
ಧರ್ಮ ಪಾಲನೆಯಿಂದ ಬದುಕು ವಿಕಾಸ : ರಂಭಾಪುರಿಶ್ರೀ
ಧರ್ಮ ಪಾಲನೆಯಿಂದ ಬದುಕು ವಿಕಾಸ : ರಂಭಾಪುರಿಶ್ರೀಬ್ಯಾಡಗಿ : ಶಿಕ್ಷಣದಿಂದ ಮನುಷ್ಯನ ಬುದ್ಧಿ ಶಕ್ತಿ ಬೆಳೆಯುತ್ತದೆ. ಧರ್ಮದಿಂದ ಭಾವನೆಗಳು ಬೆಳೆಯುತ್ತವೆ. ಬದುಕಿ ಬಾಳುವ ಮನುಷ್ಯನಿಗೆ ಬುದ್ಧಿ ಶಕ್ತಿ ಮತ್ತು ಭಾವನೆಗಳೆರಡೂ ಮುಖ್ಯ, ಧರ್ಮ ಪರಿಪಾಲನೆಯಿಂದ ಬದುಕು ವಿಕಾಸಗೊಳ್ಳುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ತಾಲೂಕಿನ ಗುಡ್ಡದಮಲ್ಲಾಪುರ ಗ್ರಾಮದಲ್ಲಿ ಶ್ರೀ ಮಲ್ಲಿಕಾರ್ಜುನಸ್ವಾಮಿ ರಥೋತ್ಸವ ಹಾಗೂ ಮೂಕಪ್ಪ ಶ್ರೀಗಳ ತುಲಾಭಾರದ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಮಾನವನ ಬುದ್ಧಿ ಶಕ್ತಿ…