ಪಟ್ಟಣದ ಇಟ್ಟಿಗೆರೆ(ಕೆರೆ)ಗೆ ಚರಂಡಿ ನೀರು, ವಿಷಯುಕ್ತ ಕೆರೆ ನೀರು
ಸಾವಿರಾರು ಮೀನುಗಳ ಮಾರಣ ಹೋಮ

ಲಕ್ಷ್ಮೇಶ್ವರ : ಪಟ್ಟಣದ ಇಟ್ಟಿಗೆರೆ(ಕೆರೆ)ಗೆ ಚರಂಡಿ ನೀರಿನೊಂದಿಗೆ ಬಂದು ಸೇರುವ ಅಪಾರ ಪ್ರಮಾಣದ ತ್ಯಾಜ್ಯ, ಕೆಮಿಕಲ್ಸ್, ಬಯಲು ಶೌಚಾಲಯದ ವಿಷಯುಕ್ತ ನೀರಿನಿಂದ ೧೨ಎಕರೆ ೩೦ ಗುಂಟೆ ವಿಸ್ತೀರ್ಣದಲ್ಲಿನ ಕೆರೆಯಲ್ಲಿ ಸಾವಿರಾರು ಮೀನುಗಳು, ಮಾರಣ ಹೋಮವಾಗಿರುವುದು ಎಂತವರ ಕಲ್ಲು ಹೃದಯವನ್ನೂ ಕರಗಿಸುವಂತಾಗಿದೆ.ದೃಶ್ಯ ಮನಕುಲುಕುತ್ತಿದೆ,
ಕೆರೆಗೆ ಹರಿದು ಬರುವ ಮಳೆ ನೀರಿನ ಮಾರ್ಗಗಳು ಮುಚ್ಚಿದ್ದು ಕೆರೆ ನೀರಿಗೆ ಕೇವಲ ಚರಂಡಿ ನೀರು, ಗಲೀಜು ದಿನನಿತ್ಯ ಹರಿದು ಬಂದು ಸೇರುತ್ತಾ ಕೆರೆ ವಿಷಮ ಸ್ಥಿತಿಗೆ ತಲುಪಿರುವುದೇ ಕೆರೆಯಲ್ಲಿನ ಸಾವಿರಾರು ಮೀನುಗಳು, ಜಲಚರ ಜೀವಿಗಳು ಸತ್ತು ಕೆರೆಯ ಸುತ್ತಲೂ ಬಿದ್ದಿವೆ. ಈ ಕೆರೆಯಲ್ಲಿ ಜಾನುವಾರುಗಳಿಗೆ ನೀರು ಕುಡಿಸಿ ಮೈ ತೊಳೆಯುತ್ತಾರೆ, ಮಹಿಳೆಯರು ಬಟ್ಟೆ ತೊಳೆಯುತ್ತಾರೆ.

ರಾಜ್ಯ ಹೆದ್ದಾರಿಗೆ ಹೊಂದಿಕೊoಡಿರುವ ಕೆರೆಯಂಚಿನಲ್ಲಿ ಹತ್ತಾರು ಕುಟುಂಬಗಳು ವಾಸವಿದ್ದು ಮೀನುಗಳ ಮಾರಣಹೋಮ ಜನರಲ್ಲಿ ಹಾಗೂ ಜಾನು ವಾರಗಳಿಗೆ ಸಾಂಕ್ರಾಮಿಕ ರೋಗದ ಭೀತಿ ಹುಟ್ಟಿಸಿದೆ. ಕೆರೆಯಲ್ಲಿ ಬದುಕುಳಿದಿರುವ ಇನ್ನಷ್ಟು ಜೀವಿಗಳು ವಿಲವಿಲ ಒದ್ದಾಡುತ್ತಿದ್ದು ಮರಣ ಮೃದಂಗ ಮುಂದುವರೆದಿದ್ದು ಜಲಚರಗಳ ಜೀವಕ್ಕೆ ಬೆಲೆಯೇ ಇಲ್ಲವೇ,
ಸದ್ಯ ಪಟ್ಟಣದ ಹೃದಯ ಭಾಗದಲ್ಲಿಯೇ ಇರುವ ೧೨ ಎಕರೆ ೩೦ ಗುಂಟೆ ಇಟ್ಟಿಕೆರೆ ಪಟ್ಟಣದ ಜನರ ಜೀವನಾಡಿಯೇ ಆಗಿದೆ. ತಾಲೂಕಾ ಕೇಂದ್ರವಾದ ಪಟ್ಟಣದ ಜನ-ಜಾನುವಾರು, ಜಲಚರ ಜೀವಿಗಳಿಗೆ ಆಧಾರವಾದ ಕೆರೆ ಸ್ಥಳೀಯ ಪುರಸಭೆ, ಜನಪ್ರತಿನಿಧಿಗಳು, ಅಧಿಕಾರಿಗಳ ದಿವ್ಯ ನಿರ್ಲಕ್ಷ, ಬೇಜಾವಾಬ್ದಾರಿ ಕೆರೆ ಸಂಪೂರ್ಣ ಕೊಳಚೆ ನೀರು ಮತ್ತು ತ್ಯಾಜ್ಯ ವಿಲೇವಾರಿ ತಾಣವಾಗಿ ಪರಿಣಮಿಸಲು ಕಾರಣವಾಗಿದೆ, ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಈ ಕೆರೆ ಅಭಿವೃದ್ಧಿಯಾಗಬೇಕು ಎಂಬ ಸಾರ್ವಜನಿಕರ ದಶಕಗಳ ಕೂಗಿಗೆ ಎಚ್ಚತ್ತ ಪುರಸಭೆ ಇತ್ತೀಚಿಗೆ ಪುರಸಭೆಯ ಕೆರೆ ಅಭಿವೃದ್ಧಿ ಶುಲ್ಕ ೫೬ ಲಕ್ಷ ರೂ ಅನುದಾನಲ್ಲಿ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದಿಂದ ಕೆರೆ ಅಭಿವೃದ್ಧಿ ಕಾಮಗಾರಿ ಟೆಂಡರ್ ಹಂತಕ್ಕೆ ತಲುಪಿತ್ತು. ಆದರೆ ಅದೇನೋ ಕಾರಣದಿಂದ ಮರು ಟೆಂಡರ್‌ಗೆ ನಿರ್ಣಯಿಸಲಾಗಿ ಮತ್ತೇ ಕೆರೆ ಅಭಿವೃದ್ಧಿ ಕಾರ್ಯಕ್ಕೆ ಗ್ರಹಣ ಹಿಡಿದಿದ್ದು, ಇದೆ ತರಹ ಮುಂದುವರೆದರೆ ಮುಂಬರುವ ದಿನಗಳಲ್ಲಿ ಇದೊಂದು ಪಟ್ಟಣದಲ್ಲಿ ಕೆರೆ ಉಳಿದು ಕೊಂಡಿದ್ದು ಅದು ವಿಷನೀರಿನಿಂದ ಕೂಡುತ್ತಿದೆ,
ಪಟ್ಟಣದಲ್ಲಿನ ಬೋರ್‌ವೆಲ್,ಬಾವಿ ಸೇರಿ ಜಲಮೂಲಗಳಿಗೆ ಇಟ್ಟಿಕೆರೆ ಅಂತರ್ಜಲದ ಮೂಲಾಧಾರವಾಗಿದೆ, ಈ ಹಿಂದೆ ಕೆರೆ ತುಂಬಿದಾಗ ಜಿಲ್ಲಾಧಿಕಾರಿಗಳು, ಜಿಲ್ಲಾಡಳಿತ, ನೀರು ಹೊರಗಡೆ, ಬಿಟ್ಟು ಅಲ್ಲಿನ ಮನೆ ಹಾಗೂ ಮನುಷ್ಯರಿಗೆ ಅನುಕೂಲ ಮಾಡಿಕೊಟ್ಟರು ಆದರೆ ಈಗ ಮೀನು ಜಲಜೀವಿಗಳು ಸಾಯುತ್ತಿವೆ ಇದಕ್ಕೆ ಹೊಣೆಗಾರರು ಯಾರು, ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನ ಹರಿಸಿ
- ಪದ್ಮರಾಜ ಪಾಟೀಲ್, ಅಮರೀಶ ತೆಂಬದಮನಿ
ಸಾಮಾಜಿಕ ಚಿಂತಕರು,
ಪುರಸಭೆಯ ಕೆರೆ ಅಭಿವೃದ್ಧಿ ನಿಧಿ ೫೬ ಲಕ್ಷ ರೂದಲ್ಲಿ ಅಭಿವೃದ್ಧಿ ಕಾಮಗಾರಿ ಸದ್ಯದಲ್ಲಿಯೇ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಕೆರೆ ಅಭಿವೃದ್ದಿಗೆ ಕರೆಯಲಾದ ಟೆಂಡರ್ ರದ್ದುಗೊಂಡಿದ್ದು ಮರು ಟೆಂಡರ್ ಕರೆಯಲಾಗಿದೆ. ಅಭಿವೃದ್ದಿ ಸಮಯದಲ್ಲಿ ಕೆರೆಗೆ ಹರಿದು ಬರುವ ಚರಂಡಿಯ ತ್ಯಾಜ್ಯ, ಗಲೀಜು, ವಿಷಯುಕ್ತ ನೀರು ಕೆರೆ ಸೇರದಂತೆ ಮಾಡಲಾಗುವುದು. ಕೆರೆಯ ಪ್ರದೇಶದ ಸ್ವಚ್ಛತೆ, ಮತ್ತು ಆರೋಗ್ಯಕರ ಪರಿಸರಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
- ಮಂಜುನಾಥ ಮುದಗಲ್
ಹಿರಿಯ ಆರೋಗ್ಯ ನಿರೀಕ್ಷಕ