ನಾಳೆ ಹಾವಳಿಯಲ್ಲಿ ಹನುಮ ಜಯಂತಿ, ಧರ್ಮಸಭೆ
ವೀರಮಾರ್ಗ ನ್ಯೂಸ್ ಲಕ್ಷ್ಮೇಶ್ವರ : ಏ ೧೨ಶನಿವಾರ ದಂದು ಹಾವಳಿ ಆಂಜನೇಯ ದೇವಸ್ಥಾನದಲ್ಲಿ ಹನುಮ ಜಯಂತಿ ಹಾಗೂ ಧರ್ಮಸಭೆ ನಡೆಯಲಿದೆ.
ಪಟ್ಟಣದ ಪೇಟೆ ಶ್ರೀ ಹಾವಳಿ ಆಂಜನೇಯ ಟ್ರಸ್ಟ್ (ರಿ), ಹಿಂದೂ ಮಹಾಸಭಾ ಗಣಪತಿ ಸೇವಾ ಮಂಡಳಿ ಇವರ ವತಿಯಿಂದ ಹನುಮ ಜಯಂತಿ ಪ್ರಯುಕ್ತ ಪ್ರತಿವರ್ಷದಂತೆ ಈ ವರ್ಷವು ಶ್ರೀ ಬಾಲ ಆಂಜನೇಯ ತೊಟ್ಟಿಲೋತ್ಸವ ನಿಮಿತ್ಯ ಏ ೧೨ ಶನಿವಾರದಂದು ನಡೆಯಲಿದೆ.
ಅಂದು ಬೆಳಿಗ್ಗೆ ೬ಗಂಟೆಯಿಂದ ರುದ್ರಾಭಿಷೇಕ, ಪಾಲಕಿ ಉತ್ಸವ ತೊಟ್ಟಿಲೋತ್ಸವ ಸುಮಂಗಲಿಯರಿಗೆ ಉಡಿ ತುಂಬುವುದು ನಂತರ ಜಗದ್ಗುರು ರೇಣುಕಾಚಾರ್ಯ ರುದ್ರ ಬಳಗದಿಂದ ರುದ್ರಪಠಣ, ಮಹಾಮಂಗಳಾರತಿ ನಡೆಯಲಿದೆ.

ಸಂಜೆ ೬ಕ್ಕೆ ಧರ್ಮ ಸಭೆ ನಡೆಯಲಿದ್ದು, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬೆಳ್ಳಟ್ಟಿ ರಾಮಲಿಂಗೇಶ್ವರ ದಾಸೋಹಮಠದ ಮನಿಪ್ರ ಬಸವರಾಜ ಮಹಾಸ್ವಾಮಿಗಳು ವಹಿಸುವರು ಕಾರ್ಯಕ್ರಮ ಉದ್ಘಾಟನೆಯನ್ನು ಶಾಸಕ ಡಾ. ಚಂದ್ರು ಲಮಾಣಿ, ಸಾಂಸ್ಕೃತಿಕ ಸಂಜೆ ಉದ್ಘಾಟನೆ ಮಾಜಿ ಶಾಸಕರಾದ ಜಿ.ಎಂ. ಮಹಾಂತಶೆಟ್ಟರ, ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ಉದ್ಘಾಟಿಸುವರು. ಅಧ್ಯಕ್ಷತೆ ಶ್ರೀ ಪೇಟೆ ಹಾವಳಿ ಆಂಜನೇಯ ಟ್ರಸ್ಟ್ ಅಧ್ಯಕ್ಷ ನೀಲಪ್ಪ ಕರ್ಜಕಣ್ಣವರ, ಅತಿಥಿಗಳಾಗಿ ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ,ಬಸವೇಶ ಮಹಾಂತ ಶೆಟ್ಟರ, ವಿಜಯ ಹತ್ತಿಕಾಳ, ಈಶ್ವರ ಮೆಡ್ಲೆರಿ, ಜಗದೀಶ ಪುರಾಣಿಕಮಠ, ಆಗಮಿಸುವರು.
ರಾತ್ರಿ ೮ಕ್ಕೆ ವೇದಿಕಾ ನೃತ್ಯ ಶಾಲೆ ಹಾಗೂ ಕಲಾ ವೈಭವ ಭರತನಾಟ್ಯಯವರಿಂದ ಕಾರ್ಯಕ್ರಮ ಜರುಗಲಿದ್ದು, ರಾತ್ರಿ ೯ಕ್ಕೆ ವಾಸು ಮೆಲೋಡಿಸ್ ಲಕ್ಷ್ಮೇಶ್ವರ, ಪ್ರಸ್ತುತಪಡಿಸುವ ಮೈಸೂರಿನ ಜ್ಯೂನಿಯರ ಪುನೀತ ರಾಜಕುಮಾರ ಹಾಗೂ ಸಂಗಡಿಗರಿಂದ ಸಂಗೀತ ಹಾಗೂ ಹಾಸ್ಯ ರಸಮಂಜರಿ ನಡೆಯಲಿದೆ ಎಂದು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.