2025-26 ನೇ ಸಾಲಿನ SSLC ಪರೀಕ್ಷೆಯಲ್ಲಿ ಸಾಧನೆ ಗೈದ ವಿದ್ಯಾರ್ಥಿನಿ ಕುಮಾರಿ ಮುತ್ತಕ್ಕಾ ಅಪ್ಪಣ್ಣಾ ನ್ಯಾಮಗೌಡ
ವೀರಮಾರ್ಗ ನ್ಯೂಸ್ : ಬಾಗಲಕೋಟ ಜಿಲ್ಲೆ : ಜಮಖಂಡಿ ತಾಲೂಕಿನ ಮುತ್ತೂರು ಗ್ರಾಮದ ಅಪ್ಪಣ್ಣಾ ಮುತ್ತಣ್ಣ ನ್ಯಾಮಗೌಡ ಮತ್ತು ಶೋಭಾ ಅಪ್ಪಣ್ಣ ನ್ಯಾಮಗೌಡ ಅವರ ರೈತರಾಗಿದರು ಸಹ ಮಕ್ಕಳ ವಿದ್ಯಾಭ್ಯಾಸ ಮಾಡಿಸುವಲ್ಲಿ ಯಾವುದರಲ್ಲಿ ಕಡಿಮೆ ಮಾಡದೆ ಅವರ ಸುಪುತ್ರಿಯನ್ನು 1ನೇ ತರಗತಿಯಿಂದ 7ನೇ ತರಗತಿಯ ವರೆಗೆ ಶ್ರೀ ಪಾರ್ಶ್ವನಾಥ ಶಿಕ್ಷಣ ಸಂಸ್ಥೆ ಮುತ್ತೂರಿನಲ್ಲಿ ವಿದ್ಯಾಭ್ಯಾಸ ಮಾಡಿಸಿ.
ನಂತರ 8ನೇ ತರಗತಿಯಿಂದ 10ನೇ ತರಗತಿಯ ವರೆಗೆ ಸರ್ಕಾರಿ ಫ್ರೌಢ ಶಾಲೆ ಮುತ್ತೂರಿನಲ್ಲಿ ವಿದ್ಯಾಭ್ಯಾಸ ಮಾಡಿಸಿ 2025-26 ನೇ ಸಾಲಿನ SSLC ಪರೀಕ್ಷೆಯಲ್ಲಿ ವಿದ್ಯಾರ್ಥಿನಿ ಕುಮಾರಿ ಮುತ್ತಕ್ಕಾ ಅಪ್ಪಣ್ಣಾ ನ್ಯಾಮಗೌಡ. 625 ಕ್ಕೆ 619 ಅಂಕಗಳನ್ನು ಪಡೆದು ರಾಜ್ಯಕ್ಕೆ 7 ನೇ ಸ್ಥಾನ ಹಾಗೂ ಬಾಗಲಕೋಟೆ ಜಿಲ್ಲೆಗೆ 3 ನೇ ಸ್ಥಾನ ಪಡೆದು ಮುತ್ತೂರು ಗ್ರಾಮದ ಕೀರ್ತಿಯನ್ನು ಹೆಚ್ಚಿಸಿರುತ್ತಾಳೆ.
ಆ ವಿದ್ಯಾರ್ಥಿನಿಗೆ ಅಭಿನಂಧನೆಗಳು ಸಲ್ಲಿಸಿದ ಸರ್ಕಾರಿ ಪ್ರೌಡ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ಗುರುವೃಂದ ಹಲವಾರು ಸಂಘ ಸಂಸ್ಥೆಗಳು.
ವರದಿ : ಅರಿಹಂತ ನ್ಯಾಮಗೌಡ ಜಮಖಂಡಿ