ಲಕ್ಷ್ಮೇಶ್ವರ : ರಾಷ್ಟ್ರಮಟ್ಟದ ಕೋಡ್ ಪಿಯಸ್ಟಾ ೫.೦
ವೀರಮಾರ್ಗ ನ್ಯೂಸ್ ಲಕ್ಷ್ಮೇಶ್ವರ : ಪಟ್ಟಣದ ಶ್ರೀಮತಿ ಕಮಲಾ ಮತ್ತು ಶ್ರೀ ವೆಂಕಪ್ಪ ಎಂ ಅಗಡಿ ಇಂಜಿನಿಯರಿಂಗ್ ಮಹಾವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಿಂದ ರಾಷ್ಟ್ರಮಟ್ಟದ ಕೋಡ್ ಪಿಯಸ್ಟಾ ೫.೦ ನಿರಂತರ ೨೪ ತಾಸುಗಳ ಹ್ಯಾಕಥಾನ ಸ್ಪರ್ಧೆ ಇತ್ತೀಚಿಗೆ ಜರುಗಿತು.
ಬೆಳಗಾವಿಯ ಕೆ ಎಲ್ ಎಸ್ ಗೊಗಟೆ ಇಂಜಿನಿಯರಿಂಗ್ ಕಾಲೇಜಿನ ಕೌಶಲ ಎಸ್ ಕೇದಾರಿ ಮತ್ತು ತಂಡದ ಸದಸ್ಯರು ಪ್ರಥಮ ಸ್ಥಾನ, ಹುಲಕೋಟಿಯ ರೂರಲ್ ಇಂಜಿನಿಯರಿಂಗ್ ಕಾಲೇಜ್ ಬಿ ಲೈನಾ ಮತ್ತು ತಂಡದ ಸದಸ್ಯರು &ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜಿನ ಮಾರ್ವಿನ ಜಿ ರಾಯಚೂರ ಹಾಗೂ ತಂಡದ ಸದಸ್ಯರು ದ್ವಿತೀಯ ಸ್ಥಾನ, ತೊಂಟದಾರ್ಯ ಇಂಜಿನಿಯರಿಂಗ್ ಕಾಲೇಜಿನ ಗಾಯಿತ್ರಿ ಎಚ್ ಕೆ,ಹಾಗೂ ತಂಡದ ಸದಸ್ಯರು,ಹಾಗೂ ಅಗಡಿ ಇಂಜಿನಿಯರಿಂಗ್ ಕಾಲೇಜು, ಬೆಳಗಾವಿಯ ಕೃಷದೇವ,ಸುರೇಶಕುಮಾರ ಮತ್ತು ತಂಡದ ಸದಸ್ಯರು,ತೃತೀಯ ಸ್ಥಾನವನ್ನು ಬಹುಮಾನ ಸಹಿತ ಪಡೆದರು.

ಹುಬ್ಬಳ್ಳಿಯ ನ್ಯಾನಟೇಕ್ ಸೋಲೊಷನ್ ಸಂಸ್ಥಾಪಕ ಅಲ್ಪಾನ್ಸ್ ಕೆ ಹ್ಯಾಕಥಾನ್ ಸ್ಪರ್ಧೆ ಉದ್ಘಾಟಿಸಿದರು.
ನಿರ್ಣಾಯಕರಾಗಿ ಕುರ್ಷಿದಾ ಬೇಗಂ ಶಿರೂರ,ಶಾದಾಬ ಅಲಿ ಇಳಕಲ್,ಆಗಮಿಸಿದ್ದರು, ಒಟ್ಟು ೬೦ಕ್ಕೂ ಹೆಚ್ಚು ತಂಡಗಳು ವಿವಿಧ ರಾಜ್ಯಗಳಿಂದ ಆಗಮಿಸಿದ್ದರು, ಹುಬ್ಬಳ್ಳಿಯ ಅಲ್ಟಿಮೇಟ್ ಅಲ್ಟಿಮೆಜ ಟೆಕ್ನಾಲಜಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಖಾದೀರ ಖಾಜಿ ಪ್ರಶಸ್ತಿ ವಿಜೇತರಿಗೆ ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಪರಶುರಾಮ ಬಾರ್ಕಿ,ಡಾ ಆರ್ ಎಂ ಪಾಟೀಲ್, ಸುಭಾಷ ಮೇಟಿ, ವಿಕ್ರಮ ಶಿರೋಳ,ಡಾ. ಎನ್. ಹಯವದನ, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ಅರುಣ ಕುಂಬಿ, ಕಾರ್ಯಕ್ರಮ ಸಂಯೋಜಕ ಶ್ರೀಕಾಂತ್ ಜೋಗರ, ಪ್ರೋ ನಾಗರಾಜ ಬರದೇಲಿ,ಪ್ರೋ ಶ್ರೀಕಾಂತ ಮಲ್ಲಿಗವಾಡ, ಪ್ರೋ ಅನಿಲ ನಾರಾಯಣಪುರ, ಪ್ರೋ ಬಸವರಾಜ ಮುರಗೋಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.