ಹಕ್ಕರಿಕೆ ಪಲ್ಲೆ ಕರಾಮತ್ ಗೇ ರೋಗ ಊರು ಆಚೇ…
ಹತ್ತರಕಿ (ಹಕ್ಕರಿಕೆ) ಪಲ್ಲೆ ಎಂದು ಉತ್ತರ ಕರ್ನಾಟಕದ ಆಡುಭಾಷೆಯಲ್ಲಿ ಕರೆಯಲ್ಪಡುವ ಈ ಹತ್ತರಕಿ ಸೊಪ್ಪಿಗೆ ಉರ್ದು ಭಾಷೆಯಲ್ಲಿ ಫತ್ತರೇಕಿ ಭಾಜಿ ಎಂದು ಕರೆಯುತ್ತಾರೆ. ಈ ಸೊಪ್ಪನ್ನು ಬೀಜ ಹಾಕಿ ಉಳುಮೆ ಮಾಡಿ ಬೆಳೆಸುವುದಿಲ್ಲ. ಗಾಳಿಯಿಂದ ಬೀಜ ಪ್ರಸಾರವಾಗಿ ಎಲ್ಲೆಂದರಲ್ಲಿ ಬೆಳೆಯುತ್ತದೆ. ವೀರಮಾರ್ಗ ನ್ಯೂಸ್ : ಮೊದಲೆಲ್ಲ ಹೊಲದಲ್ಲಿ ಬುತ್ತಿ ಬಿಚ್ಚಿ ಊಟಕ್ಕೆ ಕುಳಿತಾಗ ಪಕ್ಕದಲ್ಲೇ ನೆಲದಲ್ಲಿ ಹರಡಿದ ಈ ಹತ್ತರಕಿ ಪಲ್ಲೆ ಕಿತ್ತುಕೊಂಡು ತಿನ್ನುವ ರೂಢಿ ಇತ್ತು. ಆಗ ಹಿರಿಯರು ಹತ್ತರಕಿ ಪಲ್ಲೆ ತಿಂದರ ಹೊಟ್ಯಾನ ಹರಳು…