ಹಾವೇರಿ: ಪಿಯುಸಿ ಫಲಿತಾಂಶದಲ್ಲಿ ಹೆಣ್ಣುಮಕ್ಕಳದೇ ಮೇಲುಗೈ

ಹಾವೇರಿ: ಪಿಯುಸಿ ಫಲಿತಾಂಶದಲ್ಲಿ ಹೆಣ್ಣುಮಕ್ಕಳದೇ ಮೇಲುಗೈ
ವೀರಮಾರ್ಗ ನ್ಯೂಸ್ ಹಾವೇರಿ : ಕಳೆದ ಮಾರ್ಚ್ ತಿಂಗಳಲ್ಲಿ ನಡೆದಿದ್ದ ೨೦೨೪-೨೫ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-೧ರ ಫಲಿತಾಂಶ ಪ್ರಕಟವಾಗಿದ್ದು ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಅತ್ಯುತ್ತಮ ಫಲಿತಾಂಶವನ್ನು ದಾಖಲಿಸಿದ್ದಾರೆ.

ಕಾಲೇಜಿನ ಒಟ್ಟಾರೆ ಫಲಿತಾಂಶ ೬೮% ಆಗಿದ್ದು ಕಲಾ ವಿಭಾಗದ ವಿದ್ಯಾರ್ಥಿನಿ ಕು.ವಿನೋದ ಗುಮಗೋಳ ೬೦೦ಕ್ಕೆ ೫೬೧(೯೩.೫%) ಅಂಕ ಪಡೆಯುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನ, ವಾಣಿಜ್ಯ ವಿಭಾಗದ ಕು.ದೇವಮ್ಮ ಮೆವುಂಡಿ ೫೫೯ (೯೩.೧೭%) ಅಂಕ ಪಡೆದು ದ್ವಿತೀಯ ಮತ್ತು ವಿಜ್ಞಾನ ವಿಭಾಗದ ಕು.ಚೈತನ್ಯ ಜಾಧವ ೬೦೦ಕ್ಕೆ ೫೫೧(೯೧.೮೩%) ಅಂಕ ಪಡೆದು ತೃತೀಯ ಸ್ಥಾನ ಗಳಿಸಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.


