ಮನುಷ್ಯ ಪರಿಸರದ ಶಿಶು : ಡಾ. ತೋಂಟದ ಸಿದ್ಧರಾಮಶ್ರೀಗಳು

ವೀರಮಾರ್ಗ ನ್ಯೂಸ್ ಗದಗ: ಪರಿಸರ ಜನಜೀವನದ ಮೇಲೆ ಅಗಾಧವಾದ ಪರಿಣಾಮ ಬೀರುತ್ತದೆ. ಪರಿಸರ ಕಲುಷಿತಗೊಂಡರೆ, ಮನುಷ್ಯನ ಮನುಸ್ಸು ಕಲುಷಿತವಾಗುವುದು. ಮನುಷ್ಯ ಪರಿಸರದ ಶಿಶು ಎಂದು ಡಾ. ತೋಂಟದ ಸಿದ್ದರಾಮ ಮಹಾಸ್ವಾಮೀಜಿ ಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂಘದ 2738 ನೆಯ ಶಿವಾನುಭವದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ನೀರು ಜೀವಜಲ. ಜೀವನಾಧಾರ. ಪ್ರಸ್ತುತ ನೀರು ಮಲಿನವಾಗುತ್ತಿದೆ. ಮಲಿನವಾದ ನೀರು ಹೊಳೆ ಹಳ್ಳಗಳಿಗೆ ಸೇರುತ್ತಿದೆ. ಇದಕ್ಕೆಲ್ಲಾ ಕಾರ್ಖಾನೆಗಳು ಕಾರಣ. ಉದ್ದಿಮೆದಾರರು ಮಲಿನವಾದ ನೀರನ್ನು ಸಂಸ್ಕರಿಸಿ ನದಿಗಳಿಗೆ ಬಿಡಬೇಕು. ಆದರೆ ಅದು ಆಗುತ್ತಿಲ್ಲ. ನೀರಿನ ಮಿತವ್ಯಯ ಬಳಕೆ ಅವಶ್ಯವಾಗಿದೆ. ನೀರಿನ ಸಂಗ್ರಹಣೆ ಹೆಚ್ಚಬೇಕು. ಅಂತರ್ಜಲ ಕುಸಿಯುತ್ತಿದೆ. ಗಿಡಮರಗಳನ್ನು ಬೆಳೆಸಬೇಕು. ಅವುಗಳು ಇಂಗಾಲದ ಡೈಆಕ್ಸೈಡ್‌ನ್ನು ಹೀರಿ, ಆಮ್ಲಜನಕ ಬಿಡುತ್ತವೆ. ಆಮ್ಲಜನಕ ಬದುಕಿನ ಭರವಸೆ ಎಂದು ಶ್ರೀಗಳು ಮಾತನಾಡಿದರು.
ಉಪನ್ಯಾಸಕರಾಗಿ ಆಗಮಿಸಿದ ಸುರೇಶ ವೀ. ಕುಂಬಾರ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಗದಗ ಇವರು ಮಾತನಾಡಿ, ನೀರು ಜೀವನದ ಮೇಲೆ ಅಗಾಧವಾದ ಪರಿಣಾಮವನ್ನು ಬೀರುತ್ತದೆ. ನೀರಿಲ್ಲದೆ ಬದುಕಿಲ್ಲ, ಬದುಕೆ ನೀರು. ನೀರೆ ಬದುಕು. ನೀರಿನ ಸಂಗ್ರಹಣೆ ಮಾಡಬೇಕು. ಕೆರೆ ಹಳ್ಳ ಭಾವಿಗಳು ತುಂಬಿ ಹರಿಯಬೇಕು. ನೀರಿದ್ದರೆ ಎಲ್ಲೆಲ್ಲೂ ಹಸಿರು. ಆದ್ದರಿಂದ ನೀರನ್ನು ಸಂಗ್ರಹಣೆ ಮಾಡಬೇಕು. ಮಳೆ ನೀರು ಕೊಯ್ಲು ಎಲ್ಲರೂ ಮಾಡಬೇಕು ಎಂದರು. ಶುದ್ದ ನೀರು ಎಲ್ಲರಿಗೂ ಸಿಗಬೇಕು. ಆರೋಗ್ಯವಾಗಿರಲು ನೀರು ಅತೀ ಅವಶ್ಯಕ ಎಂದು ತಮ್ಮ ಚೀನಾ, ಇಸ್ರೇಲ್ ಪ್ರವಾಸದ ಅನುಭವವನ್ನು ಮನಮುಟ್ಟುವಂತೆ ತಿಳಿಸಿದರು. ರೈತರು ನೀರನ್ನು ಹೇಗೆ ಸಂಗ್ರಹಣೆ ಮಾಡಬೇಕು. ಕೃಷಿ ಪದ್ದತಿಯನ್ನು ಹೇಗೆ ಲಾಭದಾಯಕ ಮಾಡಿಕೊಳ್ಳಬಹುದು ಎಂಬುದನ್ನು ತಿಳಿಸಿಕೊಟ್ಟರು.

ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ಮತ್ತು ಅಶೋಕ್ ಸುತಾರ ಸಂಗೀತ ಸೇವೆ ನೇರವೇರಿಸಿದರು. ಧಾರ್ಮಿಕ ಗ್ರಂಥ ಪಠಣವನ್ನು ಅನುಪಮಾ ಎ.ಬೆಟಗೇರಿ ಹಾಗೂ ವಚನ ಚಿಂತನ ಧನು? .ಎಂ. ವೀರಶೆಟ್ಟರ ನಡೆಸಿದರು. ದಾಸೋಹ ಸೇವೆಯನ್ನು ಬಸಯ್ಯ ಚನ್ನಬಸಯ್ಯ ಮಠದ ಸಾ.ಬ್ಬಳ್ಳಿ ಇವರು ವಹಿಸಿದ್ದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ.ಉಮೇಶ ಪುರದ, ವಿದ್ಯಾ ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮನಾಥ ಪುರಾಣಿಕ, ನಾಗರಾಜ್ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ್ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿಯ ಸಹಚೇರ್ಮನ್ ಶಿವಾನಂದ ಹೊಂಬಳ ಮಠದ ಭಕ್ತರು ಉಪಸ್ಥಿತರಿದ್ದರು. ಶಿವಾನುಭವ ಸಮಿತಿಯ ಚೇರ್ಮನ್ ಐ.ಬಿ. ಬೆನಕೊಪ್ಪ ಸ್ವಾಗತಿಸಿದರು. ಶ್ರೀಮತಿ ವಿದ್ಯಾ ಪ್ರಭು ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *