ತುಂಗಭದ್ರ ನದಿಗೆ ಕನ್ನ ಹಾಕಿದ ಚೋರರು ರಸ್ತೆ ನಿರ್ಮಾಣ…

ತುಂಗಭದ್ರಾ ನದಿಗೆ ಕನ್ನ ಹಾಕಿದ ಚೋರರು ರಸ್ತೆ ನಿರ್ಮಾಣ ಮಾಡಿದ್ದು ರೋಚಕ ಕಥೆ….

ಕಾನೂನನ್ನ ಸಂಪೂರ್ಣವಾಗಿ ಗಾಳಿಗೆ ತೂರಿದ ಟಾಸ್ಕ್ ಪೋಸ್ ಸಮಿತಿ…

ಸರ್ಕಾರಿ ಅಧಿಕಾರಿಗಳ ಕಣ್ಮುಂದೆ ನಡಿತಿರುವುದು ಅಕ್ರಮವೇ,,,,?

ಹೋರಾಟಗಾರರು ಹಾರಾಟಗಾರರು ಮಾಹಿತಿ ಹಕ್ಕಿನಲ್ಲಿ ಕೇಳಿ ಪ್ರಶ್ನೆ ಕೇಳುವವರು ಸ್ವಲ್ಪ ನಿದ್ರೆಗೆ ಜಾರಿರಬಹುದೇ,,,?

ದೊಡ್ಡ ರಸ್ತೆ ನಿರ್ಮಾಣ ಕುಳಿತಲ್ಲೇ ಮೂರ್ನಾಲ್ಕು ಜಿಲ್ಲೆಗಳನ್ನು ಅಲ್ಲಾಡಿಸುವ ಮಾಹಿತಿ ಹಕ್ಕಿನ ಹೋರಾಟಗಾರನ ಕಣ್ಣು ಇದರ ಮೇಲೆ ಬಿದ್ದಿಲ್ಲವೇ…..?

ಅಥವಾ ಬಿದ್ದು ತೀರ್ಥ ಪ್ರಸಾದ ಮುಟ್ಟಿದಿಯೇ ಅಥವಾ ಕಾರು ಡ್ಯಾಮೇಜ್ ಕಾರು ರಿಪೇರಿಗೆ ಬಿಲ್ಲು ಸರಿಯಾಗಿ ಹೋಯಿತೇ ಎನ್ನುವ ಪ್ರಶ್ನೆ ಸಾರ್ವಜನಿಕರು ಮೇಲಿಂದ ಮೇಲೆ ಗುಸು-ಗುಸು ಮಾತನಾಡುತ್ತಿದ್ದಾರೆ,,,

ತುಂಗಭದ್ರ ನದಿ ಪಾತ್ರದಲ್ಲಿರುವ ಮರಳನ್ನು ಅಕ್ರಮವಾಗಿ ಸಾಗಾಟವೇ,,,?

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೆಬೆನ್ನೂರು ತಾಲೂಕು : ತುಂಗಭದ್ರಾ ನದಿಯ ಪಾತ್ರದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ಪರಿಸರ ನಾಶ ಮಾಡುವುದರ ಜೊತೆಗೆ ಸಂಪೂರ್ಣ ನೀರಿನ ಬರ ಮುಂದಿನ ದಿನಮಾನಗಳಲ್ಲಿ ಕಟ್ಟಲಿದೆ. ಪರಿಸರ ನಾಶ ನೀರು ಇನ್ನೂ ಅನೇಕ ಸಮಸ್ಯೆಗಳು ಬರುವುದು ಮನುಷ್ಯನ ಆಶಾ ಜೀವನ ಹಾಗೂ ತಮ್ಮನ್ನ ತಾವು ಅಳಿಸಿ ಹಾಕುವ ಮಹತ್ವಾ ಕಾರ್ಯಾ ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ 6:00 ವರೆಗೆ ಸತತವಾಗಿ ನಡೆಯುತ್ತಲೇ ಇದೆ, ಅದು ಹೇಗೆ ಯಾವ ವ್ಯಕ್ತಿಗಳಿಂದ ಪುಡಾರಿ ರಾಜಕಾರಣಿಗಳು, ಹಾಗೂ ದುಡ್ಡಿನ ಅಮಲಿನಲ್ಲಿ ತೇಲುವ ವಿದ್ಯಾವಂತ ಯುವಕರಿಂದ ನಾಶವಾಗುತ್ತಿದೆ. ಅಕ್ರಮಕ್ಕೆ ಸಾತು ಕೊಡುವಂತ ಕೆಲಸ ಆಡಳಿತದ ಮತ್ತು ಸರ್ಕಾರಿ ಅಧಿಕಾರಿಗಳ ಕೆಲಸ ಮುಂದುವರೆದಿದೆ ಅನ್ನುವುದಕ್ಕೆ ಈ ರಸ್ತೆಗಳೆ ಸಾಕ್ಷಿಯಾಗಿವೆ.

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ತುಂಗಭದ್ರ ನದಿ ದಡದಲ್ಲಿ ಅಕ್ರಮ ಮರಳುಗಾರಿಕೆ ಮಾಡುವದಕ್ಕಾಗಿ ನಿರ್ಮಿಸಿರುವ ನದಿಯಲ್ಲಿನ ರಸ್ತೆ ಅಧಿಕಾರಿಗಳು ಇದರಲ್ಲಿ ಶಾಮೀಲ್ ಆಗಿರುವುದರಿಂದ ನದಿಯಲ್ಲಿನ ರಸ್ತೆ ಕಾನೂನು ಬದ್ಧವಾಗಿ ಕೆಲಸ ಮಾಡುತ್ತದೆ. ಇಂತಹ ಅಕ್ರಮವನ್ನು ತಡೆಯಲಾಗದ ಮೇಲೆ ಕ್ರಷರ್ ಸ್ಥಾಪಿಸಿ ಮರಳನ್ನು ತಯಾರಿಸಲಾಗುತ್ತದೆ ಎಂಬುದನ್ನು ನಾಗರೀಕರಿಗೆ ನಂಬುವಂತೆ ಮಾಡುವ ಚಟುವಟಿಕೆಗಳು ಕಾನೂನು ಬದ್ಧ ಹೇಗಾಗುತ್ತದೆ. ಕೋಟಿಹಾಳ ಮೂಲದಲ್ಲಿ ಕ್ರಷರ್ ಮೂಲಕ ಮರಳು ಉತ್ಪಾದನೆ ಮಾಡಲಾಗುತ್ತದೆ ಎಂದು ಹೇಳಲಾಗುವ ಉತ್ಪಾದನಾ ಘಟಕದಲ್ಲಿ ಪ್ರತಿನಿತ್ಯ ಉತ್ಪಾದನೆ ಎಷ್ಟು ಆಗುತ್ತದೆ. ನಿಜಕ್ಕೂ ಉತ್ಪಾದನಾ ಘಟಕದಲ್ಲಿ ಮರಳು ಉತ್ಪಾದನೆ ಆಗುತ್ತಿದೆಯೇ? ನನಗೆ ಬಂದಿರುವ ಮೂಲದ ಮಾಹಿತಿಯ ಪ್ರಕಾರ ನದಿಯಲ್ಲಿನ ಮರಳನ್ನು ಸಂಗ್ರಹಿಸಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ಇತ್ತೀಚಿಗೆ ಖಾಸಗಿ ವಾಹಿನಿ ಒಂದು ದೊಡ್ಡ ಮಟ್ಟದಲ್ಲಿ ಸಂಚಲನ ಉಂಟುಮಾಡುವ ಸುದ್ದಿಯನ್ನು ಬಿತ್ತರ ಮಾಡಿತ್ತು. ಆದರೆ ಮತ್ತೆ ಎಂದಿನಂತೆ ಅಕ್ರಮ ಮರಳುಗಾರಿಕೆ ನಡೆದಿದೆ ಎಂದು ಹೇಳಲಾಗುತ್ತಿದೆ. ಕಾನೂನು ಯಾವ ಪುರುಷಾರ್ಥಕ್ಕೆ ಮಾಡಬೇಕು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಏಕೆ ಸುಮ್ಮನೆ ವೇತನ ಹಾಳು. ಬಿಟ್ಟುಬಿಡಿ ಯಾರು ಎಷ್ಟು ಬೇಕೋ ಅಷ್ಟು ಮರಳು ತುಂಬಿಕೊಂಡು ಹೋಗುತ್ತಾರೆ. ನಿಜಕ್ಕೂ ಮರಳುಗಾರಿಕೆಯಿಂದ ಸರ್ಕಾರಕ್ಕೆ ಬರುವ ರಾಜಸ್ವ ಎಷ್ಟು. ಅಕ್ರಮವಾಗಿ ಸಾಗಾಟ ಮಾಡುವುದರಿಂದ ಸರ್ಕಾರಕ್ಕೆ ಆಗುತ್ತಿರುವ ಹಾನಿ ಎಷ್ಟು? ಸದರಿ ವಿಷಯವನ್ನು ಮಾಹಿತಿ ಹಕ್ಕಿನಲ್ಲಿ ಕೇಳಿದರೆ ಹಿರಿಯ ಭೂ ವಿಜ್ಞಾನಿಗೆ ಅಧಿಕಾರಿಗಳು ತಪ್ಪು ಯರ್ರಾ ಬಿರ್ರಿ ನಿರ್ಲಕ್ಷಿತ ದಾಖಲೆಯ ಕೆಲ ಪುಟಗಳನ್ನು ಒದಗಿಸಿ ಸಾಗ ಹಾಕುವ ಕೆಲಸ ಮಾಡಿದ್ದಾರೆ. ಮೂಲತಃ ಸದರಿ ಇಲಾಖೆಯಲ್ಲಿ ಪ್ರತಿವರ್ಷ ಪರಿಷ್ಕರಿಸಿ ಪ್ರಕಟಿಸಿ ಪ್ರಸಾರ ಮಾಡಬೇಕಾಗಿರುವ ಸ್ವಯಂ ಘೋಷಿತ ವರದಿಯನ್ನು ಸಹ ಅಧಿಕಾರಿಗಳು ಪ್ರಕಟಿಸದೆ ನಿರ್ಲಕ್ಷ್ಯ ತೋರಿದ್ದಾರೆ. ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿಗಳು ಸರ್ಕಾರಕ್ಕೆ ವಂಚನೆ ಆಗುತ್ತಿದೆ ಎಂಬುದು ಒಂದು ಅಂದಾಜು. ಸದರಿ ಅಕ್ರಮ ಮರಳುಗಾರಿಕೆಗೆ ದಂದೆಗೆ ಕಡಿವಾಣ ಹಾಕಬೇಕಾದರೆ ತುಂಗಭದ್ರಾ ನದಿ ದಡದಲ್ಲಿ ಅಕ್ರಮವಾಗಿ ಮರಳು ತುಂಬುವ ಪ್ರತಿಯೊಂದು ಜಾಗವನ್ನು ರಕ್ಷಿತ ಜಾಗ ಪರಿವರ್ತಿಸಬೇಕು. ಪ್ರಸ್ತುತ ಸಿ ಬಿ ಐ ತನಿಖೆ ಮಾಡಿಸುವ ಮೂಲಕ ಪ್ರಕೃತಿಯ ಮೇಲೆ ನಡೆಯುತ್ತಿರುವ ಅಕ್ರಮದ ಆಕ್ರಮಣವನ್ನು ಸಕ್ರಮವಾಗಿ ತಡೆಯ ಬೇಕಾದ ಅವಶ್ಯಕತೆ ಇದೆ.


ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ತುಂಗಭದ್ರಾ ನದಿ ದಡದಲ್ಲಿ ಆಗುತ್ತಿರುವ ನದಿಯಲ್ಲಿನ ಆಳದ ಬದಲಾವಣೆಗೆ ಅಕ್ರಮ ಮರಳುಗಾರಿಕೆ ಕಾರಣವಾಗಿರುವುದರಿಂದ ಅದರ ಹೊಣೆಗಾರಿಕೆಯನ್ನು ಹೊರಲೇ ಬೇಕಾಗುತ್ತದೆ. ಅಕ್ರಮ ಮರಳುಗಾರಿಕೆಯ ಪರಿಸ್ಥಿತಿಯಿಂದಾಗಿ ನದಿಯಲ್ಲಿ ಈಜಲು ಹೋಗಿ ಮೃತರಾಗಿರುವ ಎಷ್ಟೋ ಪ್ರಕರಣಗಳು ಅಲ್ಲಲ್ಲೇ ಮುಚ್ಚು ಹೋಗಿವೆ ಎಂದು ಹೇಳಲಾಗುತ್ತದೆ. ನದಿಯಲ್ಲಿ ಈಜಲು ಹೋದವರು ಅಕ್ರಮ ಮರಳುಗಾರಿಕೆಯಿಂದಾಗುವ ತೆಗ್ಗುಗಳಿಗೆ ಬಿದ್ದು ಈಜಲು ಆಗದೆ ಜೀವ ಕಳೆದುಕೊಂಡಿರುವ ಪ್ರಕರಣಗಳಿಗೂ ಸಹ ಇಲಾಖೆ ಜವಾಬ್ದಾರಿಯಾಗುತ್ತದೆ.

ಈ ಪ್ರಶ್ನೆ ಜೊತೆಗೆ ವರದಿ : j m, ರಾಜಶೇಖರ. ಸಾಮಾಜಿಕ ಜಾಲತಾಣದಲ್ಲಿ ಜೋರ್ ಶಬ್ದ ಮಾಡುತಿದ್ದೆ…

ಮಾಹಿತಿ ಹಕ್ಕಿನಲ್ಲಿ ಕೇಳಿದ ಪ್ರಶ್ನೆಗೆ ಉತ್ತರ ಸಿಗದೇ ಕ್ಯಾಕರಿಸಿ ಉಗಿದಿದ್ದಾರೆ….