ರಸಗೊಬ್ಬರ ಖರೀದಿಗೆ ಎಫ್ಐಡಿ ಕಡ್ಡಾಯ ಸಲ್ಲ :ಭುವನೇಶ್ವರ ಶಿಡ್ಲಾಪೂರ
ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಸಗೊಬ್ಬರ ಖರೀದಿಗೆ ಎಫ್ಐಡಿ ಕಡ್ಡಾಯಗೊಳಿಸಿರುವುದನ್ನು ರಾಜ್ಯ ಸರ್ಕಾರ ತೆರವುಗೊಳಿಸಬೇಕು ಎಂದು ಹಾವೇರಿ ಜಿಲ್ಲೆಯ ರೈತ ಸಂಘ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘ ಒತ್ತಾಯಿಸಿದೆ. ಹಾವೇರಿಯ ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಮಂಜುನಾಥ್ ಅವರಿಗೆ ಶನಿವಾರ ದಿವಸ ಮನವಿ ಮಾಡಲಾಯಿತು. ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪೂರ ಮಾತನಾಡಿ ರಸಗೊಬ್ಬರ ಖರೀದಿಗೆ ಎಫ್ಐಡಿ ಕಡ್ಡಾಯಗೊಳಿಸುವುದರಿಂದ ರೈತರಿಗೆ ತೊಂದರೆಯಾಗುತ್ತದೆ ಒಂದು ಎಕರೆಗೆ ಮೂರರಿಂದ ಐದು ಚೀಲ ಯೂರಿಯಾ ಗೊಬ್ಬರವನ್ನು ಬಳಸಲಾಗುತ್ತದೆ ನಮ್ಮ ಜಿಲ್ಲೆಯಲ್ಲಿ ಹೆಚ್ಚು ಮಳೆ ಯಾಗುವುದರಿಂದ ಭೂಮಿಯು ಜವಳು ಆಗುತ್ತದೆ ಜವಳು ಆಗಿ ಬೆಳೆ ಹಳದಿ ಬಣ್ಣ ತಿರುಗಿ ಇಳುವರಿಯಲ್ಲಿ ಕುಂಠಿತವಾಗುತ್ತದೆ. ಬೆಳೆದ ಬೆಳೆಯಲ್ಲಿ ಇಳುವರಿ ಬಾರದಿದ್ದಲ್ಲಿ ರೈತ ಸಾಲಗಾರನಾಗುತ್ತಾನೆ ರೈತ ಯಾವಾಗಲೂ ಸ್ವಾಭಿಮಾನಿ ಅವನ ಮರ್ಯಾದೆಗೆ ಧಕ್ಕೆ ಬಂದರೆ ಆತ್ಮಹತ್ಯೆಗೆ ಮುಂದಾಗುತ್ತಾನೆ ಆದ ಕಾರಣ ಸರಕಾರ ಇದನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು
ರಾಜ್ಯ ಸರ್ಕಾರ ಒಂದು ಎಕರೆಗೆ ಒಂದು ಚೀಲ ಯೂರಿಯಾ ಗೊಬ್ಬರ ವಿತರಣೆಗೆ ಮುಂದಾಗಿರುವುದು ಸರಿಯಾದ ಕ್ರಮವಲ್ಲ ರೈತರು ಯಾವ ಬೆಳೆ ಬೆಳೆಯಬೇಕು ಯಾವ ಬೆಳೆಗೆ ಎಷ್ಟು ಗೊಬ್ಬರವನ್ನು ಹಾಕಬೇಕೆಂಬುದು ರೈತರಿಗೆ ಗೊತ್ತು ಅದು ರಾಜಕಾರಣ ಮಾಡುವವರಿಗೆ ಸರ್ಕಾರಿ ಅಧಿಕಾರಿಗಳಿಗೆ ತಿಳಿಯುವುದಿಲ್ಲ ಯಾಕೆಂದರೆ ನಾವು ರೈತರು ಬೆಳೆ ಬೆಳೆಯುವುದು ನಮಗೆ ಗೊತ್ತು ನಿಮಗೆ ಅದನ್ನು ತಿನ್ನುವುದು ಮಾತ್ರ ಗೊತ್ತು ಆದ ಕಾರಣ ರಸಗೊಬ್ಬರದ ಕಡಿತ ಗೊಂಡಲ್ಲಿ ಇಳುವರಿ ಪ್ರಮಾಣ ಕಡಿಮೆಯಾಗುತ್ತದೆ ಎಫ್ಐಡಿ ಕಡ್ಡಾಯ ಮತ್ತು ಒಂದು ಎಕರೆಗೆ ಒಂದು ಚೀಲ ಯೂರಿಯಾ ಒದಗಿಸುವ ಯೋಜನೆಯನ್ನು ಸರಕಾರ ಕೈಬಿಡಬೇಕೆಂದು ರೈತ ಸಂಘ ಹಾಗೂ ರಾಜ್ಯ ಕಬ್ಬು ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.