ಪಂಚಾಯಿತಿಗೆ ಬೀಗ ಹಾಕಿ ಉಗ್ರ ಹೋರಾಟದ ಎಚ್ಚರಿಕೆ ಘಂಟೆ…

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರು ತಾಲೂಕ ಹೊನ್ನತ್ತಿ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರಿಗಳು ಪುಷ್ಪಲತಾ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕವಿತಾ ಬೆಟ್ಟದ ಎಇಇ ಜಯರಾಮ ಇವರೊಂದಿಗೆ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಕೆರೇಮಲ್ಲಾಪುರ ಗ್ರಾಮ ಘಟಕದ ಅಧ್ಯಕ್ಷರು ಶಿವನಗೌಡ ಪಾಟೀಲ ಇವರ ಸಮ್ಮುಖದಲ್ಲಿ ಸಮಸ್ತ ಪದಾಧಿಕಾರಿಗಳು ಗ್ರಾಮಸ್ಥರು ಸಾರ್ವಜನಿಕರು ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಪಂಚಾಯಿತಿಗೆ ಸಂಬಂಧ ಪಟ್ಟ ಪ್ರತಿಯೊಂದು ಹಳ್ಳಿಗಳಲ್ಲಿ ನಡೆಯಬೇಕಾದ ಕಾಮಗಾರಿಗಳ ಬಗ್ಗೆ ಹಾಗೂ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚಿಸಿ ಅಧಿಕಾರಿಗಳಿಂದ ಈ ಎಲ್ಲಾ ಕೆಲಸಗಳು ಎರಡು ತಿಂಗಳೊಳಗೆ ಎಲ್ಲಾ ಕಾಮಗಾರಿಗಳನ್ನು ಪೂರ್ಣಮುಗಿಸಬೇಕು ಇಲ್ಲದೆ ಹೋದರೆ ಮುಂದಿನ ದಿನಮಾನಗಳಲ್ಲಿ ಪಂಚಾಯಿತಿಗೆ ಬೀಗ ಹಾಕಿ ಉಗ್ರವಾದ ಹೋರಾಟ ಮಾಡಲಾಗುವದು ಎಂದು ಅಧಿಕಾರಿಗಳಿಂದ ಲಿಖಿತ ರೂಪದಲ್ಲಿ ಪತ್ರ ಪಡೆಯಲಾಯಿತು.