ವಿದ್ಯಾರ್ಥಿನಿಯರು ವಿಭಾಗವಾರು ಉತ್ತಮ ಫಲಿತಾಂಶವನ್ನು ದಾಖಲಿಸಿದ್ದು ಕಲಾ ವಿಭಾಗದಲ್ಲಿ ವಿನೋದ ಗುಮ್ಮಗೋಳ ೫೬೧(೯೩.೫%) ಪ್ರಥಮ, ಭಾವನಾ ಏರಿಮನಿ ೫೪೪(೯೦.೬೭%) ದ್ವಿತೀಯ, ಗಿರಿಜಾ ಡಿ.ಕೆ. ೫೩೮(೮೯.೬೭%) ಅಂಕ ಪಡೆದು ತೃತೀಯ ಸ್ಥಾನ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ದೇವಮ್ಮ ಮೇವುಂಡಿ ೫೫೯(೯೩.೧೭%) ಪ್ರಥಮ, ಯಲ್ಲಮ್ಮ ಗೌಡಗೇರಿ ೫೫೧(೯೧.೮೩%) ದ್ವಿತೀಯ, ಜ್ಯೋತಿ ಭಜಂತ್ರಿ ೫೩೭(೮೯.೫%) ಅಂಕ ಪಡೆದು ತೃತೀಯ ಸ್ಥಾನ ಗಳಿಸಿದ್ದಾರೆ. ಅದೇ ರೀತಿ ವಿಜ್ಞಾನ ವಿಭಾಗದಲ್ಲಿ ಚೈತನ್ಯ ಜಾದವ ೬೦೦ಕ್ಕೆ ೫೫೧(೯೧.೮೩%) ಅಂಕದಿಂದ ಪ್ರಥಮ, ಗಾಯತ್ರಿ ಆನಿಶೆಟ್ಟರ ೫೪೭(೯೧.೧೭%) ದ್ವಿತೀಯ, ಮತ್ತು ರಕ್ಷಿತಾ ಕುಂಬಾರ ೫೪೪(೯೦.೬೭%) ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.ಹಲವಾರು ವಿದ್ಯಾರ್ಥಿನಿಯರು ವಿವಿಧ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಪಡೆದು ವಿಶೇಷ ಸಾಧನೆ ಮೆರೆದಿದ್ದಾರೆ.” ಪ್ರತಿನಿತ್ಯ ನಿರಂತರ ಕಠಿಣ ಪರಿಶ್ರಮ, ಉತ್ತಮ ಉಪನ್ಯಾಸಕ ವೃಂದದ ಬೋಧನೆ ಮತ್ತು ಮಾರ್ಗದರ್ಶನ, ನಮ್ಮ ಪಾಲಕರ ಪ್ರೋತ್ಸಾಹ, ಹಾಗೆಯೇ ಕಾಲೇಜಿನ ಹಿರಿಯ ವಿದ್ಯಾರ್ಥಿನಿಯರ ಸಾಧನೆಯಿಂದ ಪ್ರೇರಣೆ ಪಡೆದಿರುವುದು ನಮ್ಮ ಈ ಯಶಸ್ಸಿಗೆ ಕಾರಣವಾಯಿತು” ಎಂದು ವಿದ್ಯಾರ್ಥಿನಿಯರಾದ ವಿನೋದ ಗುಮ್ಮಗೋಳ, ದೇವಮ್ಮ ಮೇವುಂಡಿ, ಚೈತನ್ಯ ಜಾದವ, ಭಾವನಾ ಗಿರಿಜಾ ಎಲ್ಲಮ್ಮ ಗೌಡಗೇರಿ, ಜ್ಯೋತಿ ಭಜಂತ್ರಿ, ಗಾಯತ್ರಿ ಆನಿಶೆಟ್ಟರ, ರಕ್ಷಿತಾ ಕುಂಬಾರ ಸಂತೋಷ ವ್ಯಕ್ತಪಡಿಸಿ ಗುರುಬಳಗಕ್ಕೆ ಕೃತಜ್ಞತೆ ಸಲ್ಲಿಸಿದರು.
ವಿದ್ಯಾರ್ಥಿನಿಯರ ಈ ಸಾಧನೆ ಕಂಡು ಹರ್ಷ ವ್ಯಕ್ತಪಡಿಸಿದ ಕಾಲೇಜು ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ಇತರೆ ಸಿಬ್ಬಂದಿಯವರು ” ಫಲಿತಾಂಶದಲ್ಲಿ ವಿದ್ಯಾರ್ಥಿನಿಯರು ತೋರಿದ ಸಾಧನೆ ಖುಷಿ ನೀಡಿದೆ. ಮುಂದೆ ಬರುವ ವಿದ್ಯಾರ್ಥಿನಿಯರಿಗೂ ಇದು ಪ್ರೇರಣೆಯಾಗಲಿ.ಯಶಸ್ಸಿಗೆ ಕಠಿಣ ಪರಿಶ್ರಮ ಮತ್ತು ಅದಮ್ಯ ಇಚ್ಛಾಶಕ್ತಿಯೇ ಸಾಧನ. ವಿದ್ಯಾರ್ಥಿಗಳು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಬೇಕು.

ಮುಂದಿನ ಬಾರಿ ಇದಕ್ಕಿಂತ ಹೆಚ್ಚಿನ ಫಲಿತಾಂಶವನ್ನು ಪಡೆಯುವಂತೆ ಮಾಡಲು ಶ್ರಮಿಸುತ್ತೇವೆ ಎಂದು ಪ್ರಾಚಾರ್ಯರು ಮತ್ತು ಉಪನ್ಯಾಸಕರು ತಿಳಿಸಿ, ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲೆಂದು ಶುಭ ಹಾರೈಸಿದರು.

Leave a Reply

Your email address will not be published. Required fields are marked *