ಹಾವೇರಿ ಜಿಲ್ಲಾ : ರಟ್ಟೀಹಳ್ಳಿ ತಾಲೂಕು : ಹೃದಯದಲ್ಲಿ ಸ್ಟಂಟ್ ಅಳವಡಿಕೆಯಾಗಿದ್ದರೂ ಛಲಬಿಡದ ತ್ರಿವಿಕ್ರಮ ಈ ನಮ್ಮ ಶಿವಕುಮಾರ ಉಪ್ಪಾರ :
ಕಳೆದ ಐದು ದಿನಗಳ ಹಿಂದೆ ಅಂದರೆ ದಿನಾಂಕ:-22/04/2026 ರಂದು ಬೆಳಿಗ್ಗೆ 11.30 ಕ್ಕೆ ಹಾವೇರಿ ಜಿಲ್ಲಾ ರಟ್ಟಿಹಳ್ಳಿ ತಾಲೂಕು ರಟ್ಟಿಹಳ್ಳಿ ನಗರದ ಕೋಟೆ ಪ್ರದೇಶದ ಉಪ್ಪಾರ ಓಣಿಯಲ್ಲಿ ನನ್ನ ಆತ್ಮೀಯ ಮಾಧ್ಯಮ ಮಿತ್ರ ಹಾಗೂ ಕಾನಿಪ ಧ್ವನಿ ರಟ್ಟಿಹಳ್ಳಿ ತಾಲೂಕು ಅಧ್ಯಕ್ಷರಾದ ಶಿವಕುಮಾರ ಉಪ್ಪಾರ ಇವರ ನೇತೃತ್ವದಲ್ಲಿ ಟ್ರಸ್ಟ್ ರಚನೆ ಮಾಡಿಕೊಂಡು ಜನಾಂಗ ಕಡಿಮೆ ಸಂಖ್ಯೆಯಲ್ಲಿದ್ದರೂ ಕೂಡ ಎಲ್ಲಾ ಸಮಾಜ ಜನಾಂಗದ ಪ್ರೀತಿ ಗಳಿಸಿ ಅಂದಾಜು 75 ಲಕ್ಷ ರೂ ಗಳ ವೆಚ್ಚದಲ್ಲಿ ಶ್ರೀ ರಾಜರ್ಷಿ ಭಗೀರಥ ಹಾಗೂ ದುರ್ಗಾದೇವಿಯ ದೇವಸ್ಥಾನದ ಉದ್ಗಾಟನೆ ಜೊತೆಗೆ ಪ್ರತಿಷ್ಟಾಪನಾ ಸಮಾರಂಭದಲ್ಲಿ ಕಾನಿಪ ಧ್ವನಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದಂತ ಈ ಕಾರ್ಯಕ್ರಮದ ಸಾನಿಧ್ಯವನ್ನು ಉಪ್ಪಾರ ಸಮುದಾಯದ ಜಗದ್ಗುರು ಪರಮಪೂಜ್ಯರಾದ ಡಾ.ಶ್ರೀಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳ ಜೊತೆ ಇನ್ನೂ ಮೂರು ಜನ ಮಠಾಧಿಪತಿಗಳು ವಹಿಸಿದಂತ ಈ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಹಾವೇರಿ ಜಿಲ್ಲಾ ಕೆ.ಎಂ.ಎಫ್. ಎಂ.ಡಿ.ಯವರು ಜಿಲ್ಲಾ ಪಂಚಾಯತ್ನ ಉಪ ಕಾರ್ಯದರ್ಶಿಗಳು,ಪುರಸಭೆ ಅಧ್ಯಕ್ಷರು,ಸರ್ಕಾರದ ಮಾಜಿ ಸಚೇತಕರು ಜೊತೆಗೆ ಅನೇಕ ಅಧಿಕಾರಿಗಳು,ಸಾಹಿತಿಗಳು,ಹಿರಿಯ ರಾಜಕಾರಣಿಗಳು ಪತ್ರಕರ್ತರು ಊರಿನ ಬಹುತೇಕ ಸಾರ್ವಜನಿಕರು ಭಾಗವಹಿಸಿದ್ದರು. ಅನೇಕ ಸಾಧಕರಿಗೆ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಸನ್ಮಾನದ ಜೊತೆಗೆ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ರವರಿಗೂ ಉಪ್ಪಾರ ಸಮುದಾಯದ ಜಗದ್ಗುರಗಳಾದ ಡಾ.ಶ್ರೀಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳಿಂದ ಸನ್ನಾನಗೊಂಡಿದ್ದು ವಿಶೇಷ.
ಈ ಅರ್ಥಪೂರ್ಣ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬಂಗ್ಲೆ ಮಲ್ಲಿಕಾರ್ಜುನ ರವರು ಕಡಿಮೆ ಸಂಖ್ಯೆ ಜನಾಂಗ ಹೊಂದಿದ್ದರೂ ತನ್ನ ಕಷ್ಟಾರ್ಜಿತ ಕಾಯಕದೊಂದಿಗೆ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿರುವುದಲ್ಲದೇ ತನಗೆ ಈ ಹಿಂದೆ ಹಾರ್ಟ್ ಅಟ್ಯಾಕ್ ಸಂಭವಿಸಿ ಸ್ಟಂಟ್ ನ್ನು ಹೃದಯದಲ್ಲಿ ಅಳವಡಿಸಿದ್ದರೂ ಕೂಡ ಲೆಕ್ಕಿಸದೇ ಛಲಬಿಡದೆ ಪತ್ರಿಕೋಧ್ಯಮದ ಜೊತೆಗೆ ಸಮಾಜ ಸೇವೆಯನ್ನು ಕೈಗೊಂಡಿರುವುದರ ಫಲವಾಗಿ ಕಳೆದ ಆರು ತಿಂಗಳ ಹಿಂದೆ ನಡೆದ ರಟ್ಟಿಹಳ್ಳಿ ಪುರಸಭೆಯ ಚುನಾವಣೆಯಲ್ಲಿ ಯಾವೊಂದು ಪಕ್ಷವೂ ಟಿಕೆಟ್ ನೀಡದಿದ್ದರೂ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಲಾಡ್ಯ ಕಾಂಗ್ರೇಸ್ ಹಾಗೂ ಬಿ.ಜೆ.ಪಿ. ಅಭ್ಯರ್ಥಿಗಳನ್ನು ಮಣ್ಣುಮುಕ್ಕುಸಿ ವಿಜಯದ ಮಾಲೆಯನ್ನು ರಟ್ಟಿಹಳ್ಳಿಯ ಜನತೆ ಶಿವಕುಮಾರ ರವರಿಗೆ ಹಾಕಿದ್ದು ನಿಜಕ್ಕೂ ನಿಸ್ವಾರ್ಥ ಸೇವೆಗೆ ಸಂದ ಹೃತೂರ್ವಕ ಗೌರವವೇ ಸರಿ. ಇಂಥ ದಿಟ್ಟದೆಯ ನಿಸ್ವಾರ್ಥ ಸೇವೆಯ ಶಿವಕುಮಾರ ಹಾಗೂ ಸಂತೋಷ ಪವಾರ್ ರವರು ನಮ್ಮ ಕಾನಿಪ ಧ್ವನಿಯ ತಾಲೂಕು ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಆಗಿ ಸೇವೆ ಸಲ್ಲಿಸುತ್ತಿರುವುದು ನಿಜಕ್ಕೂ ಅಭಿನಂದನಾರ್ಹವೇ ಸರಿ.