ಶಿವನಗೌಡ ಪಾಟೀಲ್ ಗ್ರಾಮ ಘಟಕದ ಅಧ್ಯಕ್ಷರು ಮಾತನಾಡಿ ಪಂಚಾಯಿತಿ ಇಲಾಖೆಗೆ ನಾನು ಒಂದು ವರ್ಷದಿಂದ ಮನವಿ ಪತ್ರ ನೀಡುತ್ತಿದ್ದೇನೆ ಕೆರೇಮಲ್ಲಾಪುರ ಗ್ರಾಮದಲ್ಲಿ ಹಾಗೂ ಪಂಚಾಯತಿಗೆ ಸಂಬಂಧಪಟ್ಟ ಪ್ರತಿಯೊಂದು ಹಳ್ಳಿಯಲ್ಲಿ ಜೆಜಿಎಂ ಮನೆಮನೆ ಗಂಗೆ ಜಲಜೀವನ ಯೋಜನೆ ನಳವನ್ನು ಇಲಾಖೆಯಿಂದ ಹಳವಡಿಸಿದ್ದು ಗ್ರಾಮದಲ್ಲಿ ಇದುವರೆಗೂ ಯಾವುದೇ ರೀತಿಯಿಂದ ಹೊಳೆ ನೀರು ಸರಿಯಾಗಿ ನಳದಲ್ಲಿ ನೀರು ಬರುತ್ತಿಲ್ಲ ಇದು ಸಂಪೂರ್ಣ ಕಳಪೆ ಕಾಮಗಾರಿಯಾಗಿದೆ ಕಳೆದ ಎಂಟು ವರ್ಷದಿಂದ ನಮ್ಮ ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಬೀದಿ ದೀಪದ ಕಂಬದ ವ್ಯವಸ್ಥೆ ಗಟಾರ ಸಿಸಿ ರಸ್ತೆ ಶುದ್ಧ ಕುಡಿಯುವ ನೀರಿನ ಘಟಕದ ವ್ಯವಸ್ಥೆ ಇನ್ನು ಮುಂತಾದ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ ಕಾಮಗಾರಿಗಳನ್ನು ಮಾಡದೆ ಪಂಚಾಯಿತಿ ಅಭಿವೃದ್ಧಿ ಯಾಗುತ್ತಿದೆ ಹಳ್ಳಿಗಳು ಅಭಿವೃದ್ಧಿ ಯಾಗುತ್ತಿಲ್ಲ ಸಾರ್ವಜನಿಕರು ಕೇಳಿದರೆ ಹರಕೆ ಉತ್ತರ ನೀಡುತ್ತಿದ್ದಾರೆ ಈ ಎಲ್ಲಾ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು ಇಲ್ಲದೆ ಹೋದರೆ ಮುಂದಿನ ದಿನಮಾನಗಳಲ್ಲಿ ಪಂಚಾಯಿತಿಗೆ ಬೀಗ ಜಡಿದು ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಚಂದ್ರಪ್ಪ ಬಣಕಾರ ತಾಲೂಕ ಅಧ್ಯಕ್ಷರು ಮಾತನಾಡಿ ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟ ಪ್ರತಿಯೊಂದು ಗ್ರಾಮಕ್ಕೆ ಅಧಿಕಾರಿಗಳು ದಿನಾಲೂ ಬೆಟ್ಟಿ ನೀಡಬೇಕು ಬೆಟ್ಟಿ ನೀಡಿದಾಗ ಮಾತ್ರ ಗ್ರಾಮದ ಜನಗಳ ಸಮಸ್ಯೆ ಏನು ಎಂದು ಅರ್ಥವಾಗುತ್ತದೆ ಗ್ರಾಮಕ್ಕೆ ಭೇಟಿ ನೀಡದೆ ಇಲಾಖೆಯಲ್ಲಿ ಕುಳಿತು ಕೆಲಸ ಮುಗಿಸಿಕೊಂಡು ಮನೆಗೆ ಹೋದರೆ ಜನಗಳ ಸಮಸ್ಯೆ ತಮಗೆ ಅರ್ಥವಾಗುವುದಿಲ್ಲ ಗ್ರಾಮದಲ್ಲಿ ಕಳೆದ ಒಂದು ವರ್ಷದಿಂದ ಚರಂಡಿ ಕ್ಲೀನ್ ಮಾಡಿರುವುದಿಲ್ಲ ಕ್ಲೀನ್ ಮಾಡದೇ ಇರುವ ಕಾರಣದಿಂದ ಗ್ರಾಮದಲ್ಲಿ ಸೊಳ್ಳೆ ಕ್ರಿಮಿಕೀಟಗಳು ಹೆಚ್ಚಾಗುತ್ತಿದ್ದು ಗ್ರಾಮದ ಜನಗಳಿಗೆ ಅತಿ ಹೆಚ್ಚು ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ ಸಾಂಕ್ರಾಮಿಕ ರೋಗ ಹರಡುವ ಸಂಭವವಿದೆ ಕೂಡಲೇ ಚರಂಡಿ ಕ್ಲೀನ್ ಮಾಡಿಸಬೇಕು ಕಳಪೆ ಕಾಮಗಾರಿ ನಡೆದಿರುವ ಸ್ಥಳಕ್ಕೆ ಹೋಗಿ ಸ್ಥಳ ಪರಿಶೀಲನೆ ಮಾಡಿ ಗುತ್ತಿಗೆದಾರರ ಮೇಲೆ ಸೂಕ್ತವಾದ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು

ಹಾವೇರಿ ಜಿಲ್ಲಾ ಸಂಘಟನೆಯ ಕಾರ್ಯದರ್ಶಿ ನಿಂಗಪ್ಪ ಬೀರಣ್ಣನವರ ಮಾತನಾಡಿ ಅರ್ಧಕ್ಕೆ ನಿಂತಿರುವ ಚರಂಡಿ ಸರಿಪಡಿಸಬೇಕು ಗ್ರಾಮದಲ್ಲಿ ನೀರನ್ನ ಟ್ಯಾಂಕ ಬಹಳ ದಿನಗಳಿಂದ ಸ್ವಚ್ಛತೆ ಮಾಡದಿರುವದಿಲ್ಲ ಕ್ಲಿನ್ ಮಾಡಿಸಬೇಕು ಬೀದಿ ದೀಪಗಳನ್ನು ಅಳವಡಿಸಬೇಕು 40 ಡಿಗ್ರಿ ಬಿಸಿಲು ಇರುವ ಇಂತಹ ಒಂದು ತಾಪಮಾನದಲ್ಲಿ ಎರಡು ಕೂಡ ನೀರು ಬಿಡುವ ಹಾಗೆ ನೀರು ಬಿಟ್ಟರೆ ಸಾರ್ವಜನಿಕರು ಬದುಕುವುದು ಹೇಗೆ ಸಾಧ್ಯ ಕೂಡಲೇ ನೀರಿನ ಸಮಸ್ಯೆಯನ್ನು ನಿವಾರಿಸಬೇಕು ಪಂಚಾಯಿತಿ ಇಲಾಖೆಗೆ ಕೊಟ್ಟ ಮನವಿ ಪತ್ರಕ್ಕೆ ಇಲಾಖೆಯಿಂದ ಸೂಕ್ತವಾದ ಉತ್ತರ ನೀಡದೆ ಕೊಟ್ಟ ಮನವಿ ಪತ್ರವನ್ನು ಡೇಸಪಿನಗೆ ಹಾಕುವುದಾದರೆ ಪಂಚಾಯಿತಿ ಇರುವುದಾದರೂ ಏಕೆ ? ಎನ್ನುವಂತಾಗಿದೆ ಬೀಗ ಹಾಕುವದೇ ಸೂಕ್ತ ಎನಿಸುತ್ತಿದೆ ಎಂದು ಅಗ್ರಹಿಸಿದರು

ಈ ಸಭೆಯಲ್ಲಿ ಸಾರ್ವಜನಿಕರು ಸಹ ಅಧಿಕಾರಿಗಳೊಂದಿಗೆ ತಮ್ಮ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಿ ಯಾವುದೇ ಕೆಲಸಗಳು ಇದುವರೆಗೂ ಅಧಿಕಾರಿಗಳಿಂದ ಆಗಿರುವುದಿಲ್ಲ ಎಂದು ರೋಚ್ಚಿಗೆದ್ದು ಪಂಚಾಯಿತಿಯೇ ಬೇಡ ಪಂಚಾಯಿತಿಗೆ ಬೀಗ ಹಾಕಿ ಕೈ ಬಿಡೋಣ ಎಂದು ಸಾರ್ವಜನಿಕರು ಸಹ ಆಕ್ರೋಶ ವ್ಯಕ್ತಪಡಿಸಿದರು

ನಂತರ ಸಭೆಯಲ್ಲಿರುವ ಅಧಿಕಾರಿಗಳು ನಿಂತಿರುವ ಎಲ್ಲಾ ಕಾಮಗಾರಿಗಳಿಗೂ ಸಣ್ಣ ಪುಟ್ಟ ಕೆಲಸಗಳಿಗೂ ನಮಗೆ ಎರಡು ತಿಂಗಳು ಗಡುವೂ ಕೊಡಿ ಎರಡು ತಿಂಗಳೊಳಗೆ ಪಂಚಾಯಿತಿ ವತಿಯಿಂದ ಇರುವ ಸಮಸ್ಯೆಗಳನ್ನು ಪೂರ್ಣಗೊಳಿಸುತ್ತೇವೆ ಎಂದು ಪತ್ರದ ಮೂಲಕ ಸಾರ್ವಜನಿಕರಿಗೆ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಅವರಿಗೆ ಪತ್ರ ನೀಡಿ ಸಭೆ ಯಶಸ್ವಿಗೊಳಿಸಲಾಯಿತು

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕರ ಘಟಕದ ಅಧ್ಯಕ್ಷರಾದ ಪರಶುರಾಮ ಕುರುವತ್ತಿ ಆನಂದ್ ಲಮಾಣಿ ಕೃಷ್ಣ ವೇಶಗಾರ ಶಂಕರ ಹಳ್ಳಪ್ಪನವರ ಮಂಜುನಾಥ ಹುರುಳಿ ಯಶವಂತ ಪಾಟೀಲ್ ರವಿ ಮೂಲಿಕೇರಿ ರವಿಗೌಡ ಪಾಟೀಲ್ ಹಾಲನಗೌಡ ಪಾಟೀಲ್ ವಿ ಎಸ್ ಚಪ್ರದ ವರುಣ್ ಮಾಯಾಚಾರಿ ಗ್ರಾಮಸ್ಥರು ಸಾರ್ವಜನಿಕರು ಮತ್ತಿತರರು ಉಪಸ್ಥಿತರಿದ್ದರು