ವೀರಮಾರ್ಗ ನ್ಯೂಸ್ ಶಿಗ್ಗಾವಿ : ಕೆ.ಎಲ್.ಇ. ಸಂಸ್ಥೆ, ಬಡವ, ದೀನದಲಿತ, ಮಧ್ಯಮ ವರ್ಗದ ಜನರಿಗೆ ಕೈಗೆಟುಕುವ ದರದಲ್ಲಿ ಉತ್ತಮ ಆರೋಗ್ಯ ಸೇವೆ ನೀಡಲು ಕೆ.ಎಲ್.ಇ. ಸ್ಟಾಟಲೈಟ್ ಪಾಲಿಕ್ಲಿನಿಕ್ ಆಸ್ಪತ್ರೆಯನ್ನು ಪ್ರಾರಂಭಿಸುತ್ತಿರುವುದಾಗಿ ಕೆ.ಎಲ್.ಇ. ಸಂಸ್ಥೆಯ ಅಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು.
ಪಟ್ಟಣದ ಹನುಮಂತಗೌಡ್ರು ಪಾಟೀಲ ಸಭಾ ಭವನದಲ್ಲಿ, ಕೆ.ಎಲ್.ಇ, ಸ್ಟಾಟಲೈಟ್ ಪಾಲಿಕ್ಲಿನಿಕ್ ಆಸ್ಪತ್ರೆ ಉದ್ಘಾಟನೆ, ಉಚಿತ ವೈದ್ಯಕೀಯ ತಪಾಸಣೆ,ಚಿಕಿತ್ಸಾ ಶಿಬಿರವನ್ನುದ್ದೇಸಿಸಿ ಮಾತನಾಡಿದ ಅವರು, ಈ ಭಾಗದಲ್ಲಿ ಬಹಳ? ಆರೋಗ್ಯ ಸೇವೆಯ ಕೊರತೆ ಇರುವುದರಿಂದ ಆರೋಗ್ಯ ಸೇವೆಯ ಕೊರತೆಯನ್ನು ದೂರ ಮಾಡಲು ಧಾರವಾಡ, ಕಲಘಟಗಿ, ಕೊಪ್ಪಳ, ಶಿಗ್ಗಾವಿಯಲ್ಲಿ ಕೆ.ಎಲ್.ಇ. ವತಿಯಿಂದ ಸ್ಟಾಟಲೈಟ್ ಪಾಲಿಕ್ಲಿನಿಕ್ ಆಸ್ಪತ್ರೆಗಳನ್ನು ಪ್ರಾರಂಭಿಸಲಾಗುತ್ತಿದೆ. ಈ ಮೂಲಕ ಬಡವರಿಗೆ ಅತಿ ಕಡಿಮೆ ದರದಲ್ಲಿ ಉತ್ತಮ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಪ್ರಥಮ ಹೆಜ್ಜೆಯಾಗಿ ಶಿಗ್ಗಾವಿ ಪಟ್ಟಣದಲ್ಲಿ ಮೂರು ಜನ ವೈದ್ಯರೊಂದಿಗೆ ಸ್ಪೆ?ಲಿಸ್ಟ್ ಸ್ಟಾಟಲೈಟ್ ಪಾಲಿಕ್ಲಿನಿಕ್ ಆಸ್ಪತ್ರೆಯನ್ನು ಪ್ರಾರಂಭಿಸಲಾಗಿದ್ದು, ಇಲ್ಲಿ ಎಲ್ಲ ರೀತಿಯ ಆರೋಗ್ಯ ಸೇವೆಗಳನ್ನು ಒದಗಿಸಲಾಗುತ್ತಿದ್ದು, ಇದರ ಸದುಪಯೋಗವನ್ನು ಪಟ್ಟಣದ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ತರು ಪಡೆಯುವಂತೆ ಸೂಚಿಸಿದರು. ಬರುವ ದಿನಗಳಲ್ಲಿ, ಕೊಪ್ಪಳ, ಕಲಘಟಗಿ, ಧಾರವಾಡದಲ್ಲಿ ಈ ಆಸ್ಪತ್ರೆ ವಿಸ್ತರಣೆಗೊಂಡು ಅಲ್ಲಿಯೂ ಸಹ ಉತ್ತಮ ಆರೋಗ್ಯ ಸೇವೆ ಒದಗಿಸುವ ಗುರಿಯನ್ನು ಹೊಂದಲಾಗಿದೆ. ಸ್ಥಳೀಯವಾಗಿ ಗುಣಮಟ್ಟದ ಚಿಕಿತ್ಸೆ ವದಗಿಸಿಯೂ, ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದಲ್ಲಿ ಸಂಸ್ಥೆಯ ವಾಹನ ಮೂಲಕ ಹುಬ್ಬಳ್ಳಿ ಕೆ.