲ್ಲಿ ಪ್ಲಾಟ್ ಗಳು ನಿರ್ಮಾಣ ಗೊಂಡಿದ್ದು.

ಸುಮಾರು ಈ ಪ್ಲಾಟ್ ನಲ್ಲಿ 50 ರಿಂದ 60 ಕುಟುಂಬಗಳು ವಾಸಿಸುತ್ತಿದ್ದೂ ಈ ಪ್ಲಾಟ್ ಗಳು ಸಿ ಸಿ ರಸ್ತೆ ಒಂದಿದ್ದು ಹಾಗೂ ಚರಂಡಿ ವ್ಯವಸ್ಥೆ ಇರುವದಿಲ್ಲ ದಿನನಿತ್ಯ ಬಳಸುವ ನೀರನ್ನು ಸ್ನಾನ ಮಾಡುವದಕ್ಕೆ ಆಗಲಿ ದನಕರುಗಳು ಮೈ ತೊಳೆಯುವಾಗ ಆಗಲಿ ಮಳೆ ನೀರು ಹರಿಯುವಾಗ ಆಗಲಿ ಚರಂಡಿ ವ್ಯವಸ್ಥೆ ಇಲ್ಲದೆ ಇರುವದರಿಂದ ಮನೆಯೊಳಗೇ ಮಳೆ ನೀರು ನುಗ್ಗುವದು ಹಾಗೂ ರಸ್ತೆ ಮೇಲೆ ನೀರು ಹರಿಯುವದರಿಂದ ಅಲ್ಲಿಯ ಸಾರ್ವಜನಿಕರು ದಿನನಿತ್ಯ ಜಗಳ ಮಾಡುವದು..

ಇಲ್ಲಿಯ ಚರಂಡಿ ನೀರು ಸರಿಯಾದ ಮಾರ್ಗದಲ್ಲಿ ಹರಿಯದೆ ಇರುವ ಕಾರಣದಿಂದ ನಿಂತಲ್ಲೇ ನೀರು ನಿಲ್ಲುವದರಿಂದ ಸೊಳ್ಳೆಗಳು ಹುಳಗಳು ಇನ್ನೂ ಮುಂತಾದ ಕ್ರಿಮಿಕಿಟಗಳು ಹಾಗಿ ಪ್ಲಾಟ್ ನಲ್ಲಿ ವಾಸಿಸುತ್ತಿರುವ ಗ್ರಾಮಸ್ಥರಿಗೆ ಆರೋಗ್ಯ ಸಮಸ್ಯೆಗಳು ಎದುರಗುತ್ತಿದ್ದೂ ಇದನ್ನು ಇಗೆ ಬಿಟ್ಟರೆ ಸಾಂಕ್ರಾಮಿಕ ರೋಗಗಳು ಹರಡುವ ಸಂಭವವಿದೆ ಕೂಡಲೇ ಇಲ್ಲಿಯ ಪ್ಲಾಟ್ ಗಳಲ್ಲಿ ವಾಸಿಸುತ್ತಿರುವ ಮನೆಯ ಮುಂದುಗಡೆ ಚರಂಡಿ ವ್ಯವಸ್ಥೆ ಮಾಡಿಕೊಡಬೇಕು..

ಇಲ್ಲದೆ ಹೋದರೆ ಮುಂದಿನ ದಿನಮಾನಗಳಲ್ಲಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ವತಿಯಿಂದ ಉಘ್ರವಾದ ಹೋರಾಟ ಹಮ್ಮಿಕೊಳ್ಳಲಾಗುವದು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡುವದರೊಂದಿಗೆ ಮನವಿ ಪತ್ರ ನೀಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕರ ಘಟಕದ ಅಧ್ಯಕ್ಷರು ಪರಶುರಾಮ ಕುರುವತ್ತಿ ಆನಂದ ಲಮಾಣಿ ಶಂಕರ್ ಹಳ್ಳಪ್ಪನವರ ಭೀಮೇಶ್ ಕುಮಾರ್ ಕೋಕಾಳೆ ಭರಮಪ್ಪ ಮನಗನಿ ಮಾಲತೇಶ್ ಗೋಣೆಪ್ಪನವರ ವಿಶ್ವನಾಥ್ ಬಿ ಜಿ ಹನುಮಂತಪ್ಪ ಬೇವಿನಹಳ್ಳಿ ಗೀತಾ ಮನಗನಿ ಹನುಮವ್ವ ತಹಶೀಲ್ದಾರ್ ಶೈಲಾ ಚಲವಾದಿ ಗ್ರಾಮಸ್ಥರು ಇನ್ನೂ ಮುಂತಾದವರು ಮತ್ತಿತರರು ಉಪಸ್ಥಿತರಿದ್ದರು.