ಏ.೧೨ರಂದು ಶ್ರೀ ಹುಕ್ಕೇರಿಮಠ ಅಕ್ಕನ ಬಳಗದ ೮೭ನೇ ವಾರ್ಷಿಕೋತ್ಸವ
ವೀರಮಾರ್ಗ ನ್ಯೂಸ್ ಹಾವೇರಿ : ೮೭ನೇ ಶ್ರೀ ಹುಕ್ಕೇರಿ ಮಠದ ಅಕ್ಕನ ಬಳಗದ ವಾರ್ಷಿಕೋತ್ಸವ ಸಮಾರಂಭ. ಶುಕ್ರವಾರ ಶ್ರೀ ಹುಕ್ಕೇರಿ ಮಠದ ಶಿವಾನುಭವ ಮಂಟಪದಲ್ಲಿ ಜರಗಲಿದೆ.
ಏಪ್ರೀಲ್ ೧೨, ೨೦೨೫ನೇ ಶನಿವಾರದಂದು ಅಕ್ಕಮಹಾದೇವಿ ದೇವಸ್ಥಾನದಲ್ಲಿ ಜರುಗಲಿದೆ. ಶುಕ್ರವಾರ ಬೆಳಗ್ಗೆ ೯ ಗಂಟೆಗೆ ಷಟಸ್ಥಲ ಧ್ವಜಾರೋಹಣವನ್ನು ಶ್ರೀಮತಿ ಲಲಿತಾ ಜಿ. ಹುಲಿಕಟ್ಟಿ ಜೆಡ್‌ಪಿ ಮತ್ತು ನಗರಸಭಾ ಮಾಜಿ ಮೆಂಬರ್ ಹಾವೇರಿ. ಇವರು ನಡೆಸಿಕೊಡುವರು.

ದಿವ್ಯ ಸಾನಿಧ್ಯವನ್ನು ಶ್ರೀ ಮ.ನಿ.ಪ್ರ. ಸದಾಶಿವ ಮಹಾಸ್ವಾಮಿಗಳು ಶ್ರೀಹುಕ್ಕೇರಿಮಠ, ಹಾವೇರಿ ಹಾಗೂ ಶ್ರೀ ಷ.ಬ್ರ ಗುರುಮಹೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಗುರುನಂಜೇಶ್ವರ ಮಠ ಕೂಡಲ ಸಮ್ಮುಖದಲ್ಲಿ, ಅಧ್ಯಕ್ಷತೆಯನ್ನು ಶ್ರೀಮತಿ ಚಂಪಾ ಎಮ್. ಹುಣಸಿಕಟ್ಟಿ. ಪ್ರಾರ್ಥನೆಯನ್ನು ಅಕ್ಕನ ಬಳಗ ತಾಯಂದಿರಿಂದ. ಅತಿಥಿಗಳು ಶ್ರೀಮತಿ ಮಂಗಳಾ ವಿ. ಕೆಂಡದಮಠ. ಲೇಖಕರು ಹಾಗೂ ಸಾಹಿತಿಗಳು. ಸನ್ಮಾನವನ್ನು ಶ್ರೀಮತಿ ಶರಣಮ್ಮ ತಹಶೀಲ್ದಾರರು ತಾಲೂಕ ದಂಡಾಧಿಕಾರಿಗಳು ಹಾವೇರಿ ಹಾಗೂ ಶ್ರೀ ಕೇಶವಮೂರ್ತಿ. ವಿ.ಬಿ. ವಿಜಯವಾಣಿ ಜಿಲ್ಲಾ ವರದಿಗಾರರು. ಶ್ರೀಮತಿ ತೇಜಸ್ವಿನಿ ಕಾಶೆಟ್ಟಿ ಮೂಡಣ ಕನ್ನಡ ದಿನಪತ್ರಿಕೆ ಸಂಪಾದಕರು. ನಂತರ ದೊಡ್ಡಾಟ ’ವೀರ ಅಭಿಮನ್ಯು’ ಕರ್ಜಗಿ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲಾ ಮಕ್ಕಳಿಂದ. ನಿರೂಪಣೆಯನ್ನು ಶ್ರೀಮತಿ ಜಯಲಕ್ಷ್ಮಿ ಆರ್. ಶಿಕ್ಷಕಿಯರು ನೆರವೇರಿಸುವರು.

ದಿನಾಂಕ ೧೨-೦೪-೨೦೨೫ನೇ ಶನಿವಾರ ಬೆಳಗ್ಗೆ ೮ ಗಂಟೆಗೆ ಜಗನ್ಮಾತೆ ಅಕ್ಕಮಹಾದೇವಿ ಮೂರ್ತಿಗೆ ಹಾಗೂ ಶ್ರೀ ಆಂಜನೇಯ ಮೂರ್ತಿಗೆ ರುದ್ರಾಭಿಷೇಕ ಮತ್ತು ಸಹಸ್ರ ಬಿಲ್ವಾರ್ಚನೆ ಬೆಳಿಗ್ಗೆ ೦೯:೦೦ ಗಂಟೆಗೆ ಅಕ್ಕನ ಮಗಳು ತಾಯಂದಿರಿಂದ ಪಲ್ಲಕ್ಕಿ ಉತ್ಸವ ನಡೆಯುವುದು ಸಕಲವಾದ್ಯ ವೈಭವಗಳೊಂದಿಗೆ ಶ್ರೀ ಹುಕ್ಕೇರಿ ಮಠದಿಂದ ಹೊರಟು ಶ್ರೀ ಅಕ್ಕಮಹಾದೇವಿ ಮಂದಿರ ತಲುಪುವುದು. ಅದೇ ದಿವಸ ಸಾಯಂಕಾಲ ೬:೦೦ಗೆ ವೈರಾಗ್ಯ ನಿಧಿ ಮಹಾಶರಣೆ ಅಕ್ಕಮಹಾದೇವಿ ತೊಟ್ಟಿಲೋತ್ಸವ ಉಡಿ ತುಂಬುವ ಕಾರ್ಯಕ್ರಮ ನಡೆಯುವುದು. ಎರಡು ದಿನದ ಕಾರ್ಯಕ್ರಮದಲ್ಲಿ ಎಲ್ಲ ಶರಣ-ಶರಣಿಯರು ಭಾಗವಹಿಸಬೇಕೆಂದು ಅಧ್ಯಕ್ಷರು ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.