ಮಾನವ ಸಂಪನ್ಮೂಲ ಒದಗಿಸಲು ತಾಂತ್ರಿಕ ಶಿಕ್ಷಣ ಇಲಾಖೆ ಬದ್ದ : ಡಾ. ಮುನಿರಾಜು

ವೀರಮಾರ್ಗ ನ್ಯೂಸ್ ಶಿಗ್ಗಾವಿ : ಉಧ್ಯಮ, ವ್ಯವಹಾರ, ಸಮೂದಾಯಕ್ಕೆ ಅಗತ್ಯವಾದ ಮಾನವ ಸಂಪನ್ಮೂಲ ಒದಗಿಸಲು ತಾಂತ್ರಿಕ ಶಿಕ್ಷಣ ಇಲಾಖೆ ಬದ್ದವಾಗಿದ್ದು, ವಿದ್ಯಾರ್ಥಿಗಳು ಶ್ರಮವಹಿಸಿ ಅಧ್ಯಯನ ಮಾಡಿ ಉನ್ನತ ಸ್ಥಾನ ಪಡೆಯುವಂತೆ ಹಾವೇರಿ ಇಂಜನೀಯರಿಂಗ ಕಾಲೇಜ್ ಪ್ರಾಚಾರ್ಯ ಡಾ. ಮುನಿರಾಜು ಎಂ. ಹೇಳಿದರು.
ತಾಲೂಕಿನ ಗುಡ್ಡದಚನ್ನಾಪುರದ ಶ್ರೀ ಚನ್ನಕೇಶವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದ ಪ್ರೇರಣಾ ಮೆಂಟರ್ ಶಿಫ್ ಘಟಕಗಳ ಸಮಾರೋಪ ಸಭೆಯನ್ನುದ್ದೇಸಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶಿಸ್ತುಬದ್ದ ಜೀವನ ಶೈಲಿಯನ್ನು ಅಳವಡಿಸಿಕೊಂಡು ನಡೆದಾಗ ಉನ್ನತ ಹುದ್ದೆಯನ್ನು ಅಲಂಕರಿಸಬಹುದಾಗಿದೆ ಎಂದು ಹೇಳಿದರು.
ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ರಮೇಶ ತೆವರಿ ಮಾತನಾಡಿ, ವಿದ್ಯಾರ್ಥಿಜೀವನದಲ್ಲಿ ಸಮಯದೊಂದಿಗೆ ಹೆಜ್ಜೆಹಾಕುವ ವಿದ್ಯಾರ್ಥಿಗಳು ಮಾತ್ರ ಜೀವನದಲ್ಲಿ ಯಶಸ್ಸನ್ನು ಕಾಣಲು ಸಾದ್ಯವಿದೆ. ಬದಲಾದ ಶಿಕ್ಷಣ ವ್ಯವಸ್ಥೆಯೊಂದಿಗೆ ಕೌಶಲ್ಯವನ್ನು ಪಡೆದು, ಸ್ವಯಂ ಉದ್ಯೋಗವನ್ನು ಪ್ರಾರಮಭಿಸುವಮೂಲಕ ಉಧ್ಯಮಿಗಳಾಗಿ ಹೊರಹೊಮ್ಮುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾಲೇಜಿನ ಪ್ರಾಚಾರ್ಯ ಹೇಮಂತಕುಮಾರ ಮಾತನಾಡಿ ನಮ್ಮ ಕಾಲೇಜಿನ ವಿವಿಧ ವಿಭಾಗಗಳಲ್ಲಿ ವ್ಯಾಸಂಗಮಾಡಿದ ವಿದ್ಯಾರ್ಥಿಗಳು ವಿವಿಧ ಇಲಾಖೆ, ಕಾರ್ಯಕ್ಷೇತ್ರಗಳಲ್ಲಿ ಕೇಲಸ ಮಾಡುವಮೂಲಕ ನಮ್ಮ ಕಾಲೇಜಿನ ಕೀರ್ತಿಯನ್ನು ನಾಡಿನಾಧ್ಯಂತ ಪಸರಿಸಿದ್ದಾರೆ. ವಿದ್ಯಾರ್ಥಿಗಳು ಆತ್ಮಸ್ಥೈರ್ಯದಿಂದ ಗುರುಗಳ ಮಾರ್ಗದರ್ಶನ ಪಡೆದು ಶ್ರಮವಹಿಸಿ ಅಧ್ಯಯನಮಾಡಿದಾಗ ಮುಂದಿನ ಜೀವನ ಉಜ್ವಲವಾಗಲಿದೆ ಎಂದು ಹೇಳಿದರು.
ಬೆಂಗಳೂರಿನ ಎಮ್.ಎನ್.ಸಿ, ಕಂಪನಿಯಲ್ಲಿ 16 ವಾರಗಳಕಾಲ ಇಂಟರ್ನಶಿಪ್ ತರಬೇತಿ ಮುಗಿಸಿಕೊಂಡು ಬಂದ ಸಿವಿಲ್ ವಿಭಾಗದ ವಿದ್ಯಾರ್ಥಿನಿಯರಾದ ಯಮುನಾ ಹಾಗು ಸಂಗೀತಾ ತಮ್ಮ ತರಬೇತಿಯ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡು, ಕಾಲೇಜಿನ ಪ್ರಾಚಾರ್ಯ, ಉಪನ್ಯಾಸಕರ ಪ್ರೋತ್ಸಾಹವನ್ನು ಸ್ಮರೀಸಿದರು.
ಉಪನ್ಯಾಸಕರಾದ ಶಾತಾಜಬೇಗಂ, ಸಿದ್ದಲಿಂಗಪ್ಪ ಕರಿಯಣ್ಣನವರ, ರಾಮಲಿಂಗೇಶ ಪ್ಯಾಟಿ, ಜ್ಯೋತಿ ಸಪ್ಪಂಡಿ, ವೀಣಾ ಹಂಜಿ, ಪ್ರವೀಣಕುಮಾರ, ಶಿಲ್ಫಾ, ಮಮತಾ, ತುಳಜಾ, ಜಬಿನಾಭಾನು, ರೇಖಾ, ರಾಜೇಶ್ವರಿ, ಶಬನಮ್, ನಾಗರಾಜ, ಸೋಮಶೇಖರ ಸೇರಿದಂತೆ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *