ಶಾಲೆಯಲ್ಲೇ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ

ರಾಣೇಬೆನ್ನೂರು ತಾಲೂಕ ಹುಲಿಕಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಹುಲಿಕಟ್ಟಿ 2025 26 ನೇ ಸಾಲಿನ ಎಸ್ ಎಸ್ ಎಲ್ ಸಿ 10ನೇ ತರಗತಿಯ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಶಾಲೆಗೆ ಅತಿ ಹೆಚ್ಚು ಅಂಕ ಪಡೆದ ಬೀರಪ್ಪ ಕರಿಯಪ್ಪ ಕೋಲಕಾರ 605 ಮಮತಾ ಯಾಲಿಗಾರ 604 ಬಸವರಾಜ ತೆರೆದಹಳ್ಳಿ 580 ವಿಜಯಲಕ್ಷ್ಮಿ ಭಟ್ಟಂಗಿ 560 ಅಂಕಗಳಿಸಿದ 4 ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಿ ಪ್ರೋತ್ಸಾಹಿಸಿ ಅಭಿನಂದನೆಗಳನ್ನು ತಿಳಿಸಲಾಯಿತು.

ಹಾವೇರಿ ಜಿಲ್ಲಾ : ರಾಣೇಬೆನ್ನೂರ ತಾಲೂಕ : ಹುಲಿಕಟ್ಟಿ ಗ್ರಾಮದ ಶಾಲೆಯ ಮುಖ್ಯೋಪಾಧ್ಯಾಯರು ನಾಗರಾಜ ಬಣಕಾರ ಮಾತನಾಡಿ ನಮ್ಮ ಶಾಲೆಯಲ್ಲಿ 47 ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದು ನಮ್ಮೆಲ್ಲ ಶಿಕ್ಷಕರಿಗೂ ಸಂತಸದ ವಿಷಯ ಇದಕ್ಕೆಲ್ಲ ಪರಿಶ್ರಮ ನಮ್ಮ ಶಾಲೆಯ ಎಲ್ಲಾ ಶಿಕ್ಷಕರ ಪರಿಶ್ರಮ ಎಂದು ಹೇಳಲು ನಾನು ವ್ಯಕ್ತಪಡಿಸುತ್ತೇನೆ ಹಾಗೂ ನಮ್ಮ ಎಸ್ ಡಿ ಎಂ ಸಿ ಅಧ್ಯಕ್ಷರು ಸದಸ್ಯರ ಪರಿಶ್ರಮ ಸಹಕಾರ ಸಹ ಇರುತ್ತದೆ ಎಲ್ಲಾ ವಿದ್ಯಾರ್ಥಿಗಳಿಗೂ ಅಭಿನಂದನೆಗಳನ್ನು ತಿಳಿಸುತ್ತೇನೆ ಮುಂದಿನ ವಿದ್ಯಾಭ್ಯಾಸದಲ್ಲಿಯು ಸಹ ಇನ್ನೂ ಹೆಚ್ಚಿನ ಅಂಕ ಗಳಿಸಿ ಶಾಲೆಗೆ ಒಳ್ಳೆಯ ಹೆಸರು ತರುವ ಮಕ್ಕಳಾಗಿ ಎಂದು ಶುಭ ಹಾರೈಸಿದರು

ಸರ್ಕಾರಿ ನೌಕರರ ಸಂಘದ ತಾಲೂಕ ಪ್ರಧಾನ ಕಾರ್ಯದರ್ಶಿಗಳು ಹಾಗೂ ಶಾಲೆಯ ಗಣಿತ ವಿಷಯದ ಶಿಕ್ಷಕರು ಮಂಜುನಾಥ್ ಅವರು ನಮ್ಮ ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಒಳ್ಳೆಯ ಅಂಕಗಳನ್ನು ಗಳಿಸಿ ನಮ್ಮ ಶಾಲೆಗೆ ಶಿಕ್ಷಕರಿಗೆ ಎಸ್ ಡಿ ಎಂ ಸಿ ಅವರಿಗೆ ಗ್ರಾಮಸ್ಥರಿಗೆ ಹೆಸರು ತರುವಂತ ವಿದ್ಯಾರ್ಥಿಗಳು ಆಗಿದ್ದಾರೆ ಎಂದು ಖುಷಿ ವ್ಯಕ್ತಪಡಿಸಿದರು

ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರು ಚಂದ್ರಪ್ಪ ಬಣಕಾರ ಹಾಗೂ ಸಮಸ್ತ ಪದಾಧಿಕಾರಿಗಳು ಸಂಘಟನೆಯ ವತಿಯಿಂದ ಎಲ್ಲಾ ವಿದ್ಯಾರ್ಥಿಗಳ ಕೊರಳಿಗೆ ಶಾಲು ಹಾಕಿ ಅಭಿನಂದನೆಗಳನ್ನು ತಿಳಿಸಲಾಯಿತು ನಂತರ ಮಾತನಾಡಿದ ಅವರು ಮೊದಲಿಗೆ ನಮ್ಮ ಶಾಲೆಯ ಎಲ್ಲಾ ಶಿಕ್ಷಕರಿಗೂ ಅಭಿನಂದನೆಗಳನ್ನು ತಿಳಿಸಬೇಕು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿ ಪಾಸಾಗಲು ಶಿಕ್ಷಕರ ಶ್ರಮ ಬಹಳ ಮಹತ್ವವಾದುದ್ದು ನಮ್ಮ ಶಾಲೆಯ ಶಿಕ್ಷಕರು ಶಾಲೆಯ ರಜೆ ದಿನಗಳಲ್ಲಿಯೂ ಸಹ ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ನೀಡಿ ಪರೀಕ್ಷೆಯಲ್ಲಿ ಯಾವದೇ ವಿದ್ಯಾರ್ಥಿಗಳು ಫೇಲ್ ಆಗದಂತೆ ವಿದ್ಯಾಭ್ಯಾಸ ನೀಡಿದ್ದಾರೆ ಈ ಶುಭ ಹಾರೈಕೆಗಳು ಶಿಕ್ಷಕರಿಗೆ ಸಲ್ಲಬೇಕು ಒಬ್ಬ ಗಾರೆ ಕೆಲಸ ಮಾಡುವ ಕರಿಯಪ್ಪ ಕೋಲಕಾರ ಅವರ ಮಗ ಬೀರಪ್ಪ ಕೋಲಕಾರ ಅವರು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡಾ 96%80 605 ಅಂಕಗಳಿಸಿ ತಾಲೂಕಿಗೆ ಮೊದಲನೇ ಸ್ಥಾನ ಬಂದಿರುವದು ಶಾಲೆಯ ಶಿಕ್ಷಕರಿಗೂ ಎಸ್ ಡಿ ಎಂ ಸಿ ಅಧ್ಯಕ್ಷರು ಸರ್ವ ಸದಸ್ಯರಿಗೂ ಗ್ರಾಮಸ್ಥರಿಗೂ ನಮ್ಮೆಲ್ಲರಿಗೂ ಖುಷಿಯಾಗಿದೆ ಇನ್ನೂ ಮುಂದಿನ ವಿದ್ಯಾಭ್ಯಾಸದಲ್ಲಿಯೂ ಸಹ ಹೆಚ್ಚಿನ ಅಂಕಗಳಿಸಿ ಎಲ್ಲಾ ವಿದ್ಯಾರ್ಥಿಗಳು ಶಾಲೆಗೆ ಗ್ರಾಮಕ್ಕೆ ಹೆಸರು ತರುವ ವಿದ್ಯಾರ್ಥಿಗಳಾಗಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು ಹಾಲಸಿದ್ದಪ್ಪ ಕುಡಪಲಿ ಪರಶುರಾಮ ಭಟ್ಟಂಗಿ ಪ್ರವೀಣಕುಮಾರ ತುವಾರ ಬೀರಪ್ಪ ಇಟಗಿ ಬೀರಪ್ಪ ಹೊಸಳ್ಳಿ ನಾಗಪ್ಪ ಕೋಲಕಾರ ಮೈಲಪ್ಪ ಭಟ್ಟಂಗಿ ಹಿಂದಿ ಶಿಕ್ಷಕರಾದ ಚಂದ್ರು ಸರ್ ಸಮಾಜ ವಿಜ್ಞಾನ ಶಿಕ್ಷಕರಾದ ಮಲ್ಲಿಕಾರ್ಜುನ ಸರ್ ಶಾಲೆಯ ಕ್ಲರ್ಕ್ ತುಂಗಮ್ಮ ಹಾಗೂ ಮಕ್ಕಳ ತಂದೆ ತಾಯಿ ಪೋಷಕರು ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು