ಮಧ್ಯವರ್ಜನ ಶಿಬಿರದ ಪೂರ್ವಭಾವಿ ಸಭೆ…

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣಿಬೆನ್ನೂರು : ಸಮಾಜ ಎಷ್ಟೇ ಬದಲಾದರೂ ಸಮಾಜದಲ್ಲಿರುವ ಮಧ್ಯ ವ್ಯಸನಿಗಳ ಸಂಖ್ಯೆ ಕಡಿಮೆಯಾಗದೇ ಇರುವುದು ಮಾರಕವಾಗಿ ಪರಿಣಮಿಸುತ್ತಲ್ಲಿದೆ ಎಂದುಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಯೋಜನಾ ನಿರ್ದೇಶಕ ಶಿವರಾಯ ಪ್ರಭು ವಿಷಾದಿಸಿದರು.


ಅವರು ಇಲ್ಲಿನ ಮೇಲೆ ರಸ್ತೆಯ ಯೋಜನೆಯ ಕೇಂದ್ರ ಕಚೇರಿಯಲ್ಲಿ ಆಯೋಜಿಸಲಿರುವ ಮಧ್ಯವರ್ಜನ ಶಿಬಿರದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಸಮಾಜದಲ್ಲಿ ಸಮಾನತೆ ಮತ್ತು ಆರ್ಥಿಕ ಸಮಾನತೆಗೆ ಈ ಮಧ್ಯೆ ವ್ಯಸನಿಗಳಿಂದ ಅನೇಕ ರೀತಿಯಲ್ಲಿ ತೊಂದರೆಯಾಗುತ್ತಲ್ಲಿದೆ. ಇದನ್ನು ಅರ್ಥ ಮಾಡಿಕೊಂಡಿರುವ ಕ್ಷೇತ್ರದ ಧರ್ಮಾಧಿಕಾರಿಗಳು ಮಧ್ಯವ್ಯಸ ನಿಗಳನ್ನು ಸಂಪೂರ್ಣ ಮಧ್ಯದ ವ್ಯಸನದಿಂದ ವಿಮುಕ್ತರಾಗಿಸುವ ಸಂಕಲ್ಪ ತೊಟ್ಟು ಕಾರ್ಯಾರಂಭ ಮಾಡಿದ್ದಾರೆ ಮತ್ತು ಅದರಲ್ಲಿ ಯಶಸ್ವಿ ಕಂಡಿದ್ದಾರೆ ಎಂದರು. ನಗರದಲ್ಲಿ ಈ ಬಾರಿ ಮಧ್ಯವರ್ಜನ ಶಿಬಿರ ಆಯೋಜಿಸಿದ್ದು ಇದು 2060ನೇ ಶಿಬಿರವಾಗಿದೆ ಇದಕ್ಕೆ ಸಮಾಜದಲ್ಲಿರುವ ಪ್ರತಿಯೊಬ್ಬ ನಾಗರಿಕರ ಮಾನಸಿಕ ಸಹಾಯ, ಸಹಕಾರ ಅಗತ್ಯವಾಗಿದೆ ಎಂದರು.

ಅದ್ದೂರಿಯಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡ ಸಾಮಾಜಿಕ ಚಿಂತಕ ಯುವ ನಾಯಕ ಮಂಜುನಾಥ ಗೌಡ ಶಿವಣ್ಣನವರ ಅವರನ್ನು ಮಧ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರನ್ನಾಗಿ ಸಭೆ ಆಯ್ಕೆ ಮಾಡಿ, ಅಭಿನಂದಿಸಿದರು.

ಉಪಾಧ್ಯಕ್ಷರಾಗಿ ಆಯ್ಕೆಯಾದ,ಅಯ್ಯಪ್ಪ ಸ್ವಾಮಿ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಶಿವಕುಮಾರ ಹಿರೇಮಠ,ಸ್ವಾಕರವೇ ಅಧ್ಯಕ್ಷ ನಿತ್ಯಾನಂದ ಕುಂದಾಪುರ, ಸದಸ್ಯರಾದ ಮಾರ್ತಾಂಡಪ್ಪ ನೇಕಾರ, ಚಂದ್ರಶೇಖರ್ ಬಣಕಾರ್, ಸಾವಿತ್ರಿ ಸುರೇಶ್ ಜೋಗಪ್ಪನವರ್, ಎಲಿಗಾರ್, ಪಾಂಡುರಂಗ ಪೂಜಾರ್, ವಿರುಪಾಕ್ಷಪ್ಪ,ನ್ಯಾಯವಾದಿ ಏಕಾಂತ ಮುದಿಗೌಡರ, ಜಿ.ಕೆ. ಗಣೇಶ, ನಿರ್ಮಲಾ ಅಣ್ಣಿಗೇರಿ, ಶಿವಾನಂದ ಸೊಂಡೂರ, ವಿನಯ ಬಾಳನಗೌಡ್ರ ಕೊಟ್ರೇಶಪ್ಪ ಎಮ್ಮಿ ಉಮನ್ ಇಟಗಿ, ಎಲ್ ಸುರೇಶ್ ಜೋಗಪ್ಪನವರ ಅನ್ನಪೂರ್ಣ ಉಮ್ಮಿ,
ಪುಷ್ಪ ಬದಾಮಿ, ಸೇರಿದಂತೆ ಜನ ಜಾಗೃತಿ ಸಮಿತಿಯ ಮುಖಂಡರು ಸೇವಾ ಪ್ರತಿನಿಧಿಗಳು ಸೇವಾ ಪ್ರತಿನಿಧಿಗಳು ಸದಸ್ಯರು ಮತ್ತಿತರರು ಪಾಲ್ಗೊಂಡಿದ್ದರು. ತಾಲೂಕು ಯೋಜನಾಧಿಕಾರಿ ಮಂಜುನಾಥ್ ಗೌಡ ಎಂ ಸ್ವಾಗತಿಸಿ ಉಮೇಶ್ ನಿರೂಪಿಸಿ, ಭಾಸ್ಕರ್ ವಂದಿಸಿದರು.

ಮುಂದಿನ ಸುದ್ದಿ ಕಳ್ಳರ ಕಳ್ಳಾಟ ವೀಕ್ಷಿಸಿ…..

ವಿಷಯ : ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ-2008 ಟ್ರಸ್ಟ್(ರಿ) ಹರಿಹರ ಇದರ ಪದಾಧಿಕಾರಿಗಳ ಉಚ್ಛಾಟನೆ ಮತ್ತು ಟ್ರಸ್ಟಿನ ಮೇಲೆ ಇರುವ ಸಂಘದ ಅಧಿಕಾರದ ಬಗ್ಗೆ.