ಹಾವೇರಿ : ಜೈನ ಮಂದಿರದಲ್ಲಿ ವಿಶ್ವಶಾಂತಿಗಾಗಿ ಮಹಾಮಂತ್ರ ಪಠಣೆ
ವೀರಮಾರ್ಗ ನ್ಯೂಸ್ ಹಾವೇರಿ : ಅಂತರಾಷ್ಟ್ರೀಯಣಮೋಕಾರ ಮಂತ್ರ ದಿವಸ ಆಚರಣೆ ಅಂಗವಾಗಿ ವಿಶ್ವಶಾಂತಿಗಾಗಿ ಮಹಾಮಂತ್ರ ಪಠಣೆ ಧ್ಯೇಯವಾಕ್ಯದೊಂದಿಗೆ ಹಾವೇರಿ ನಗರದ ಜೈನ ಮಂದಿರದಲ್ಲಿ ಬುಧವಾರ ಬೆಳಿಗ್ಗೆ ೮ ಗಂಟೆಯಿಂದ ೯-೩೫ರವರೆಗೆ ಸತತ ೧ ಗಂಟೆ ೩೫ ನಿಮಿಷಗಳ ಕಾಲಣಮೋಕಾರ ಮಂತ್ರ ಪಠಣೆ ಮಾಡಲಾಯಿತು.
ಈಣಮೋಕಾರ ಮಂತ್ರ ಪಠಣದಲ್ಲಿ ಸಮಾಜದ ಮುಂಡರಾದ ಅಧ್ಯಕ್ಷ ಚಂದ್ರನಾಥ ಕಳಸೂರ, ಭರತರಾಜ ಹಜಾರಿ, ಎಸ್.ಎ. ವಜ್ರಕುಮಾರ, ಸನತಕುಮಾರ ಕಳಸೂರ, ಭೂಪಾಲ ಹೋಳಗಿ, ಮಹಾವೀರ ಕಳಸೂರ, ಮಾಣಿಕಚಂದ ಲಾಡರ, ಪಸದ್ಮರಾಜ ಕಳಸೂರ, ವಿಜಯಕುಮಾರ ಸಾತಗೊಂಡ, ಚಿಕ್ಕ ಮಕ್ಕಳು ಸೇರಿದಂತೆ ಸಮಸ್ತ ಶ್ರಾವಕ ಮತ್ತು ಶ್ರಾವಕಿಯರು ಶ್ವೇತ ವರ್ಣದ ಬಟ್ಟೆ ಧರಿಸಿ ಭಾಗವಹಿಸಿದ್ದರು.

ಇಂದು ಜಗತ್ತಿನಾದ್ಯಂತ ಏಕಾಲಕ್ಕೆ ಈಣಮೋಕಾರ ಮಂತ್ರ ಪಠಣ ಜರುಗಿತು. ವಿಶೇಷವಾಗಿ ದೆಹಲಿಯಲ್ಲಿ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿ ಅವರು ಸಹ ಣಮೋಕಾರ ಮಂತ್ರ ಪಠಣದಲ್ಲಿ ಭಾಗವಹಿಸಿದ್ದರು.