ರಾಜಭೋಗ ತ್ಯಜಿಸಿ, ಅಹಿಂಸಾ ಮಾರ್ಗದಿಂದ ಜೀವನ ಸಾಕ್ಷಾತ್ಕಾರ : ವಾಸುದೇವ

ರಾಜಭೋಗ ತ್ಯಜಿಸಿ, ಅಹಿಂಸಾ ಮಾರ್ಗದಿಂದ ಜೀವನ ಸಾಕ್ಷಾತ್ಕಾರ : ವಾಸುದೇವ
ವೀರಮಾರ್ಗ ನ್ಯೂಸ್ ಲಕ್ಷ್ಮೇಶ್ವರ :
ಭಗವಾನ್ ಮಹಾವೀರರು ರಾಜ ಭೋಗಗಳನ್ನು ತ್ಯಜಿಸಿ ಅಹಿಂಸಾ ಮಾರ್ಗದ ಮೂಲಕ ಜೀವನವನ್ನು ಸಾಕ್ಷಾತ್ಕಾರಗೊಳಿಸಿದವರು ಎಂದು ತಹಸೀಲ್ದಾರ ವಾಸುದೇವ ವಿ. ಸ್ವಾಮಿ ಹೇಳಿದರು.
ಅವರು ತಾಲೂಕ ಆಡಳಿತ ವತಿಯಿಂದ ತಹಸೀಲ್ದಾರ ಕಚೇರಿಯಲ್ಲಿ ಮಹಾವೀರ ಜಯಂತಿ ಪ್ರಯುಕ್ತ ಮಹಾವೀರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಉದ್ದೇಶಿಸಿ ಮಾತನಾಡುತ್ತ ಅಹಿಂಸೆ, ಸತ್ಯ, ಮತ್ತು ತಪಸ್ಸಿನ ಮಾರ್ಗವನ್ನು ತೋರಿದರು ಅವರ ವಿಚಾರಗಳು ತತ್ವಜ್ಞಾನ ಬದುಕಿನ ಪ್ರಾಮಾಣಿಕತೆ ಸದಾ ಸ್ಫೂರ್ತಿದಾಯಕ ಭಗವಾನ್ ಮಹಾವೀರರ ಮಾನವೀಯ ಮೌಲ್ಯಗಳನ್ನು ಉಪದೇಶಗಳನ್ನು ನಿತ್ಯ ಜೀವನದಲ್ಲಿ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಜೈನ ಸಮಾಜದ ಯುವ ಮುಖಂಡ ಭೂಪಾಲ ಘೋಂಗಡಿ ಮಾತನಾಡಿ, ಸಮಾಜವನ್ನು ಸತ್ಯ ಮತ್ತು ಶಾಂತಿಯ ಕಡೆಗೆ ಕೊಂಡೋಯ್ದು ತಾವು ಅದೇ ಮಾರ್ಗದಲ್ಲಿ ನಡೆದ ಮಹಾನ ಚೇತನ ಮಹಾವೀರರು ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಶಾಂತಿ ಸಹ ಬಾಳ್ವೆಯಿಂದ ಜೀವನ ನಡೆಸಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರೇಡ್ ೨ ತಹಸೀಲ್ದಾರ ಮಂಜುನಾಥ ಅಮಾಸಿ, ಉಪ ತಹಸೀಲ್ದಾರ ಪ್ರಶಾಂತ ಕಿಮಾಯಿ ಮನಿಯಾರ, ಕರಾಸನೌ ಸಂಘ ತಾಲೂಕ ಅಧ್ಯಕ್ಷ ಗುರುರಾಜ ಹವಳದ, ಅರೋಗ್ಯ ಇಲಾಖೆಯ ಬಿ.ಎಸ್. ಹಿರೇಮಠ ಜೈನ ಸಮಾಜದ ನಂದಕುಮಾರ ಪಾಟೀಲ್,
ಎ.ಬಿ. ಪಾಟೀಲ್, ವಾಸಣ್ಣ ಪಾಟೀಲ್, ವಿನಯ ಪಾಟೀಲ್, ಪ್ರಕಾಶ ಪಾಟೀಲ್ ಮಹಾವೀರ ಘೋಂಗಡಿ ವಿವಿಧ ಇಲಾಖೆಯ ತಹಸೀಲ್ದಾರ ಕಚೇರಿ ಸಿಬ್ಬಂದಿಗಳು ಇದ್ದರು.

Leave a Reply

Your email address will not be published. Required fields are marked *