ಎಲ್.ಇ. ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಲಾಗುವುದು. ಈಗಾಗಲೇ ಹುಬ್ಬಳ್ಳಿ ಗಬ್ಬೂರು ಬಳಿ ೬೫೦ ಕೋಟಿಗೂ ಹೆಚ್ಹು ಹಣದಿಂದ ಒಂದು ಸಾವಿರ ಹಾಸಿಗೆಯ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಪ್ರಾರಂಭವಾಗಿದ್ದು, ಅಲ್ಲಿಯೂ ಶಿಕ್ಷಣದ ಜೊತೆಗೆ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸಲಾಗುತ್ತಿದೆ. ಬರುವ ದಿನಗಳಲ್ಲಿ ಈ ಸಂಸ್ಥೆಯ ಉದ್ಘಾಟನೆ ನೆರವೇರಲಿದೆ ಎಂದು ಹೇಳಿದರು.

ಹುಬ್ಬಳ್ಳಿ ಸಂಸ್ಥೆ ಚೇರ್ಮನ್ ಡಾ.ಶಂಕ್ರಣ್ಣ ಮುನವಳ್ಳಿ ಮಾತನಾಡಿ, ಕೊರೆಯವರ ನೇತ್ರತ್ವದಲ್ಲಿ ಶಿಕ್ಷಣ, ಅರೋಗ್ಯ ಸೇವೆಯ ಜೊತೆಗೆ ಜನಪರ ಕಾರ್ಯಕ್ರಮಗಳನ್ನು ಮಾಡುವ ಮುಖಾಂತರ ಜನರ ಅವಶ್ಯಕತೆ ಅನುಗುಣವಾಗಿ, ಸಂಸ್ಥೆ ಕೆಲಸ ಮಾಡುತ್ತಿದ್ದು, ಸ್ಪರ್ಧಾತ್ಮಕ ಯುಗದಲ್ಲಿ ಜನರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಸಂಸ್ಥೆ ಸ್ಟಾಟಲೈಟ್ ಕ್ಲಿನಿಕ್ ಪ್ರಾರಂಭಿಸುವ ಮೂಲಕ ಆರೋಗ್ಯ ಸೇವೆಯನ್ನು ನೀಡಲು ಬದ್ದವಾಗಿದೆ ಎಂದು ಹೇಳಿದರು.
ಪುರಸಭೆ ಅಧ್ಯಕ್ಷ ಸಿದ್ಧಾರ್ಥಗೌಡ ಪಾಟೀಲ, ಟಿ.ವಿ. ಸುರಗೀಮಠ, ಭರಮಜ್ಞ ನವಲಗುಂದ, ಜಯಣ್ಣ ಹೆಸರೂರ, ಪ್ರೊ. ನಿತಿನ್ ಗಂಗಾನೆ, ಡಾ. ವಿ.ಡಿ. ಪಾಟೀಲ, ಡಾ.ಅರುಣಕುಮಾರ, ಡಾ.ಎಮ್ ಸಿ ಕೊಳ್ಳಿ, ಡಾ.ಎಮ್ ಜಿ ಹೀರೆಮಠ, ಡಾ.ಪಿ ಆರ್ ಪಾಟೀಲ, ಡಾ.ಬಸವರಾಜ ಸಜ್ಜನ, ಸೇರಿದಂತೆ ಇತರರು ಉಪಸ್ಥಿತರಿದ್ದರು.