ಶಿವಯೋಗ ಮಂದಿರವನ್ನು ಸ್ಥಾಪಿಸಿದ ಕೀರ್ತಿ ಶ್ರೀ ಕುಮಾರ ಶಿವಯೋಗಿಗಳಿಗೆ ಸಲ್ಲುತ್ತದೆ: ಚನ್ನಬಸವಶ್ರೀ

ವೀರಮಾರ್ಗ ನ್ಯೂಸ್ ಶಿಗ್ಗಾವಿ : ಸಿಂಧಗಿ ಶಾಂತವೀರ ಮಹಾಸ್ವಾಮಿಗಳು, ಹಾನಗಲ್ ಶ್ರೀ ಗುರು ಕುಮಾರ ಶಿವಯೋಗಿಗಳು ನಾಡಿನಾಧ್ಯಂತ ಸಂಚರಿಸಿ ಧರ್ಮಭೋದನೆ ಮಾಡುವಮೂಲಕ ಭಕ್ತಸಮೂಹವನ್ನು ಧರ್ಮದ ದಾರಿಯಲ್ಲಿ ನಡೆಯುವಂತೆ ಮಾಡಿದ್ದಾರೆ ಎಂದು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಶ್ರೀ ಚನ್ನಬಸವ ಮಹಾಸ್ವಾಮಿಗಳು ನುಡಿದರು.
ತಾಲೂಕಿನ ಹೋತನಹಳ್ಳಿ ಗ್ರಾಮದ ಸಿಂಧಗಿಮಠದಲ್ಲಿ ನಡೆದ ಲಿಂ.ಶಾಂತವೀರ ಮಹಾಸ್ವಾಮಿಗಳವರ 45ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮವನ್ನುದ್ದೇಸಿಸಿ ಆಶೀರ್ವಚನ ನೀಡಿದ ಶ್ರೀಗಳು, ಮುಲ್ಕಿ ಪರೀಕ್ಷೆಯಲ್ಲಿ ಪೇಲಾದ ಶ್ರೀ ಕುಮಾರ ಶಿವಯೋಗಿಗಳು, ಸಿದ್ಧಾರೂಢರ ಮಠದಲ್ಲಿ ಬೆಳೆದು, ಹಾನಗಲ್ ಮಠದ ಪೀಠಾಧಿಪತಿಗಳಾಗಿ 1904ರಲ್ಲಿ ಅಖಂಡ ವೀರಶೈವ ಮಹಾಸಭಾ ನಿರ್ಮಾಣಮಾಡುವಮೂಕ 1909ರಲ್ಲಿ ಶಿವಯೋಗ ಮಂದಿರವನ್ನು ಸ್ಥಾಪನೆಮಾಡಿ, ಧರ್ಮ ಭೋದನೆಮಾಡುವ ಸ್ವಾಮೀಜಿಗಳನ್ನು ನಿರ್ಮಾಣ ಮಾಡುತ್ತಿರುವ ಶ್ರೇಯಸ್ಸು ಶ್ರೀ ಗುರು ಕುಮಾರ ಶಿವಯೋಗಿಗಳಿಗೆ ಸಲ್ಲುತ್ತದೆ ಎಂದು ಹೇಳಿದರು.

ಹೋತನಹಳ್ಳಿ ಸಿಂಧಗಿಮಠದ ಶ್ರೀ ಶಂಭುಲಿಂಗ ಮಹಾ ಸ್ವಾಮಿಗಳು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀ ಶಾಂತವೀರ ಮಹಾಸ್ವಾಮಿಗಳು ನಾಡುಕಂಡ ಶ್ರೇಷ್ಠ ಸ್ವಾಮೀಜಿಗಳಲ್ಲಿ ಒಬ್ಬರಾಗಿದ್ದರು. ಅವರ ಆದರ್ಶ ಗುಣಗಳು, ಅವರು ಹಾಕಿಕೊಟ್ಟ ದಾರಿ ಇಂದಿಗೂ ಭಕ್ತಸಮೂಹಕ್ಕೆ ಪ್ರೇರಣೆಯಾಗಿವೆ ಎಂದು ಹೇಳಿದರು.
ಶಂಕ್ರಯ್ಯ ಶಾಸ್ತ್ರೀಜಿ, ಅಮರೇಶ ಗವಾಯಿ, ಮಲ್ಲೇಶ ಮದಲಾಪುರ ಇವರಿಂದ ಸಂಗೀತ ಸೇವೆ ನಡೆಯಿತು.
ಚಂದ್ರಪ್ಪ ಬೆಳವತ್ತಿ, ಹನಮಂತಪ್ಪ ಯು.ವಿ, ಫಕ್ಕೀರಯ್ಯ ಹಿರೇಮಠ, ಮಲ್ಲಪ್ಪ ಮನ್ನಂಗಿ, ಹಾಲಯ್ಯ ಕರಿಮಾಳಿಮಠ, ಎಲ್ಲಪ್ಪ ನಾಗರವಳ್ಳಿ, ದ್ಯಾಮಣ್ಣ ಸವಣೂರ, ವೀರಭದ್ರಪ್ಪ ಹುಣಸೀಕಟ್ಟಿ, ಈರಪ್ಪ ನೆಲ್ಲಿಬೀಡ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *