ಶಿಗ್ಗಾಂವಿ ಪುರಸಭೆ 2025-26ನೇ ಸಾಲಿನ 22.50 ಲಕ್ಷಗಳ ಉಳಿತಾಯ ಬಜೆಟ್

ವೀರಮಾರ್ಗ ನ್ಯೂಸ್ ಶಿಗ್ಗಾವಿ : ಪಟ್ಟಣದ ಪುರಸಭೆ ಅಧ್ಯಕ್ಷ ಸಿದ್ಧಾರ್ಥಗೌಡ ಪಾಟೀಲ ರವರು 2025-26ನೇ ಸಾಲಿನ 22.50 ಲಕ್ಷಗಳ ಉಳಿತಾಯ ಬಜೆಟ್‌ನ್ನು ಗುರುವಾರ ಮಂಡಿಸಿದರು.
2,677.25 ಲಕ್ಷಗಳ ಆದಾಯವನ್ನು ನಿರೀಕ್ಷಿಸಿ, 2654.75 ಲಕ್ಷ ವೆಚ್ಚವನ್ನು ಅಂದಾಜಿಸಿ, 22.50 ಲಕ್ಷಗಳ ಉಳಿತಾಯ ಬಜೆಟ್‌ನ್ನು ಪುರಸಭೆಯಲ್ಲಿ ಮಂಡಿಸಿದರು. ರಾಜಸ್ವ ಖಾತೆಯಲ್ಲಿ 1,053.35 ಲಕ್ಷಗಳನ್ನು, ಬಂಡವಾಳ ಖಾತೆಯಲ್ಲಿ 2,303 ಹಾಗೂ ಅಸಾಧಾರಣ ಖಾತೆಯಲ್ಲಿ 321.90 ಲಕ್ಷಗಳೊಂದಿಗೆ 2677.25 ಲಕ್ಷಗಳ ಸ್ವೀಕೃತಿಯನ್ನು ನಿರೀಕ್ಷಿಸಲಾಗಿದೆ. ಅದೇ ರೀತಿ ರಾಜಸ್ವ ಖಾತೆಯಲ್ಲಿ 924.65 ಲಕ್ಷ ವೆಚ್ಚ. ಬಂಡವಾಳ ಖಾತೆಯಲ್ಲಿ ಆಸ್ತಿ ನಿರ್ಮಾಣಕ್ಕಾಗಿ 1,408.20 ಲಕ್ಷಗಳನ್ನು ವೆಚ್ಚಕ್ಕಾಗಿ ಮೀಸಲಿರಿಸಿ, ಅಸಧಾರಣ ಖಾತೆಯಲ್ಲಿ 321.90 ಲಕ್ಷ ವೆಚ್ಚವನ್ನು ನಿರೀಕ್ಷಿಸಲಾಗಿದೆ ಎಂದು ಹೇಳಿದರು.
ರಾಜಸ್ವ ಆದಾಯ ಮತ್ತು ಬಂಡವಾಳ ಆದಾಯಗಳಲ್ಲಿ ಮುಖ್ಯವಾಗಿ ಸರಕಾರದಿಂದ ಮುಕ್ತ ನಿಧಿ ಅನುದಾನ 100 ಲಕ್ಷ, 15 ನೇ ಹಣಕಾಸು ಯೋಜನೆಯಲ್ಲಿ 250 ಲಕ್ಷ ಅನುದಾನ, ವಿಶೇ? ಅನುದಾನ 1,000 ಲಕ್ಷ, ವೇತನ ಅನುದಾನ 310 ಲಕ್ಷ, ವಿದ್ಯುತ್ ಶಕ್ತಿ ಅನುದಾನದಿಂದ 250 ಲಕ್ಷ, ಹಾಗೂ ನೀರು ಸರಬರಾಜು ವ್ಯವಸ್ಥೆಗಾಗಿ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ 10 ಲಕ್ಷಗಳನ್ನು ನಿರೀಕ್ಷಿಸಲಾಗಿದ್ದು. ಅದೇ ರೀತಿಯಾಗಿ ಆಸ್ತಿ ತೆರಿಗೆ ಆದಾಯದಿಂದ 125 ಲಕ್ಷ, ಅಭಿವೃದ್ಧಿ ಮತ್ತು ಕಟ್ಟಡದ ಅನುಮತಿ ಶುಲ್ಕದಿಂದ 45 ಲಕ್ಷ, ವಾಣಿಜ್ಯ ಸಂಕೀರ್ಣಗಳ ಬಾಡಿಗೆಯಿಂದ 18 ಲಕ್ಷ, ಅಂಗಡಿಗಳ ಲೈಸೆನ್ಸ್ 8 ಲಕ್ಷ, ಮಾರುಕಟ್ಟೆ ಶುಲ್ಕದಿಂದ 15 ಲಕ್ಷ, ಘನ ತ್ಯಾಜ್ಯ ನಿರ್ವಹಣೆ ಸುಲ್ಕದಿಂದ 12 ಲಕ್ಷ, ನೀರು ಸರಬರಾಜು 70ಲಕ್ಷ, ಉತಾರ, ಖಾತಾ ಬದಲಾವಣೆ ಇತ್ಯಾದಿಗಳಿಂದ 24.50 ಲಕ್ಷಗಳ ಆದಾಯವನ್ನು ನಿರೀಕ್ಷಿಸಲಾಗಿದೆ ಎಂದರು.

ಪಟ್ಟಣದ ರಸ್ತೆಗಳ ನಿರ್ವಹಣೆ ಸೇರಿದಂತೆ ಕಚೇರಿ ಕಟ್ಟಡ ನಿರ್ಮಾಣಕ್ಕಾಗಿ 100 ಲಕ್ಷ, ಹೊಸ ರಸ್ತೆ ನಿರ್ಮಾಣಕ್ಕಾಗಿ 250 ಲಕ್ಷ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 240 ಲಕ್ಷ, ಹೊಸ ಚರಂಡಿ ನಿರ್ಮಾಣಕ್ಕಾಗಿ 180 ಲಕ್ಷ, ಸಿಬ್ಬಂದಿ ವರ್ಗದ ವೇತನ ಹಾಗೂ ಕಲ್ಯಾಣ ವೆಚ್ಚಕ್ಕಾಗಿ 310 ಲಕ್ಷ, ಪೌರ ಕಾರ್ಮಿಕರ ಉಪಹಾರದ ವೆಚ್ಚ 7.10 ಲಕ್ಷ, ಪ್ರಿಂಟಿಂಗ್ ಸ್ಟೇ?ನರಿಗಾಗಿ 18 ಲಕ್ಷ, ಆಡಳಿತ ಮಂಡಳಿಯ ಗೌರವಧನ 5.50 ಲಕ್ಷ, ಸಿಬ್ಬಂದಿಯ ಅಧ್ಯಯನ ಪ್ರವಾಸಕ್ಕಾಗಿ 15 ಲಕ್ಷ, ವಾಹನಗಳ ದುರಸ್ತಿ ಗಾಗಿ 12.55 ಲಕ್ಷ, ವಾಹನಗಳ ಇಂದನಕ್ಕಾಗಿ 20 ಲಕ್ಷ, ಕಾನೂನು ವೆಚ್ಚ 2.85ಲಕ್ಷ, ಸಮಲೋಚನ 5 ಲಕ್ಷ, ಜಾಹೀರಾತು ಹಾಗೂ ಪ್ರಚಾರಕ್ಕಾಗಿ 10 ಲಕ್ಷ, ಸಂಪರ್ಕ ವೆಚ್ಚಕ್ಕಾಗಿ 5.50 ಲಕ್ಷ, ಹೊರಗುತ್ತಿಗೆ ಕಾರ್ಮಿಕರ ವೇತನ 65 ಲಕ್ಷ ಹಣವನ್ನು ಕಾಯ್ದಿರಿಸಲಾಗಿದೆ.
ಪಟ್ಟಣದ ಬೀದಿ ದೀಪ ನಿರ್ವಹಣೆ ಮತ್ತು ಹೊಸ ಬಡಾವಣೆಗಳಿಗೆ ಬಿದಿ ದೀಪದ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ 150 ಲಕ್ಷ, ಘಣತ್ಯಾಜ್ಯ ನಿರ್ವಹಣೆ 100 ಲಕ್ಷ, ಪಟ್ಟಣದಲ್ಲಿ ನೀರು ಸರಬರಾಜು ವಿತರಣಾ ವ್ಯವಸ್ಥೆಯನ್ನು ವಿಸ್ತರಿಸಲು 160 ಲಕ್ಷ, ಬೀದಿ ದೀಪಗಳ ವಿದ್ಯುತ್ ಶುಲ್ಕ ಪಾವತಿಸಲು 250 ಲಕ್ಷ, ಪಟ್ಟಣದ ಸೌಂದರ್ಯ ಹೆಚ್ಚಿಸುವ ವಿವಿಧ ಕಾರ್ಯಕ್ರಮಕ್ಕಾಗಿ 6.55 ಲಕ್ಷ, ಕೆರೆಗಳ ಅಭಿವೃದ್ಧಿಗಾಗಿ 140 ಲಕ್ಷ ವೆಚ್ಚವನ್ನು ಹೊಂದಲಾಗಿದೆ. ಹಿಂದುಳಿದ ವರ್ಗದ ಹಾಗೂ ವಿಶೇ? ಚೇತನವುಳ್ಳವರ ಆರ್ಥಿಕ ಸ್ವಾವಲಂಬನೆ ಹಾಗೂ ಅಭಿವೃದ್ಧಿಗಾಗಿ ೬.೧೩ ಲಕ್ಷಗಳನ್ನು ವ್ಯಯಿಸುವ ಗುರಿ ಹೊಂದಲಾಗಿದೆ ಎಂದು ಅವರ ಸುದೀರ್ಘ ಬಜೆಟ್ ಭಾ?ಣದಲ್ಲಿ ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಮಲ್ಲೇಶ್ ಆರ್, ಸ್ಥಾಯಿ ಸಮಿತಿ ಅಧ್ಯಕ್ಷೆ ಜ್ಯೋತಿ ನಡೂರ, ಸುಭಾಸ ಚವ್ಹಾಣ, ಶ್ರೀಕಾಂತ ಬುಳ್ಳಕ್ಕನವರ, ದಯಾನಂದ ಅಕ್ಕಿ, ಪರಶುರಾಮ ಸೊನ್ನದ, ಮಂಜುನಾಥ ಬ್ಯಾಹಟ್ಟಿ, ಗೌಸಖಾನ ಮುನಸಿ, ಜಾಫರಖಾನ ಪಠಾಣ, ರೂಪಾ ಬನ್ನಿಕೊಪ್ಪ, ಶೇಖವ್ವ ವಡ್ಡರ, ವಸಂತಾ ಬಾಗೂರ, ಸಂಗೀತಾ ವಾಲ್ಮೀಕಿ, ಸುಲೇಮಾನಬಾ? ತರ್ಲಘಟ್ಟ, ಮುಸ್ತಾಕಅಹ್ಮದ ತಹಶೀಲ್ದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *