ಲಕ್ಷ್ಮೇಶ್ವರ : ಬದುಕಿ ಬದುಕಲು ಬಿಡು ಎಂಬ ಸತ್ಯ ಸಂದೇಶ ಜಗತ್ತಿಗೆ ನೀಡಿದ ಭಗವಾನ್ ಮಹಾವೀರರ
ವೀರಮಾರ್ಗ ನ್ಯೂಸ್ ಲಕ್ಷ್ಮೇಶ್ವರ : ಅಹಿಂಸಾ ಪರಮೋಧರ್ಮ, ಬದುಕಿ ಬದುಕಲು ಬಿಡು ಎಂಬ ಸತ್ಯ ಸಂದೇಶವನ್ನು ಜಗತ್ತಿಗೆ ನೀಡಿದ ಭಗವಾನ್ ಮಹಾವೀರರ ಜಯಂತೋತ್ಸವ ಅಂಗವಾಗಿ ಪಟ್ಟಣದಲ್ಲಿ ಗುರುವಾರ ಭಗವಾನ್ ಮಹಾವೀರರ ಜಯಂತೋತ್ಸವವನ್ನು ಜೈನ ಧರ್ಮೀಯರು ಶೃದ್ಧಾ ಭಕ್ತಿಯಿಂದ ಆಚರಿಸಿದರು.
ಪಟ್ಟಣದ ಅನಂತನಾಥ ಬಸದಿಯಿಂದ ಭಗವಾನ್ ಮಹಾವೀರ ಭಾವಚಿತ್ರ ಮೆರವಣಿಗೆ ಹೊರಟು ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಶಂಖ ಬಸದಿಗೆ ತಲುಪಿತು.

ಈ ಸಂದರ್ಭದಲ್ಲಿ ಮಹಿಳೆಯರು, ಮಕ್ಕಳು ಪುರುಷರು ಭಕ್ತಿಯಿಂದ ಮಹಾವೀರರ ಕುರಿತ ಹಾಡು ಹೇಳುತ್ತ, ಹೆಜ್ಜೆ ಹಾಕುತ್ತಾ ಸಾಗಿದರು. ಬೆಳಿಗ್ಗೆ ಭಗವಾನ್ ಮಹಾವೀರ ಸ್ವಾಮಿಯ ತೊಟ್ಟಿಲೋತ್ಸವ ಮತ್ತು ೨೪ ತೀರ್ಥಂಕರರ ನಾಮಗಳನ್ನು ಸ್ತುತಿಸಲಾಯಿತು.
ಮೆರವಣಿಗೆ ಬಳಿಕ ಬಸದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಜೈನ ದಿಗಂಬರ ಸಂಘದ ಅಧ್ಯಕ್ಷ ಬಿ.ಟಿ.ಪಾಟೀಲ ಭಗವಾನ್ ಮಹಾವೀರರು ಜಗತ್ತಿನ ಜೀವರಾಶಿಗಳಿಗೆ ಸತ್ಯ, ಅಹಿಂಸೆ, ಕಳ್ಳತನ ಮಾಡದಿರುವುದು, ಪವಿತ್ರತೆ, ಅನುಬಂಧಗಳಿಂದ ಕೂಡಿದ ಧರ್ಮ ಮಾರ್ಗಗಳನ್ನು ಅರುಹಿ ಜೀವನ್ಮುಕ್ತಿ ಮಾರ್ಗ ತೋರಿದ್ದಾರೆ. ಅವರು ಮಾನವ ಕುಲಕೋಟಿಯ ಉದ್ಧಾರಕ್ಕಾಗಿ ತೋರಿದ ಜೀವನ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಶಾಂತಿ ನೆಮ್ಮದಿಯ ಬದುಕನ್ನು ನಮ್ಮೆಲ್ಲರದ್ದಾಗಿಸಿಕೊಳ್ಳೋಣ ಎಂದರು.
ಈ ಸಂದರ್ಭದಲ್ಲಿ ಸಮಾಜದ ಹಿರಿಯ ಮುಖಂಡ ಭರತರಾಜ ಬರಿಗಾಲಿ, ಉಪಾಧ್ಯಕ್ಷ ಜೀವಣ್ಣ ಗೋಗಿ, ಕಾರ್ಯದರ್ಶಿ ಸಂತೋಷ ಗೋಗಿ, ವೈಭವ ಗೋಗಿ, ಸನ್ಮತಿ ಗೋಗಿ, ಬ್ರಹ್ಮೇಶ ಗೋಗಿ, ಮಹಾವೀರ ಬರಿಗಾಲಿ, ವೈಭವ ಗೋಗಿ, ಜಯಣ್ಣ ಗೋಗಿ, ನಂದಕುಮಾರ್ ಪಾಟೀಲ, ಸಮ್ಮೇದ ಗೋಗಿ, ಆಕಾಶ ಗೋಗಿ, ಅಣ್ಣಪ್ಪ ಪಾಟೀಲ, ರಾಜಣ್ಣ ಗೋಗಿ, ಭರತ್ ಪಾಟೀಲ, ಮಹಾವೀರ ಪಂಡಿತ, ಸನ್ಮತಿ ಗೋಗಿ ಹಾಗೂ ಜೈನ ಸಮಾಜ ಭಾಂಧವರು, ಮಹಿಳೆಯರು ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.