ನಾಳೆ ಸಮಾನತೆ ರಥಯಾತ್ರೆ-ಸಮಾನತೆ ಬುತ್ತಿ ಪೂರ್ವಭಾವಿ ಸಭೆ

ವೀರಮಾರ್ಗ ನ್ಯೂಸ್ ಗದಗ : ರಾಮಮಂದಿರ ನಿರ್ಮಾಣ ಭಾರತ ದೇಶದ ಬಹುಸಂಖ್ಯಾತ ಹಿಂದೂಗಳ ಬಹು ವರ್ಷಗಳ ಬೇಡಿಕೆಯಾಗಿತ್ತು. ಜನೇವರಿ 22, 2024ರಂದು ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಗೊಂಡು ಈಗಾಗಲೇ ಇತಿಹಾಸದ ಪುಟಗಳಲ್ಲಿ ಸೇರಿಯಾಗಿದೆ. ವ್ಯಕ್ತಿತ್ವ, ಆದರ್ಶಗಳ ಸಾಕ್ಷಿಯಾಗಿ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆಯಾಗಿದ್ದಾನೆ. ಅದರಂತೆ ವಿಶ್ವಗುರು ಬಸವಣ್ಣನವರು, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಹಲವು ಮಹಾನ್ ವ್ಯಕ್ತಿಗಳು ಸಮಾಜಕ್ಕೆ ಸಮಾನತೆಯ ಸಂದೇಶ ಸಾರಿದ್ದಾರೆ.

ಸಮಾನತೆಯ ಸಂದೇಶ ನೀಡಿ ನೂರಾರು ವರ್ಷಗಳೇ ಕಳೆದ್ರೂ ಇನ್ನೂವರೆಗೂ ಸಮಾಜದಲ್ಲಿ ಅಸಮಾನತೆ ಇದೆ. ಹೀಗಾಗಿಯೇ ಲೋಕಕ್ಕೆಲ್ಲಾ ಮತ್ತಷ್ಟು ಪರಿಣಾಮಕಾರಿಯಾಗಿ ಸಮಾನತೆಯ ಸಂದೇಶ ಸಾರಬೇಕೆಂಬ ಸದುದ್ದೇಶದಿಂದ ’ಸಮಾನತೆ ಮಂದಿರ’ ನಿರ್ಮಾಣಕ್ಕೆ ಸಂಕಲ್ಪ ತೊಡಲಾಗಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಇಂತಹದ್ದೊಂದು ವಿಶಿಷ್ಟ ಯೋಚನೆ, ಯೋಜನೆಗೆ ಅಖಿಲ ಭಾರತ ಸಮಾನತೆ ಮಂದಿರ ಪ್ರತಿಷ್ಠಾಪನೆ ಮಹಾಸಭಾ ಮುಂದಾಗಿದೆ. ಇದರ ಭಾಗವಾಗಿ ಮಹಾನ್ ಮಾನವತಾವಾದಿ ಬಾಬಾಸಾಹೇಬ್ ಅಂಬೇಡ್ಕರ್‌ರವರ ಜನ್ಮದಿನವಾದ ಏಪ್ರಿಲ್ 14ರಿಂದ ಬಸವ ಜಯಂತಿವರೆಗೆ ಸಮಾನತೆ ರಥಯಾತ್ರೆ, ಸಮಾನತೆ ಬುತ್ತಿ ಕಾರ್ಯಕ್ರಮ ಗದಗ ಜಿಲ್ಲೆಯಾದ್ಯಂತ ಸಂಚರಿಸಲಿದೆ. ರಾಮ, ಭೀಮ, ಬುದ್ಧ, ಬಸವ, ಕನಕದಾಸರು, ವಾಲ್ಮೀಕಿ, ಸಂತ ಶರೀಫರು ಹೀಗೆ ಅನೇಕ ಮಹನೀಯರ ತತ್ವ, ಆದರ್ಶಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಇದರ ಪೂರ್ವಭಾವಿ ಸಭೆಯು ಮಾ.30ರಂದು ಮಧ್ಯಾಹ್ನ 2 ಗಂಟೆಗೆ ಗದಗ ನಗರದಲ್ಲಿರುವ ಅನೀಲ್ ಮೆಣಸಿನಕಾಯಿ ಅವರ ನಿವಾಸದಲ್ಲಿ ಜರುಗಲಿದೆ. ತಮ್ಮ ಸಲಹೆ, ಸಹಕಾರ ತುಂಬಾ ಮುಖ್ಯಾವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ತಾವೆಲ್ಲರೂ ಪಾಲ್ಗೊಳ್ಳಬೇಕು. ಜೊತೆಗೆ ಸಮಾನತೆ ಮಂದಿರಕ್ಕೆ ಕೈ ಜೋಡಿಸಬೇಕೆಂದು ಮನವಿ.
ದಿ.30.03.2025 ರಂದು ಮಧ್ಯಾಹ್ನ 2 ಘಂಟೆಗೆ ಅನೀಲ ಪಿ. ಮೆಣಸಿನಕಾಯಿ ಅವರ ನಿವಾಸದ ಹತ್ತಿರ ಕರೆಯಲಾಗಿದೆ ಎಂದು ಅಖಿಲ ಭಾರತ ಸಮಾನತೆ ಮಂದಿರ ಪ್ರತಿಷ್ಠಾಪನೆ ಮಹಾಸಭಾ ಸದಸ್ಯ ಪರಮೇಶ ನಾಯಕ ಪ್ರಕಟಣೆಯಲ್ಲ ತಿಳಿಸಿದ್ದಾರೆ.

Leave a Reply

Your email address will not be published. Required fields are marked *